Motherʼs Day 2022: ವಿಶ್ವ ತಾಯಂದಿರ ದಿನಕ್ಕೆ ಗೂಗಲ್‌ನಿಂದ ವಿಶೇಷ ಗೌರವ

ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದ ತಾಯಿ ಪ್ರೀತಿ, ನಿಸ್ವಾರ್ಥ ಮನೋಭಾವದ ತಾಯಿಗೆ ಈ ಮೂಲಕ ಡೂಡಲ್ ಗೌರವ ಸೂಚಿಸಿದೆ.

Written by - Bhavishya Shetty | Last Updated : May 8, 2022, 11:01 AM IST
  • ಇಂದು ವಿಶ್ವ ತಾಯಂದಿರ ದಿನ
  • ಗೂಗಲ್‌ ಡೂಡಲ್‌ ಮೂಲಕ ವಿಶೇಷ ಗೌರವ ಸಲ್ಲಿಕೆ
  • ತಾಯಿ ಕೈ ಹಿಡಿದಿರುವ ಮಗುವಿನ ಚಿತ್ರ ರಚನೆ
Motherʼs Day 2022: ವಿಶ್ವ ತಾಯಂದಿರ ದಿನಕ್ಕೆ ಗೂಗಲ್‌ನಿಂದ ವಿಶೇಷ ಗೌರವ  title=
World Motherʼs Day 2022

ಇಂದು ವಿಶ್ವ ತಾಯಂದಿರ ದಿನ. ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ವಿಶ್ವ ಎಲ್ಲಾ ತಾಯಂದಿರಿಗೂ ಶುಭಾಶಯ ಕೋರಿದೆ. ತಾಯಿಯ ಕಿರುಬೆರಳನ್ನು ಮಗುವೊಂದು ಹಿಡಿದಿರುವ ಚಿತ್ರವನ್ನು ಗೂಗಲ್ ತಾಯಂದಿರ ದಿನಕ್ಕೆ ವಿಶೇಷ ಡೂಡಲ್ ಆಗಿ ತಯಾರಿಸಿದೆ. 

ಇದನ್ನು ಓದಿ: RCB vs SRH: ಬೆಂಗಳೂರಿಗೆ ಹೈದರಾಬಾದ್‌ ಸವಾಲು: ಪ್ಲೇ ಆಫ್‌ ಪ್ರವೇಶಿಸುತ್ತಾ ಆರ್‌ಸಿಬಿ!

ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದ ತಾಯಿ ಪ್ರೀತಿ, ನಿಸ್ವಾರ್ಥ ಮನೋಭಾವದ ತಾಯಿಗೆ ಈ ಮೂಲಕ ಡೂಡಲ್ ಗೌರವ ಸೂಚಿಸಿದೆ. 

ವಿಶ್ವ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಅನ್ನಾ ಮಾರೀ ಜಾರ್ವಿಸ್ ಎಂಬ ಮಹಿಳೆ ಅಮೇರಿಕಾದಲ್ಲಿ ತಾಯಿಗಾಗಿ ಒಂದು ದಿನವನ್ನು ಮೀಸಲಿಡಬೇಕೆಂದು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸಿದ ಫಲವಾಗಿ ಅಮೇರಿಕಾದ 28ನೇ ಅಧ್ಯಕ್ಷರಾದ ಥೋಮಸ್ ವುಡ್ರೂ ವಿಲ್ಸನ್ ಸರ್ಕಾರ 1914, ಮೇ 9 ರಂದು ಅಮ್ಮಂದಿರಿಗೆ ಸಾರ್ವಜನಿಕವಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸಲು ಪ್ರತೀ ವರ್ಷ ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವಾಗಿ ಘೋಷಿಸಿತು. ಅಂದಿನಿಂದ ವಿಶ್ವದಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. 

ಇದನ್ನು ಓದಿ: Gold-Silver: ಬಂಗಾರ-ಬೆಳ್ಳಿ ಖರೀದಿದಾರರಿಗೆ ಶಾಕಿಂಗ್‌ ಸುದ್ದಿ: ಚಿನ್ನ ದರ ಏರಿಕೆ

ತಾಯಿ ಎಂದಾಗ ಮೊದಲು ನೆನಪಾಗೋದು ಮಮತೆ, ಪ್ರೀತಿ, ವಾತ್ಸಲ್ಯ. ಆಕೆಯ ಪ್ರೀತಿಗೆ ಸರಿಸಾಟಿಯಾದ ವಿಚಾರ ಈ ಪ್ರಪಂಚದಲ್ಲಿಯೇ ಇರಲು ಸಾಧ್ಯವಿಲ್ಲ. ಆಕೆಯ ವಾತ್ಸಲ್ಯಕ್ಕೆ ಹೊಂದಾಣಿಕೆಯಾಗುವ ಪ್ರೇಮ ಮತ್ತೊಂದಿಲ್ಲ. ಈ ಮಮತಾಮಯಿಯ ಪ್ರೀತಿಗೆ ದಿನಾಚರಣೆಗಳು ಸರಿಹೊಂದದಿದ್ದರೂ ಸಹ, ಆಕೆಯ ಮೌಲ್ಯ, ಮಹತ್ವವನ್ನು ನೆನೆಯಲು ವಿಶೇಷ ದಿನ ಮೀಸಲಿರಿಸುವುದು ಅಗತ್ಯ ಹಾಗೂ ಕರ್ತವ್ಯ ಎನ್ನಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News