ಯಡಿಯೂರಪ್ಪ ಏನೇ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ- ಸಿಎಂ

ಸುಳ್ಳು ಹೇಳುವುದನ್ನು ಬಿಟ್ಟು ನಮ್ಮ ಕುಟುಂಬದವರ ಮೇಲೆ ಏನು ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರೋ ಮಾಡಲಿ - ಸಿದ್ದರಾಮಯ್ಯ.

Last Updated : Sep 20, 2017, 01:57 PM IST
ಯಡಿಯೂರಪ್ಪ ಏನೇ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ- ಸಿಎಂ title=

ಕೋಲಾರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಏನೇ ಲಾಗ ಹಾಕಿದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಿಷನ್ 150ನ್ನು ಬಿಜೆಪಿ ಪಾಲಾಗುತ್ತೆ ಎಂದು ಜೇಬಿನಲ್ಲಿ ಪತ್ರ ಇಟ್ಟುಕೊಂಡು ಓಡಾಡುತ್ತಿರಲಿ. ಆದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಲ್ಲಿ ಈಗಾಗಲೇ ಸಾಕಷ್ಟು ಕೇಸುಗಳು ಯಡಿಯೂರಪ್ಪ ಅವರ ಮೇಲೆ ಇವೆ. ನಮ್ಮ ಕುಟುಂಬದ ಮೇಲೆ ಏನಂತಾ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಸಿಎಂ, ಸುಳ್ಳು ಹೇಳುವುದನ್ನು ಬಿಟ್ಟು ನಮ್ಮ ಕುಟುಂಬದವರ ವಿರುದ್ಧ ಏನು ಬಿಡುಗಡೆ ಮಾಡುತ್ತಾರೋ ಮಾಡಲಿ, ಅದಕ್ಕಾಗಿಯೇ ನಾನು ಕಾಯುತ್ತಿದ್ದೇನೆ ಎಂದು ಯಡಿಯೂರಪ್ಪ ವಿರುದ್ದ ಹರಿಹೈದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಫೋನ್ ಕದ್ದಾಲಿಕೆ ಮಾಡುವುದು ಬಿಜೆಪಿ ಕೆಲಸ, ನಮ್ಮದಲ್ಲ.  ತಮ್ಮ ಕ್ಷೇತ್ರದ ಮೇಲೆ ನಂಬಿಕೆ ಇಲ್ಲದವರು, ಬೇರೆ ಕ್ಷೇತ್ರಗಳಿಗೆ ಪಲಾಯನ ಮಾಡುವವರು ಎಂದು ಬಿಜೆಪಿಯನ್ನು ನಿಂದಿಸಿದರು.

Trending News