ಕೇರಳದ ಅಥ್ಲೀಟ್ ಜಿತಿನ್ ಜೊತೆ ಸಪ್ತಪದಿ ತುಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಪೂವಮ್ಮ

Athlete Poovamma married to Jitin: ನಿನ್ನೆ ರಾಜ್ಯದ ಹೆಮ್ಮೆಯ ಅಥ್ಲೀಟ್ ಪೂವಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

Edited by - Zee Kannada News Desk | Last Updated : Dec 30, 2021, 04:26 PM IST
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಥ್ಲೀಟ್ ಪೂವಮ್ಮ
  • ಕೇರಳದ ಅಥ್ಲೀಟ್ ಜಿತಿನ್ ಜೊತೆ ಪೂವಮ್ಮ ಸಪ್ತಪದಿ ತುಳಿದಿದ್ದಾರೆ
  • ಕೊಡವ ಸಂಪ್ರದಾಯದಂತೆ ಪೂವಮ್ಮ ಮತ್ತು ಜಿತಿನ್ ವಿವಾಹ ಕಾರ್ಯಕ್ರಮ
ಕೇರಳದ ಅಥ್ಲೀಟ್ ಜಿತಿನ್ ಜೊತೆ ಸಪ್ತಪದಿ ತುಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಪೂವಮ್ಮ  title=
ಅಥ್ಲೀಟ್ ಪೂವಮ್ಮ

ಮಂಗಳೂರು:  ನಿನ್ನೆ ರಾಜ್ಯದ ಹೆಮ್ಮೆಯ ಅಥ್ಲೀಟ್ ಪೂವಮ್ಮ ದಾಂಪತ್ಯ ಜೀವನಕ್ಕೆ (Athlete Poovamma married to Jitin) ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಕೇರಳದ ಅಥ್ಲೀಟ್ ಜಿತಿನ್ ಜೊತೆ ಪೂವಮ್ಮ ಸಪ್ತಪದಿ ತುಳಿದಿದ್ದಾರೆ.

ಮಂಗಳೂರು ಹೊರ ವಲಯದ ಅಡ್ಯಾರ್ ಗಾರ್ಡನ್‌ನ ವಿ.ಕೆ.ಶೆಟ್ಟಿ ಸಭಾಂಗಣದಲ್ಲಿ ಮದುವೆಯಾಗಿದ್ದಾರೆ. ಟ್ರ್ಯಾಕ್ ನಲ್ಲಿ ಜೊತೆಯಾಗಿ ದೇಶವನ್ನ ಪ್ರತಿನಿಧಿಸಿದ್ದ ಜೋಡಿ ಇದೀಗ ಬಾಳ ಸಂಗಾತಿಗಳಾಗಿದ್ದಾರೆ.

Athlete Poovamma

ಕೊಡವ ಸಂಪ್ರದಾಯದಂತೆ ಪೂವಮ್ಮ(Athlete Poovamma) ಮತ್ತು ಜಿತಿನ್ ವಿವಾಹ ಕಾರ್ಯಕ್ರಮ ನೆರವೇರಿದೆ. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ.ತಮ್ಮಯ್ಯ, ತಾಯಿ ಜಾನಕಿ, ಜಿತಿನ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು, ಕ್ರೀಡಾಪಟುಗಳು ಹಾಗೂ ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಕೊಡಗು ಮೂಲದ 31 ರ ಹರೆಯದ  ಪೂವಮ್ಮ 2004 ರಲ್ಲಿ ಇಂಚೋನ್ ಏಷ್ಯಾಡ್‌ನಲ್ಲಿ 1 ಚಿನ್ನ, 1 ಕಂಚು ಮತ್ತು 2018 ರ ಜಕಾರ್ತ ಏಷ್ಯಾಡ್‌ನಲ್ಲಿ 2 ಚಿನ್ನ ಪದಕವನ್ನು ಗೆದ್ದಿದ್ದರು. ಜನವರಿ 1 ರಂದು ಪತಿ ಜಿತಿನ್ ರ ಊರು ಕೇರಳದ ತ್ರಿಶೂರಿನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: Section 144 in the Mumbai: ಮುಂಬೈನಲ್ಲಿ ಸೆಕ್ಷನ್ 144 ಜಾರಿ... ಹೊಸ ವರ್ಷದ ಆಚರಣೆಗಳಿಗೆ ನಿಷೇಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News