ಬೆಂಗಳೂರು: ‘ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡ್ತಿದ್ದಾರೆ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. #ಅವಕಾಶವಾದಿಸಿದ್ದರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ನಿಮ್ಮ ಬಗ್ಗೆ ಹೊಟ್ಟೆಕಿಚ್ಚಿರುವುದು ನಿಜ, ಆದರೆ ಅದು ನಿಮ್ಮ ಪಕ್ಷದವರಿಗೆ ಮಾತ್ರ! ಯಾವ ಪಕ್ಷದ ಬಗ್ಗೆಯೂ ನಿಷ್ಠೆಯಿಲ್ಲದೇ, ವಲಸೆಯನ್ನೇ ರಾಜಕೀಯ ಧ್ಯೇಯವಾಗಿಸಿಕೊಂಡಿದ್ದಕ್ಕಾಗಿ ನಿಮ್ಮ ಬಗ್ಗೆ ಅಸಹನೆ ಇದೆ’ ಎಂದು ಟೀಕಿಸಿದೆ.
‘ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ? ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ವಲಸೆ ಬಂದು ಕೇವಲ 10 ವರ್ಷದಲ್ಲೇ ಮುಖ್ಯಮಂತ್ರಿಯಾಗಿದ್ದನ್ನು ಮೂಲ ಕಾಂಗ್ರೆಸ್ಸಿಗರು ತಡೆದುಕೊಳ್ಳಲು ಹೇಗೆ ಸಾಧ್ಯ? ಕಾಂಗ್ರೆಸ್ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕಾಗಿ., ಮೂಲ ಕಾಂಗ್ರೆಸ್ಸಿಗರು ನಾಚುವ ರೀತಿಯಲ್ಲಿ ದಿಲ್ಲಿ ಸೇವೆ ಮಾಡಿದ್ದಕ್ಕಾಗಿ ಮತ್ತು ನಕಲಿ ಗಾಂಧಿ ಕುಟುಂಬದ ಗುಲಾಮರಾಗಿದ್ದಕ್ಕಾಗಿ’ ಸಿದ್ದರಾಮಯ್ಯರ ಮೇಲೆ ಹೊಟ್ಟೆಕಿಚ್ಚಿದೆ ಎಂದು ಕುಟುಕಿದೆ.
ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಹೊಟ್ಟೆಕಿಚ್ಚಿರುವುದು ನಿಜ, ಆದರೆ ಅದು ನಿಮ್ಮ ಪಕ್ಷದವರಿಗೆ ಮಾತ್ರ!
ಯಾವ ಪಕ್ಷದ ಬಗ್ಗೆಯೂ ನಿಷ್ಠೆಯಿಲ್ಲದೇ, ವಲಸೆಯನ್ನೇ ರಾಜಕೀಯ ಧ್ಯೇಯವಾಗಿಸಿಕೊಂಡಿದ್ದಕ್ಕಾಗಿ ನಿಮ್ಮ ಬಗ್ಗೆ ಅಸಹನೆ ಇದೆ.#ಅವಕಾಶವಾದಿಸಿದ್ದರಾಮಯ್ಯ pic.twitter.com/sUfio4m57C
— BJP Karnataka (@BJP4Karnataka) June 18, 2022
ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ?
ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ವಲಸೆ ಬಂದು ಕೇವಲ ಹತ್ತು ವರ್ಷದಲ್ಲೇ ಮುಖ್ಯಮಂತ್ರಿಯಾಗಿದ್ದನ್ನು ಮೂಲ ಕಾಂಗ್ರೆಸ್ಸಿಗರು ತಡೆದುಕೊಳ್ಳಲು ಹೇಗೆ ಸಾಧ್ಯ?#ಅವಕಾಶವಾದಿಸಿದ್ದರಾಮಯ್ಯ
— BJP Karnataka (@BJP4Karnataka) June 18, 2022
ಇದನ್ನೂ ಓದಿ: ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಧಾರ್ಮಿಕ ಸ್ಥಳ, ಪಬ್ & ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಬ್ಯಾನ್: ಹೈಕೋರ್ಟ್
‘ಸಿದ್ದರಾಮಯ್ಯನವರೇ ನಿಮ್ಮ ಬಗ್ಗೆ ಸ್ವಪಕ್ಷೀಯರಲ್ಲಿರುವುದು ಹೊಟ್ಟೆಕಿಚ್ಚು ಮಾತ್ರವಲ್ಲ, ದ್ವೇಷವೂ ಇದೆ. ಈ ಕಾರಣಕ್ಕಾಗಿಯೇ ನೀವು ಈ ಬಾರಿ ಎಲ್ಲೇ ನಿಂತರೂ ಒಳ ಏಟಿನ ರುಚಿ ತೋರಿಸಲು ಸಿದ್ದರಾಗಿದ್ದಾರೆ. ಕ್ಷೇತ್ರ ಹುಡುಕುವಾಗ ಎಚ್ಚರದಿಂದಿರಿ. ಯೋಚಿಸಿ ವಲಸೆ ನಿರ್ಧರಿಸಿ. ಬಿತ್ತಿದ್ದೇ ಬೆಳೆಯುತ್ತದೆ, ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ, #ಅವಕಾಶವಾದಿಸಿದ್ದರಾಮಯ್ಯ ? ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಹೊಟ್ಟೆಕಿಚ್ಚು ಬಿತ್ತಿದಿರಿ. ಖರ್ಗೆ, ಪರಮೇಶ್ವರ್, ಡಿಕೆಶಿ ಪ್ರತಿಸ್ಪರ್ಧಿ ಯಾಗುತ್ತಾರೆಂದು ಮೂಲೆಗುಂಪು ಮಾಡಿದಿರಿ. ಈಗ ಅದರ ಫಲ ಅನುಭವಿಸುತ್ತಿದ್ದೀರಿ. ಈ ಬಾರಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ?
√ ಕಾಂಗ್ರೆಸ್ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕಾಗಿ.
√ ಮೂಲ ಕಾಂಗ್ರೆಸ್ಸಿಗರು ನಾಚುವ ರೀತಿಯಲ್ಲಿ ದಿಲ್ಲಿ ಸೇವೆ ಮಾಡಿದ್ದಕ್ಕಾಗಿ.
√ ನಕಲಿ ಗಾಂಧಿ ಕುಟುಂಬದ ಗುಲಾಮರಾಗಿದ್ದಕ್ಕಾಗಿ.#ಅವಕಾಶವಾದಿಸಿದ್ದರಾಮಯ್ಯ
— BJP Karnataka (@BJP4Karnataka) June 18, 2022
ಸಿದ್ದರಾಮಯ್ಯನವರೇ, ನಿಮ್ಮ ಬಗ್ಗೆ ಸ್ವಪಕ್ಷೀಯರಲ್ಲಿರುವುದು ಹೊಟ್ಟೆಕಿಚ್ಚು ಮಾತ್ರವಲ್ಲ, ದ್ವೇಷವೂ ಇದೆ.
ಈ ಕಾರಣಕ್ಕಾಗಿಯೇ ನೀವು ಈ ಬಾರಿ ಎಲ್ಲೇ ನಿಂತರೂ ಒಳ ಏಟಿನ ರುಚಿ ತೋರಿಸಲು ಸಿದ್ದರಾಗಿದ್ದಾರೆ.
ಕ್ಷೇತ್ರ ಹುಡುಕುವಾಗ ಎಚ್ಚರದಿಂದಿರಿ. ಯೋಚಿಸಿ ವಲಸೆ ನಿರ್ಧರಿಸಿ.#ಅವಕಾಶವಾದಿಸಿದ್ದರಾಮಯ್ಯ
— BJP Karnataka (@BJP4Karnataka) June 18, 2022
‘ವ್ಯಕ್ತಿ ಗೆಲ್ಲುತ್ತಾನೆ ಎಂದಾಗ ಸೋಲಿಸಲು ತುಂಬಾ ಜನ ಪ್ರಯತ್ನಿಸುವುದು ಸಹಜ, 2013ರಲ್ಲಿ ನೀವು ಮಾಡಿದ್ದು ಅದನ್ನೇ ಅಲ್ಲವೇ ಸಿದ್ದರಾಮಯ್ಯ? ಚಾಮುಂಡೇಶ್ವರಿ ಸೋಲಿನ ಭೀತಿ ಇನ್ನೂ ಮಾಸಿಲ್ಲ, ಅದಕ್ಕಾಗಿ ಹೋದಲ್ಲೆಲ್ಲಾ ಜೈಕಾರ ಹಾಕಿಸಿಕೊಳ್ಳುತ್ತಿದ್ದೀರಿ. ಅಷ್ಟಕ್ಕೂ ನೀವು ಮುಂದೆ ಎಲ್ಲಿ ನಿಂತು ಗೆಲ್ಲುತ್ತೀರಿ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಬಿತ್ತಿದ್ದೇ ಬೆಳೆಯುತ್ತದೆ, ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ, #ಅವಕಾಶವಾದಿಸಿದ್ದರಾಮಯ್ಯ ?
ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಹೊಟ್ಟೆಕಿಚ್ಚು ಬಿತ್ತಿದಿರಿ. ಖರ್ಗೆ, ಪರಮೇಶ್ವರ್, ಡಿಕೆಶಿ ಪ್ರತಿಸ್ಪರ್ಧಿ ಯಾಗುತ್ತಾರೆಂದು ಮೂಲೆಗುಂಪು ಮಾಡಿದಿರಿ. ಈಗ ಅದರ ಫಲ ಅನುಭವಿಸುತ್ತಿದ್ದೀರಿ.
ಈ ಬಾರಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ.
— BJP Karnataka (@BJP4Karnataka) June 18, 2022
ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 35 ದಿನದಲ್ಲಿ 2 ಕೋಟಿ ರೂ. ಸಂಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.