ದೇಶದ ಕೆಲವೆಡೆ ಇಂಧನ ಬೆಲೆ ಏರಿಕೆ: ಇಲ್ಲಿದೆ ನೋಡಿ ನಿಮ್ಮೂರಿನ ಪೆಟ್ರೋಲ್‌-ಡೀಸೆಲ್‌ ದರಪಟ್ಟಿ

ರಾಜ್ಯ ರಾಜಧಾನಿ ಬೆಂಗಳೂರಿನ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ಇದೆ.  ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ.  

Written by - Bhavishya Shetty | Last Updated : May 8, 2022, 09:20 AM IST
  • ದೇಶದ ಕೆಲವೆಡೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ
  • ಚೆನ್ನೈ, ನೋಯ್ಡಾದಲ್ಲಿ ಪೈಸೆ ಲೆಕ್ಕದಲ್ಲಿ ಬೆಲೆ ಹೆಚ್ಚಳ
  • ಬೆಂಗಳೂರಿನಲ್ಲಿ ದರ ಸ್ಥಿರ
ದೇಶದ ಕೆಲವೆಡೆ ಇಂಧನ ಬೆಲೆ ಏರಿಕೆ: ಇಲ್ಲಿದೆ ನೋಡಿ ನಿಮ್ಮೂರಿನ ಪೆಟ್ರೋಲ್‌-ಡೀಸೆಲ್‌ ದರಪಟ್ಟಿ title=
Petrol Price

ಬೆಂಗಳೂರು: ಕಳೆದ ಕೆಲ ದಿನಗಳಿಂದ ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಳಿತವಾಗುತ್ತಿದೆ. ಚೆನ್ನೈ, ನೋಯ್ಡಾ ಸೇರಿ ಹಲವೆಡೆ ಪೆಟ್ರೋಲ್‌ ಬೆಲೆಯಲ್ಲಿ ಪೈಸೆ ಲೆಕ್ಕದಲ್ಲಿ ಹೆಚ್ಚಳವಾಗುತ್ತಿದೆ. ಇನ್ನು ತೈಲ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ದರ ಏರಿಕೆ ಮಾಡದಿರುವುದು ಸಾರ್ವಜನಿಕರಿಗೆ ಕೊಂಚ ರಿಲೀಫ್‌ ನೀಡಿದೆ ಎನ್ನಬಹುದು. 

ಇದನ್ನು ಓದಿ: Gold-Silver: ಬಂಗಾರ-ಬೆಳ್ಳಿ ಖರೀದಿದಾರರಿಗೆ ಶಾಕಿಂಗ್‌ ಸುದ್ದಿ: ಚಿನ್ನ ದರ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ಇದೆ.  ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. ರಾಜ್ಯದಲ್ಲಿಯೂ ಸಹ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಗಮನಿಸಬಹುದು. 

ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.74 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ. 

ಇದನ್ನು ಓದಿ: Banana Side Effects: ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ..?

​ಮಹಾನಗರಗಳು     ಪೆಟ್ರೋಲ್ ದರ ಡೀಸೆಲ್ ದರ
ನವದೆಹಲಿ  105.41 ರೂ  96.67 ರೂ
ನೋಯ್ಡಾ 105.47ರೂ 97.03ರೂ
ಗುರುಗಾವ್‌ 105.86 ರೂ 97.10 ರೂ.
ಮುಂಬೈ 120.51 ರೂ   104.77 ರೂ
ಕೋಲ್ಕತ್ತಾ 115.12 ರೂ  99.83 ರೂ
ಚೆನ್ನೈ    110.95 ರೂ  100.94 ರೂ

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News