ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸುವ #ಆಣೆರಾಮಯ್ಯ ಅವರು ಈ ಬಾರಿಯಾದರೂ ಒಂದು ಗಟ್ಟಿ ಆಣೆ-ಪ್ರಮಾಣ ಮಾಡಲಿ.

Written by - Zee Kannada News Desk | Last Updated : Apr 21, 2022, 03:09 PM IST
  • ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ!
  • ಸಿದ್ದರಾಮಯ್ಯ ತಮ್ಮ ಧಾರ್ಮಿಕ ಹಕ್ಕಿಗಾಗಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಬಳಸಿಕೊಳ್ಳುತ್ತಿರುವುದರ ಮರ್ಮವೇನು?
  • ಆಣೆ -ಪ್ರಮಾಣದ ಮೂಲಕ ಹಳೆ ಗುರುವಿನ ತಲೆಯ ಮೇಲೆ ಕೈಇಡಲು ಹೊರಟಿದ್ದು ಸಮಂಜಸವೇ?
ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ title=
ಆಣೆರಾಮಯ್ಯ ಎಂದು ಬಿಜೆಪಿ ಟೀಕೆ

ಬೆಂಗಳೂರು: ಯೌವನದಲ್ಲಿ ಮಾಡಿದ ತಪ್ಪುಗಳಿಗೆ  ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ! ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಂದೂ ಧಾರ್ಮಿಕ ಆಚರಣೆಗಳನ್ನು ಮೌಢ್ಯದ ಸಾಲಿಗೆ ಸೇರಿಸಲು ಹೊರಟಿದ್ದ ಸಿದ್ದರಾಮಯ್ಯನವರಿಗೆ ಈಗ ಇದ್ದಕ್ಕಿದ್ದಂತೆ ಆಣೆ ಪ್ರಮಾಣದ ಬಗ್ಗೆ ನಂಬಿಕೆ ಮೂಡಿದ್ದು ಸ್ವಾಗತಾರ್ಹ. ಯೌವನದಲ್ಲಿ ಮಾಡಿದ ತಪ್ಪುಗಳಿಗೆ  ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ! ಆದರೆ #ಆಣೆರಾಮಯ್ಯ ಅವರು ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅಪಾಯವಿದೆ’ ಅಂತಾ ಟೀಕಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ ಹೊರತು ಕಾಂಗ್ರೆಸ್ ಅಲ್ಲ: ಡಿ.ಕೆ. ಶಿವಕುಮಾರ್

‘ಸಿದ್ದರಾಮಯ್ಯನವರು ತಮ್ಮ ಧಾರ್ಮಿಕ ಹಕ್ಕಿಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ಬಳಸಿಕೊಳ್ಳುತ್ತಿರುವುದರ ಮರ್ಮವೇನು? #ಆಣೆರಾಮಯ್ಯ ಅವರೇ ಆಣೆ - ಪ್ರಮಾಣದ ಮೂಲಕ ಹಳೆಯ ಗುರುವಿನ ತಲೆಯ ಮೇಲೆ ಕೈ ಇಡಲು ಹೊರಟಿದ್ದು ಸಮಂಜಸವೇ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘#ಆಣೆರಾಮಯ್ಯನವರೇ ಬೇರೆಯವರ ರಾಜಕೀಯ ನಿರ್ಧಾರದ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕಿಂತ ನಿಮ್ಮ ಸ್ವಂತಿಕೆ ಪಣಕ್ಕಿಡಿ. ಬಾದಾಮಿ ಕ್ಷೇತ್ರದಿಂದ ವಲಸೆ ಹೋಗುವುದಿಲ್ಲವೆಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡುವಿರಾ? ಅಥವಾ ಹಿಂದೂ ದೇವರ ಮೇಲೆ ಅಸಹನೆಯಿದ್ದರೆ ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು

‘ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸುವ #ಆಣೆರಾಮಯ್ಯ ಅವರು ಈ ಬಾರಿಯಾದರೂ ಒಂದು ಗಟ್ಟಿ ಆಣೆ-ಪ್ರಮಾಣ ಮಾಡಲಿ. ಆ ಪ್ರಮಾಣಕ್ಕಾಗಿ ಬೇರೆಯವರ ತಂದೆ-ತಾಯಿಯನ್ನು ಆಯ್ಕೆ ಮಾಡಿಕೊಳ್ಳುವ ಬದಲು ಅಧಿನಾಯಕಿ ಸೋನಿಯಾ ಗಾಂಧಿಯ ಅವರ ಮೇಲೆ ಆಣೆ ಮಾಡುವ ಧೈರ್ಯ ತೋರುವರೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News