ಡಿಕೆಶಿಗೆ ಬೇಲ್: 'ನಂಬಿದ ಜನ, ದೇವರು ನಮ್ಮನ್ನು ಕೈಬಿಡಲಿಲ್ಲ' ಎಂದ ಸಹೋದರ

ಸೆ.3 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದರು.

Last Updated : Oct 23, 2019, 04:00 PM IST
ಡಿಕೆಶಿಗೆ ಬೇಲ್: 'ನಂಬಿದ ಜನ, ದೇವರು ನಮ್ಮನ್ನು ಕೈಬಿಡಲಿಲ್ಲ' ಎಂದ ಸಹೋದರ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಅಂತೂ ಇಂತೂ ದೆಹಲಿ ಹೈಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಇಡಿ ಸಮನ್ಸ್: ನಾನು ಕೆಂಪೇಗೌಡನ ಮಗ, ಹೆದರಿ ಹೋಗುವ ಮಾತೇ ಇಲ್ಲ- ಡಿ.ಕೆ. ಶಿವಕುಮಾರ್‌

ಸಹೋದರನಿಗೆ ಜಾಮೀನು ಸಿಕ್ಕ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಹಾಲ್ ನಲ್ಲಿಯೇ ಭಾವುಕರಾದ ಸಂಸದ ಡಿ.ಕೆ. ಸುರೇಶ್, 'ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇತ್ತು. ನಂಬಿದ ಜನ ಹಾಗೂ ದೇವರು ನಮ್ಮನ್ನು ಕೈಬಿಡಲಿಲ್ಲ' ಎಂದು ನುಡಿದರು.

ಕಳೆದ 50 ದಿನಗಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇವೆ. ಇಡಿ ಸುಪ್ರೀಂಕೋರ್ಟ್ ಮೊರೆ ಹೋದರೆ ಅಲ್ಲಿಯೂ ನಮ್ಮ ಹೋರಾಟ ಮುಂದುವರೆಸುತ್ತೇವೆ. ಮುಂದಿನ ನಡೆ ಬಗ್ಗೆ ನಮ್ಮ ವಕೀಲರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಡಿ.ಕೆ. ಸುರೇಶ್ ಹೇಳಿದರು.

ಗೌರಿ-ಗಣೇಶ ಹಬ್ಬದಂದು ಕಣ್ಣೀರಿಟ್ಟ ಡಿಕೆ ಶಿವಕುಮಾರ್!

ಸಂಸದ ಡಿ.ಕೆ. ಸುರೇಶ್ ಕೋರ್ಟ್ ಹಾಲ್ ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಅಪ್ಪಿಕೊಂಡು ತಮ್ಮ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮತ್ತಷ್ಟು ಭಾವುಕರಾದ ಸುರೇಶ್ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ಸ್ವಲ್ಪ ಉದಾಸೀನ ಮಾಡಿದ್ದರೂ ಡಿಕೆಶಿಗೆ ಹಾರ್ಟ್ ಅಟ್ಯಾಕ್ ಆಗುತ್ತಿತ್ತು: ಸಿಂಘ್ವಿ

ಆಗಸ್ಟ್ 30ರಿಂದ ಡಿಕೆಶಿ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು, ಡಿ.ಕೆ. ಶಿವಕುಮಾರ್ ವಿಚಾರಣೆಗೆ ಸ್ಪಂಧಿಸುತ್ತಿಲ್ಲ ಎಂಬ ಕಾರಣ ಒಡ್ಡಿ ಸೆ.3 ರಂದು  ಅವರನ್ನು ಬಂಧಿಸಿದ್ದರು. 

ತಿಹಾರ್ ಜೈಲಿನಲ್ಲಿ ಡಿಕೆಶಿ ಭೇಟಿಯಾದ ಸೋನಿಯಾ ಗಾಂಧಿ

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ರದ್ದು ಪಡಿಸಿತ್ತು. ತಮ್ಮ ಜಾಮೀನು ಅರ್ಜಿಯನ್ನು ರದ್ದು ಪಡಿಸಿದ್ದ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಡಿ.ಕೆ. ಶಿವಕುಮಾರ್​ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಹಾಗೂ ಜಾರಿ ನಿರ್ದೇಶನಾಲಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್​ ವಾದ ಮಂಡಿಸಿದ್ದರು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಈ ಅರ್ಜಿ ವಿಚಾರಣೆ ನಡೆಸಿ ಅಕ್ಟೋಬರ್ 17ರಂದು ತೀರ್ಪುನ್ನು ಕಾಯ್ದಿರಿಸಿದ್ದರು.  ಇಂದು ತೀರ್ಪು ಪ್ರಕಟಿಸಿರುವ ದೆಹಲಿ ಹೈಕೋರ್ಟ್, ವಿಚಾರಣೆ ಮುಗಿಯುವವರೆಗೆ ದೇಶ ಬಿಟ್ಟು ಹೋಗುವಂತಿಲ್ಲ, 25 ಲಕ್ಷ ಬಾಂಡ್ ಹಾಗೂ ಇಬ್ಬರ ಶೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಅಣ್ಣನ ಬಂಧನದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ, ವಕೀಲರ ಭೇಟಿ, ಜಾಮೀನು ಅರ್ಜಿ ಸೇರಿದಂತೆ ಡಿಕೆಶಿಗೆ ಬೆನ್ನೆಲುಬಾಗಿ ನಿಂತಿದ್ದ ಡಿ.ಕೆ. ಸುರೇಶ್ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದರು.

ಪ್ರತಿ ನಿತ್ಯ ತಿಹಾರ್ ಜೈಲಿಗೆ ತೆರಳಿ ಸಹೋದರನನ್ನು ಭೇಟಿಯಾಗುತ್ತಿದ್ದ ಸುರೇಶ್ ಕೋರ್ಟ್ ವಿಚಾರಣೆ, ಜಾಮೀನು ಅರ್ಜಿ, ವಕೀಲರ ನೇಮಕ ಸೇರಿದಂತೆ ಮುಂದಿನ ನಡೆ ಬಗ್ಗೆ ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತಿದ್ದರು. 

More Stories

Trending News