‘ನಾರಿ ಮುನಿದರೆ ಮಾರಿ’ ನೆನಪಿರಲಿ ಮಹಿಳೆಯರ ಶಾಪ ಒಳ್ಳೆಯದಲ್ಲ: ಕಾಂಗ್ರೆಸ್‍ಗೆ ಬಿಜೆಪಿ ಎಚ್ಚರಿಕೆ!

Congress Guarantee Schemes: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹8 ಸಾವಿರ ಯಾವಾಗ⁉, ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳೆಯರ ನೇಮಕಾತಿ ಯಾವಾಗ⁉ ಮತ್ತು ಮೀನುಗಾರ ಮಹಿಳೆಯರಿಗೆ ₹3 ಲಕ್ಷವರೆಗೆ ಬಡ್ಡಿರಹಿತ ಸಾಲ ಯಾವಾಗ⁉ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Jun 29, 2023, 01:20 PM IST
  • ಸಿದ್ದರಾಮಯ್ಯನವರೇ ಮಹಿಳೆಯರ ಕಿವಿ ಮೇಲೆ ಹೂ ಇಡುವುದಕ್ಕಾಗಿ ಕಾಲಹರಣ ಮಾಡುವುದನ್ನು ಬಿಡಿ!
  • ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಯಾವಾಗ⁉ & ಅಂಗನವಾಡಿ ಕಾರ್ಯಕರ್ತೆಯರ ವೇತನ ₹15 ಸಾವಿರ ಯಾವಾಗ!?
  • ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹8 ಸಾವಿರ ಯಾವಾಗ⁉ ಎಂದು ಪ್ರಶ್ನಿಸಿದ ಬಿಜೆಪಿ
‘ನಾರಿ ಮುನಿದರೆ ಮಾರಿ’ ನೆನಪಿರಲಿ ಮಹಿಳೆಯರ ಶಾಪ ಒಳ್ಳೆಯದಲ್ಲ: ಕಾಂಗ್ರೆಸ್‍ಗೆ ಬಿಜೆಪಿ ಎಚ್ಚರಿಕೆ! title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ!

ಬೆಂಗಳೂರು: ಚುನಾವಣೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಹರಸಾಹಸ ಪಡುತ್ತಿದೆ. ಇದೇ ವಿಚಾರವಾಗಿ ಬಿಜೆಪಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿದಿನವೂ ಟೀಕಾಪ್ರಹಾರ ನಡೆಸುತ್ತಿದೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹೆಸರಲ್ಲಿ ಮಹಿಳೆಯರ ಕಿವಿ ಮೇಲೆ ಹೂ ಇಡುವುದಕ್ಕಾಗಿ ಕಾಲಹರಣ ಮಾಡುವುದನ್ನು ಬಿಡಿ..! ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಯಾವಾಗ⁉, ಅಂಗನವಾಡಿ ಕಾರ್ಯಕರ್ತೆಯರ ವೇತನ ₹15 ಸಾವಿರ ಯಾವಾಗ!?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು : ಬಸವರಾಜ ಬೊಮ್ಮಾಯಿ 

ಮುಂದುವರೆದು ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹8 ಸಾವಿರ ಯಾವಾಗ⁉, ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳೆಯರ ನೇಮಕಾತಿ ಯಾವಾಗ⁉ ಮತ್ತು ಮೀನುಗಾರ ಮಹಿಳೆಯರಿಗೆ ₹3 ಲಕ್ಷವರೆಗೆ ಬಡ್ಡಿರಹಿತ ಸಾಲ ಯಾವಾಗ⁉ "ನಾರಿ ಮುನಿದರೆ ಮಾರಿ ನೆನಪಿರಲಿ" ಮಹಿಳೆಯರ ಶಾಪ ಒಳ್ಳೆಯದಲ್ಲ ಎಚ್ಚರ..!’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

‘ಪುಕ್ಕಟೆ ಅಕ್ಕಿ ಗ್ಯಾರಂಟಿ ಕೊಡ್ತೀವಿ ಅಂತಾ ಚೀರಾಡುತ್ತಲೇ ಅಧಿಕಾರ ಹಿಡಿದ ಸಿದ್ದರಾಮಯ್ಯನವರೇ, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ನಾಡಿನ 4.2 ಕೋಟಿ ಜನರಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಉಚಿತವಾಗಿ ತಲುಪಿಸಿ ಹಸಿವು ನೀಗಿಸುತ್ತಿದ್ದಾರೆ. ಸ್ವಾಮೀ ನೀವು ಕೊಟ್ಟ ಅಕ್ಕಿ ಎಷ್ಟು? ಶೂನ್ಯ  ಹಾಕಿದ್ದು – ಪಂಗನಾಮ!’ ಅಂತಾ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು: ಸಿಎಂ ಸಿದ್ದರಾಮಯ್ಯ

‘ರಾಜಕೀಯ ಲಾಭಕ್ಕಾಗಿ ಎರಡು ರಾಜ್ಯಗಳ ನಡುವೆ ಕಾಂಗ್ರೆಸ್ ಅಂದು ದ್ವೇಷವನ್ನು ಸಾಧಿಸಿದ ಪರಿಣಾಮವೇ ಇಂದು ನಮ್ಮ ಹೆಮ್ಮೆಯ ನಂದಿನಿ ಕೇರಳದಲ್ಲಿ ತಲೆ ಬಾಗುವ ಪರಿಸ್ಥಿತಿ ಬಂದಿದೆ. ಕೇರಳದ ವಯನಾಡ್ ಅನರ್ಹ ಸಂಸದ ರಾಹುಲ್ ಗಾಂಧಿಯಯ ಒತ್ತಡಕ್ಕೆ ಮಣಿದು ಈಗ ಸಿದ್ದರಾಮಯ್ಯರ #ATMSarkara‌ ನಂದಿನಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ದ್ರೋಹ ಬಗೆದಿದೆ. ಚುನಾವಣೆಗೂ ಮುನ್ನ ನಂದಿನಿ ಬಗ್ಗೆ ಇಲ್ಲಸಲ್ಲದ ಪುಕಾರು ಹರಡಿ ರಾಜಕೀಯ ಬೇಳೆ ಬೇಯಿಸಿಕೊಂಡ ಕಾಂಗ್ರೆಸ್ ನಾಯಕರು ಇಂದು ತೆಪ್ಪಗಾಗಿರುವುದು ಏಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News