ಬಿಜೆಪಿ ಈಸ್ ಎ ಪಾರ್ಟಿ ಆಫ್ ಕ್ರಿಮಿನಲ್ಸ್: ಸಿದ್ದರಾಮಯ್ಯ

ಬಿಜೆಪಿ ಅಪರಾಧಿಗಳ ಪಕ್ಷ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

Last Updated : Apr 18, 2018, 06:42 PM IST
ಬಿಜೆಪಿ ಈಸ್ ಎ ಪಾರ್ಟಿ ಆಫ್ ಕ್ರಿಮಿನಲ್ಸ್: ಸಿದ್ದರಾಮಯ್ಯ title=

ಮೈಸೂರು : ಆರಂಭದಿಂದಲೂ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಬಿಜೆಪಿ ಅಪರಾಧಿಗಳ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ. 

ಸಂಸದ ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗಡೆ ಅವರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಗೆ ಅಪರಾಧಿ ಭಾವನೆ ಇದೆ. "ಅದೊಂದು ಕ್ರಿಮಿನಲ್'ಗಳ ಪಕ್ಷ. ಹಾಗಂತ ಅಲ್ಲಿರುವವರೆಲ್ಲರೂ ಕ್ರಿಮಿನಲ್'ಗಳಲ್ಲ. ಆದರೆ ಕೆಲವರು ಮಾತ್ರ ಕ್ರಿಮಿನಲ್'ಗಳಂತೆ ಆಲೋಚನೆ ಮಾಡಬಾರದು ಎಂದು ಹೇಳಿದರು. 

ಅಪಘಾತಗಳು, ನಿರ್ಲಕ್ಷ್ಯ-ಅತಿಯಾದ ವೇಗ ಹಾಗೂ ಇತರೆ ಕಾರಣಗಳಿಂದ ಸಂಭವಿಸುತ್ತದೆ. ಆದರೆ ಕೊಲೆ ಎನ್ನುವ ರೀತಿಯಲ್ಲಿ ಇದನ್ನು ಆಲೋಚಿಸುವುದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದು ಬಿಜೆಪಿಯ ಸಣ್ಣತನದ ವರ್ತನೆಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

ನಿನ್ನೆ ರಾಣಿಬೆನ್ನೂರಿನಿಂದ ಹಾವೇರಿಗೆ ಬರುವ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಕಾರಿನ ಪಕ್ಕದಲ್ಲಿದ್ದ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. "ನನ್ನ ವಾಹನಕ್ಕೂ ಡಿಕ್ಕಿ ಹೊಡೆಯುವುದರಲ್ಲಿತ್ತು. ಅದೃಷ್ಟವಶಾತ್ ಅಪಾಯದಿಂದ ಪಾರಾದೆ. ಇದು ನನ್ನ ಜೀವಕ್ಕೆ ಹಾನಿ ಮಾಡಲು ಉದ್ದೇಶಪೂರ್ವಕವಾಗಿ ಮಾಡಿದ ಪ್ರಯತ್ನ" ಎಂದು ಅನಂತ್ ಕುಮಾರ್ ಹೆಗಡೆ ಟ್ವೀಟ್'ನಲ್ಲಿ ಆರೋಪಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇದೊಂದು ಪಾರ್ಟಿ ಆಫ್ ಕ್ರಿಮಿನಲ್ಸ್ ಎಂದು ಟೀಕಿಸಿದರು. 

Trending News