ಅಬ್ಬಬ್ಬಾ.. ಏನ್ ಇದು ಬೆಂಗಳೂರು ವೆದರ್‌..! ಊಟಿಯಾಗಿ ಹೋಯ್ತಾ ಸಿಲಿಕಾನ್‌ ಸಿಟಿ..?

Bengaluru weather : ಬೆಂಗಳೂರಿನ ಸುತ್ತಮುತ್ತ ಮಂಜು ಮತ್ತು ಮೋಡ ಕವಿದ ವಾತಾವರಣವಿದ್ದು ಸಂಜೆಯ ಚಳಿಯು ಕಳೆದ ಮೂರು ದಿನಗಳಿಂದ ನಡುಕವನ್ನು ಹುಟ್ಟಿಸಿದೆ. ಏನ್‌ ಗುರು ಬೆಂಗಳೂರು ವೆದರ್‌ ಈಗೆ ಆಗಿದೆ. ಚಳಿಗೆ ಮೈ ನಡುಕ ಶುರುವಾಗಿದೆ ಎನ್ನುವಂತಾಗಿದ್ದಾರೆ ಬೆಂಗಳೂರಿಗರು.  

Written by - Krishna N K | Last Updated : Nov 28, 2024, 01:04 PM IST
    • ಬೆಂಗಳೂರಿನ ಸುತ್ತಮುತ್ತ ಮಂಜು ಮತ್ತು ಮೋಡ ಕವಿದ ವಾತಾವರಣ
    • ಸಂಜೆಯ ಚಳಿಯು ಕಳೆದ ಮೂರು ದಿನಗಳಿಂದ ನಡುಕವನ್ನು ಹುಟ್ಟಿಸಿದೆ
    • ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಅವಧಿಗೂ ಮುನ್ನವೇ ಚಳಿ
ಅಬ್ಬಬ್ಬಾ.. ಏನ್ ಇದು ಬೆಂಗಳೂರು ವೆದರ್‌..! ಊಟಿಯಾಗಿ ಹೋಯ್ತಾ ಸಿಲಿಕಾನ್‌ ಸಿಟಿ..? title=

ಬೆಂಗಳೂರು : ಕರ್ನಾಟಕ ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಅವಧಿಗೂ ಮುನ್ನವೇ ಚಳಿ ಕಂಡುಬಂದಿದೆ. ಡಿಸೆಂಬರ್‌ ತಿಂಗಳಲ್ಲಿ ಅನುಭವಕ್ಕೆ ಬರುವ ಚಳಿ ಈ ಬಾರಿ ನವೆಂಬರ್‌ ತಿಂಗಳಲ್ಲಿ ತನ್ನ ಬಿಸಿ ಮುಟ್ಟಿಸುತ್ತಿದೆ.ಕಳೆದ ನಾಲ್ಕೈದು ದಿನದಿಂದ ಮುಂಜಾನೆಯಲ್ಲಿ ಮಂಜು ಮತ್ತು ಇಬ್ಬನಿ ಬೀಳುವ ವಾತಾವರಣ ಇದೆ. ಮೋಡಕವಿದ ವಾತಾವರಣವೂ ಇದ್ದು ಚಳಿಯ ಅನುಭವವನ್ನು ಹೆಚ್ಚಿಸಿದೆ.ಚಳಿಗೆ ಎದರಿ ಮುಂಜಾನೆ ಮತ್ತು ಸಂಜೆಯ ಅವಧಿಯಲ್ಲಿ ಸೈಕ್ಲಿಂಗ್‌, ವಾಕಿಂಗ್‌ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 

ಚಳಿಯ ವಾತಾವರಣಕ್ಕೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತದ್ದಾರೆ. ಬೆಳಗ್ಗೆ 9 ಗಂಟೆಯಾದರೂ ಸೂರ್ಯನ ಮುಖ ದರ್ಶನವಾಗುವುದಿಲ್ಲವಾಗಿದೆ. ಹೀಗಾಗಿ ಬಹುತೇಕ ಜನರಲ್ಲಿ ಜಡವಾದ ಮನೋಭಾವ ಕಂಡುಬಂದಿದೆ. ಬೆಂಗಳೂರಿನಲ್ಲಿ ಈ ಬಾರಿ ಮಳೆಯೂ ಹೆಚ್ಚು, ಚಳಿಯೂ ಹೆಚ್ಚು, ಬೆಂಗಳೂರು ನಗರ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಇಳಿಕೆ ತೋರಿಸುತ್ತಿದೆ, ಹಾಗೂ ಚಳಿಯೂ ಹೆಚ್ಚಾಗಿದೆ.

ಇದನ್ನೂ ಓದಿ:ಫೆಂಗಲ್ ಎಫೆಕ್ಟ್, ತಮಿಳುನಾಡಿನಲ್ಲಿ ಮುಂದಿನ 4 ದಿನ ಭಾರೀ ಮಳೆ

ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಶಿಯಸ್‌ ಮತ್ತು 16 ಡಿಗ್ರಿ ಸೆಲ್ಶಿಯಸ್‌ ಕಂಡು ಬಂದಿದೆ.ಒಂದು ವಾರದ ಹಿಂದೆ ಎಲೆಕ್ರ್ಟಾನಿಕ್‌ ಸಿಟಿಯಲ್ಲಿ ವ್ಯಾಪ್ತಿಯಲ್ಲಿ ಉಷ್ಣಾಂಶವು 16.6 ಡಿಗ್ರಿ ಸೆಲ್ಶಿಯಸ್‌ ದಖಲಾಗಿದ್ದನ್ನೂ ನೆನೆಪು ಮಾಡಿಕೊಳ್ಳಬಹುದು.ರಾಜ್ಯಕ್ಕೆ ಈ ಬಾರಿ ಚಳಿ ಬೇಗ ಬಂದಿದೆ, ಈ ಪರಿಣಾಮ ಮಧ್ಯರಾತ್ರಿಯಲ್ಲಿ ಇಬ್ಬನಿಯೂ ಕೂಡ ಶುರುವಾಗಿದೆ.ಇನ್ನಷ್ಟೂ ಪ್ರಮಾಣದಲ್ಲಿ ಹೆಚ್ಚಾಗಲಿರುವ ಚಳಿ ಬೆಂಗಳೂರು ತಾಪಮಾನ ೧೨ ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ.ಈಗಾಗಲೇ ಚಳಿ ಹೆಚ್ಚಾಗಿದ್ದು ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಚಳಿ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಳಿಗಾಲ ಬಂತೆಂದರೆ ಭಯ ಬೀಳುವ ಬೆಂಗಳೂರಿಗರು ತಮ್ಮ ದಿನಚರಿಯನ್ನೇ ಬದಲಿಸಿಕೊಳ್ಳುತ್ತಾರೆ,ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇರುವಂತವರು ಅದನ್ನೆ ಆಯ್ಕೆ ಮಾಡಿ ಗಂಟೆಗೊಮ್ಮೆ ಕಾಫಿ, ಟೀ ಕುಡಿಯುತ್ತಾ ಕೆಲಸ ಮಾಡುತ್ತಾರೆ.ಇನ್ನೂ ರಜೆ ಇರುವವರು ದಪ್ಪ ದಪ್ಪ ಹೊದಿಕೆ ಮತ್ತು ರಗ್ಗು, ಹೊದಿಸಿಕೊಂಡು ಮಲಗಿ ಬೀಡುತ್ತಾರೆ. ಕೆಲವರು ಅನಿವಾಯ೯ವಾಗಿ ಹೊರಗೆ ಬರುವ ಅಗತ್ಯತೆ ಇದ್ದಲ್ಲಿ ಸ್ವೆಟರ್‌ ಜಾಕೆಟ್‌ ಮಪ್ಲರ್‌,ಸುತ್ತಿಕೊಂಡು ಹೊರಬರುತ್ತಾರೆ.

ಇದನ್ನೂ ಓದಿ:ಲವ್‌ ದೋಖಾ.. ಕೈಕೊಟ್ಟ ಪ್ರಿಯಕರನ ಮೇಲೆ ಮಾಜಿ ಪ್ರೇಯಸಿ ಗುಂಡಿನದಾಳಿ..! ರಾತ್ರೋ ರಾತ್ರಿ ಬೆಚ್ಚಿದ ಬೆಳಗಾವಿ

ಸಂಜೆ ಮತ್ತು ಮುಂಜಾನೆ ಚಳಿ ಗಾಳಿಯ ನಡುವೆ  ದ್ವಿಚಕ್ರ ವಾಹನ ಒಡಿಸುವುದು ಒಂದು ಸವಾಲಿನ ಕೆಲಸ.ಬೈಕ್‌,ಸ್ಕೂಟರ್‌ ಹ್ಯಾಡಲ್‌ ಹಿಡಿದು ವಾಹನ ಒಡಿಸುವಾಗ  ಕೈ ಬೆರಳುಗಳು, ಹಾಗೂ ಮೂಳೆ ಮತ್ತು ಕೀಲುಗಳಲ್ಲಿ  ನೋವು ಕಂಡುಬರುತ್ತದೆ.ಹೀಗಾಗಿ ಮನೆಯಿಂದ ಹೊರಗೆ ಹೋದವರು ಸಂಜೆಯಾಗುತ್ತದಲೇ ಬೇಗ ಮನೆ ಸೇರುವ  ತವಕದಲ್ಲಿರುತ್ತಾರೆ.

ಕೆ.ಆರ್‌ ಮಾರುಕಟ್ಟೆ,ಮಲ್ಲೇಶವರಂ ಸೇರಿ ವಿವಿಧಡೆ ರಸ್ತೆಗಳಲ್ಲಿ ಫುಟ್‌ಬಾತ್‌ ವ್ಯಪಾರಿಗಳು ಬೆಂಕಿ ಹಾಕಿಕೋಡು ತಮ್ಮ ದೇಹವನ್ನು ಬೆಚ್ಚಗೆ ಮಾಡಿಕೋಳ್ಳುತ್ತಿದ್ದಾರೆ. ಜಕಿ೯ನ್‌, ಸ್ವೆಟರ್‌ ಹಾಗೂ ಬೆಚ್ಚನೆಯಾ ಉಡುಪು. ತೊಟ್ಟುಕೊಂಡರು ಚಳಿಯನ್ನು ತಡೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಆವಲಹಳ್ಳಿ ಬಿ.ಡಿಎ,ಪಾಕ್‌೯ ಸಮೀಪದ ನಿವಾಸಿ ರಾಕಜಣ್ಣ.

ಇದನ್ನೂ ಓದಿ:ಜೆಡಿಎಸ್‌ ಶಾಸಕರನ್ನು ಯೋಗೇಶ್ವರ್‌ ಅಲ್ಲಾಡಿಸಲು ಆಗಲ್ಲ: ಸಿಎಸ್‌ ಪುಟ್ಟರಾಜು

ಈ ಬಾರಿ ಚಳಿ ಹೆಚ್ಚಿರುವುದರಿಂದ ಮುಂಜಾನೆ ಮತ್ತು ಸಂಜೆ ಚಾಹಾ ಅಂಗಡಿಗಳಲ್ಲಿ ಬಿಸಿಬಿಸಿ ಚಹಾ ಹೆಚ್ಚು ಮಾರಾಟ ಆಗ್ತಿದೆ.ಮುನೇಶ್ವರ ಬ್ಲಾಕ್‌ನ ಬೀದಿ ಬದಿ ವ್ಯಾಪರಿ ಮಂಜುನಾಥ್‌ ನಾವು ಬಜ್ಜಿ ವ್ಯಾಪಾರ ಮಾಡುತ್ತಿವಿ ಒಂದು ವಾರದ್ದಿಂದಿಚೇಗೆ ಮೊದಲಿಗಿಂತ ಈಗ ಹೆಚ್ಚು ಬಜ್ಜಿ ಬೋಂಡಾ ಮಾರಾಟ ಆಗ್ತಿದೆ ಎನ್ನುತ್ತದ್ದಾರೆ.

ಬೆಂಗಳೂರು ಹವಾಮಾನ ಇಲಾಖೆ ಇಂದು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಸುತ್ತಮುತ್ತ ಮೈ ನಡುಗುಸುವ ಚಳಿ ಅನುಭವಕ್ಕೆ ಬರಲಿದೆ.ಇಂದು ಮಧ್ಯನದವರೆಗೆ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News