ಸಿದ್ದರಾಮಯ್ಯಗೂ ತಿಹಾರ್ ಜೈಲೂಟ ಮಾಡುವ ಕಾಲ ಹತ್ತಿರದಲ್ಲಿದೆ: ಬಿಜೆಪಿ ವಾರ್ನಿಂಗ್

ಸಿದ್ದರಾಮಯ್ಯನವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Puttaraj K Alur | Last Updated : Oct 19, 2022, 07:53 PM IST
  • ಸಿದ್ದರಾಮಯ್ಯನವರೇ ದೇಶದ ಪ್ರಧಾನಿ ರಾಹುಲ್ ಗಾಂಧಿ ಅಲ್ಲವೆನ್ನುವುದು ಸಣ್ಣ ಮಕ್ಕಳಿಗೂ ತಿಳಿದಿದೆ
  • 40% ಭ್ರಷ್ಟಾಚಾರ ಆರೋಪಕ್ಕೆ ಪೂರಕವಾದ ಒಂದಾದರೂ ದಾಖಲೆಯನ್ನು ಜನತೆಯ ಮುಂದಿಟ್ಟಿದ್ದೀರಾ?
  • ಭಾಷಣದಲ್ಲಿ ಶೂರತನ ತೋರುವವರಿಗೆ ಆರೋಪಕ್ಕೆ ದಾಖಲೆ ಕೊಡಬೇಕು ಎನ್ನುವ ಸಣ್ಣ ಜ್ಞಾನವೂ ಇಲ್ಲವೇ?
ಸಿದ್ದರಾಮಯ್ಯಗೂ ತಿಹಾರ್ ಜೈಲೂಟ ಮಾಡುವ ಕಾಲ ಹತ್ತಿರದಲ್ಲಿದೆ: ಬಿಜೆಪಿ ವಾರ್ನಿಂಗ್ title=
#ಭ್ರಷ್ಟರಾಮಯ್ಯ ಎಂದು ಟೀಕಿಸಿದ ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯನವರೇ ದರೋಡೆಕೋರರಿಗೆ ನಾಡಿನ ಜನತೆ ಎಂದೂ ಅಧಿಕಾರ ನೀಡುವುದಿಲ್ಲ. ಬೀದಿಯಲ್ಲಿರುವ ಕಾಂಗ್ರೆಸ್ ನಾಯಕರು ಕಸದ ತೊಟ್ಟಿ ಸೇರುವ ಕಾಲ ಹತ್ತಿರ ಬರುತ್ತಿದೆ. ಭ್ರಷ್ಟರೆಲ್ಲಾ ಸೇರಿಕೊಂಡು ‘ಭಾರತ್‌ ಜೋಡೋ ಯಾತ್ರೆ’ ಆರಂಭಿಸಿದ್ದಾರೆ. ಯಾತ್ರೆ ಮುಗಿಯುವ ವೇಳೆ ಜೈಲು ಸೇರುವುದು ಖಚಿತ ಅಂತಾ ಬಿಜೆಪಿ ಎಚ್ಚರಿಕೆ ನೀಡಿದೆ.

#ಭ್ರಷ್ಟರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ದೇಶದ ಪ್ರಧಾನಿ ರಾಹುಲ್ ಗಾಂಧಿ ಅಲ್ಲವೆನ್ನುವುದು ಸಣ್ಣ ಮಕ್ಕಳಿಗೂ ತಿಳಿದಿದೆ. ಆ ಬಾಲಕನ ಜೊತೆ ಓಡಾಡಿ ನಿಮಗೆ ದೇಶದ ಪ್ರಧಾನಿ ಬಗ್ಗೆಯೂ ಮರೆತಿರುವುದು ನೋಡಿದರೆ ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ’ ಅಂತಾ ಕುಟುಕಿದೆ.

ಇದನ್ನೂ ಓದಿ: Suresh Prabhu : 'ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ'

‘40% ಭ್ರಷ್ಟಾಚಾರ ಆರೋಪ ಮಾಡುವ ಸಿದ್ದರಾಮಯ್ಯನವರೇ, ಇದಕ್ಕೆ ಪೂರಕವಾದ ಒಂದಾದರೂ ದಾಖಲೆಯನ್ನು ಜನತೆಯ ಮುಂದಿಟ್ಟಿದ್ದೀರಾ? ಭಾಷಣದಲ್ಲಿ ಶೂರತನ ತೋರುವವರಿಗೆ ಆರೋಪಕ್ಕೆ ದಾಖಲೆ ಕೊಡಬೇಕು ಎನ್ನುವು ಸಣ್ಣ ಜ್ಞಾನವೂ ಇಲ್ಲವೇ? ಎಸಿಬಿ ರಚಿಸಿ ತಮ್ಮ ಎಲ್ಲಾ ಹಗರಣಗಳಿಗೆ ʼಬಿʼ ರಿಪೋರ್ಟ್ ಹಾಕಿಸಿಕೊಂಡ ಧೀರ ಎಂದರೆ ಅದು ಸಿದ್ದರಾಮಯ್ಯ. ನಿಷ್ಪಕ್ಷಪಾತ ತನಿಖೆ ನಡೆಸುವ ಲೋಕಾಯುಕ್ತವನ್ನು ಅನುಮಾನಿಸಿದ್ದೇಕೆ? ಬೇಲ್ ಮೇಲಿರುವ ಆ ಬಾಲಕನ ಜೊತೆ ಓಡುವ ನಿಮಗೂ ತಿಹಾರ್ ಜೈಲೂಟ ಮಾಡುವ ಕಾಲ ಹತ್ತಿರದಲ್ಲಿದೆ’ ಎಂದು ಬಿಜೆಪಿ ಕುಟುಕಿದೆ.

‘ಪಾದ ಪೂಜೆ ಮಾಡುವ ಗುಲಾಮಿ ಸ್ಥಿತಿ ನಮ್ಮ ಪಕ್ಷಕ್ಕಿನ್ನೂ ಬಂದಿಲ್ಲ. ಹೈಕಮಾಂಡಿಗೆ ಕಪ್ಪ ಕೊಟ್ಟು ಸ್ಥಾನ ಪಡೆಯುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ. ಸಿದ್ದರಾಮಯ್ಯನವರೇ ನಿಮ್ಮ ಹೈಕಮಾಂಡಿನಂತೆ ನಮ್ಮ ವರಿಷ್ಠರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿಲ್ಲ. ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ. ಸಿದ್ದರಾಮಯ್ಯನವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ? #WatchPe ಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ದೇವರಿಗೆ ಪತ್ರ: ಈ ವಿದ್ಯಾರ್ಥಿ ತಂಟೆಗೆ ಯಾರೂ ಬರಬಾರದಂತೆ- ಆಕೆಗೆ ಇಷ್ಟಪಟ್ಟ ಹುಡುಗ ಬೇಕಂತೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News