ಇಂದಿನಿಂದ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಕೆಐಎಎಲ್ ಬಳಿಯ ತಾಜ್ ವಿವಂತಾ ಹೋಟೆಲ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಅಮಿತ್ ಶಾ ಬೆಳಗಿನ ಉಪಹಾರದ ಬಳಿಕ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು.

Last Updated : Mar 26, 2018, 10:18 AM IST
ಇಂದಿನಿಂದ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ title=

ಬೆಂಗಳೂರು: ಇಂದಿನಿಂದ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸ ಹಿನ್ನೆಲೆ ಭಾನುವಾರ(ಮಾರ್ಚ್ 25) ರಾತ್ರಿ ಬೆಂಗಳೂರಿನ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೆಐಎಎಲ್ ಬಳಿಯ ತಾಜ್ ವಿವಂತಾ ಹೋಟೆಲ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಇಂದು(ಸೋಮವಾರ) ಬೆಳಗಿನ ಉಪಹಾರದ ಬಳಿಕ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿಯ ಮೂಲಕ ತಮ್ಮ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಭೇಟಿಯ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಶಾ, ಶಿವಕುಮಾರ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರ ಇಂದಿನ(ಮಾರ್ಚ್ 26) ಕಾರ್ಯಕ್ರಮದ ವಿವರ ಇಂತಿದೆ

  • ಬೆಳಿಗ್ಗೆ 9:30ಕ್ಕೆ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ.
  • ಬೆಳಿಗ್ಗೆ 11:00 ಗಂಟೆಗೆ ತಿಪ್ಪೂರಿನಲ್ಲಿ ತೆಂಗು ಬೆಳೆಗಾರರ ಜೊತೆ ಸಮಾಲೋಚನೆ.
  • ಮಧ್ಯಾಹ್ನ 01:00 ಗಂಟೆಗೆ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಸ್ಮಾರಕಕ್ಕೆ ಭೇಟಿ.
  • ಮಧ್ಯಾಹ್ನ 2:30ಕ್ಕೆ ಅಡಕೆ ಬೆಳೆಗಾರರೊಂದಿಗೆ ಸಮಾವೇಶ.
  • ಸಂಜೆ 04:30ಕ್ಕೆ ಶಿವಮೊಗ್ಗದಲ್ಲಿ ರೋಡ್ ಶೋ.
  • ಸಂಜೆ 06:00 ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಉದ್ಯಮಿಗಳ ಜತೆ ಸಂವಾದ.
  • ಸಂಜೆ 7.30ಕ್ಕೆ ಬೆಕ್ಕಿನ ಕಲ್ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಇತರ ಸ್ವಾಮೀಜಿಗಳೊಂದಿಗೆ ಸಮಾಲೋಚನೆ.

Trending News