ಶವಗಳನ್ನು ಕೆಲ ದಿನಗಳವರೆಗೆ ಇಟ್ಟರೆ ಕೊಳೆಯುತ್ತದೆ ಎಂಬುದು ನಮಗೆ ತಿಳಿದ ಸಂಗತಿ. ಆದರೆ ರಾಸಾಯನಿಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ನೀಡಿದೆ. ಇದು ಬೆಂಗಳೂರಿನಲ್ಲಿ ನಡೆದ ವಿಶೇಷವಾದ ಪ್ರಯೋಗ.
ಇದನ್ನು ಓದಿ: Motherʼs Day 2022: ವಿಶ್ವ ತಾಯಂದಿರ ದಿನಕ್ಕೆ ಗೂಗಲ್‌ನಿಂದ ವಿಶೇಷ ಗೌರವ
ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಎಂಬವರು ಈ ಸಂಶೋಧನೆಯನ್ನು ಮಾಡಿದ್ದು, ರಾಸಾಯನಿಕಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಮೃತದೇಹಗಳನ್ನು ಸುರಕ್ಷಿತವಾಗಿಡಬಹುದು ಎಂಬುದನ್ನು ತಿಳಿದಿಕೊಟ್ಟಿದ್ದಾರೆ.
ಚೇರ್‌ನಲ್ಲಿ ಕುಳಿತ ಮೃತದೇಹಗಳು:
ವ್ಯಕ್ತಿಯ ಮರಣದ ಬಳಿಕ ಕೆಲವು ಸಂಶೋಧಿತ ರಾಸಾಯನಿಕಗಳನ್ನು ಬಳಸಿ ಜೀವಂತವಾಗಿ ಕಾಣುವ ರೀತಿಯಲ್ಲೇ ಆ ಶವಗಳನ್ನು ಸಂಗ್ರಹಿಸಿಡಬಹುದಾಗಿದೆ. ಇನ್ನು ಈ ರೀತಿ ಸಂಗ್ರಹಿಸಲ್ಪಟ್ಟ ಮೃತದೇಹಗಳು ಕೊಳೆಯುವುದಿಲ್ಲ ಜೊತೆಗೆ ದುರ್ವಾಸನೆಯೂ ಬೀರುವುದಿಲ್ಲ ಎಂಬುದು ಸಂಶೋಧನೆಯಲ್ಲಿ ದೃಢವಾಗಿದೆ. ಇನ್ನು ಚೇರ್‌ನಲ್ಲಿ ಕುಳಿತ ನಾಲ್ಕು ಶವಗಳು ಪ್ರಾಯೋಗಿಕವಾಗಿದ್ದು, ಇದು ವೈದ್ಯಲೋಕವೇ ಅಚ್ಚರಿ ಪಡುವ ಸಂಶೋಧನೆ ಎನ್ನಬಹುದು.
ಇದನ್ನು ಓದಿ: Leopard: ಪೊಲೀಸ್ ಠಾಣೆ ಹಿಂದೆ ಓಡಾಡಿದ ಚಿರತೆ, ಸ್ಥಳೀಯರಲ್ಲಿ ಆತಂಕ!
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಈ ಸಂಶೋಧನೆ ನಡೆದಿದ್ದು, ಡಾ. ದಿನೇಶ್ ರಾವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಚೇರ್‌ನಲ್ಲಿ ಸದ್ಯ ಮಗುವಿನ ಮೃತದೇಹ ಸೇರಿ ನಾಲ್ವರು ವ್ಯಕ್ತಿಗಳ ಶವಗಳನ್ನು ಇಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.