ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ರನ್ನು ಉಚ್ಚಾಟಿಸಿದ ಬಿಜೆಪಿ

ರಾಜ್ಯ ವಿಧಾನಸಭಾ ಉಪಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶರತ್ ಬಚ್ಚೇಗೌಡ ಮತ್ತು ಕವಿರಾಜ್ ಅರಸ್ ಅವರನ್ನು ರಾಜ್ಯ ಬಿಜೆಪಿ ಪಕ್ಷದಿಂದ ಗುರುವಾರ ಉಚ್ಚಾಟಿಸಲಾಗಿದೆ.

Updated: Nov 21, 2019 , 07:25 PM IST
ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ರನ್ನು ಉಚ್ಚಾಟಿಸಿದ ಬಿಜೆಪಿ
file photo (Facebook)

ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶರತ್ ಬಚ್ಚೇಗೌಡ ಮತ್ತು ಕವಿರಾಜ್ ಅರಸ್ ಅವರನ್ನು ರಾಜ್ಯ ಬಿಜೆಪಿ ಪಕ್ಷದಿಂದ ಗುರುವಾರ ಉಚ್ಚಾಟಿಸಲಾಗಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶರತ್ ಬಚ್ಚೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹೊಸಪೇಟೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿರುವ ಕವಿರಾಜ್ ಅರಸ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸುವ ಮೂಲಕ ಶಿಸ್ತುಕ್ರಮ ತೆಗೆದುಕೊಂಡಿದೆ.   

ಡಿಸೆಂಬರ್ 5 ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಕೊನೆಯ ದಿನವಾದ ಗುರುವಾರ ಸಂಜೆ ವೇಳೆಗೆ ಪಕ್ಷದ ಬಂಡಾಯ ಅಭ್ಯರ್ಥಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಬಿಜೆಪಿ ಕೋರಿತ್ತು. ಆದರೆ ಇದಕ್ಕೆ ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಈಗ ಪಕ್ಷದಿಂದ ಉಚ್ಚಾಟಿಸಲಾಗಿದೆ.