ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸರ್ವಾಧಿಕಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ದರ್ಬಾರ್ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಬಣದ ಶಾಸಕರಿಗೆ ಅವಾಜ್ ಹಾಕಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ತಮ್ಮ ಬಣದ ಶಾಸಕರನ್ನು ಸಿಎಂ ಸಿದ್ದರಾಮಯ್ಯರ ವಿರುದ್ಧ ಛೂ ಬಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದೆ.
‘ಕಾಂಗ್ರೆಸ್ ಎಂಬುದು ಒಡೆದ ಮನೆ, ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳೇ ಸಾಕ್ಷಿ!! ಡಿ.ಕೆ.ಶಿವಕುಮಾರ್ ಅವರೇ, ನೋಟಿಸ್ ಕೊಡುತ್ತೇನೆಂದು ಎಚ್ಚರಿಕೆ ನೀಡಿರುವುದು ಮತ್ತಷ್ಟು ಜನರು ಸಿದ್ದರಾಮಯ್ಯರವರ ನಾಯಕತ್ವದ ವಿರುದ್ಧ ಮತ್ತಷ್ಟು ಮಾತನಾಡಲಿ ಎಂಬ ದೂರಾಲೋಚನೆಯಿಂದ ಕೂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ತಮ್ಮ ಬಣದ ಶಾಸಕರನ್ನು ಸಿಎಂ @Siddaramaiah ಅವರ ವಿರುದ್ಧ ಛೂ ಬಿಟ್ಟಿರುವ ಡಿಸಿಎಂ @DKShivakumar ಅವರು, ಈಗ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ಎಂಬುದು ಒಡೆದ ಮನೆ, ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ @INCKarnataka ದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳೇ ಸಾಕ್ಷಿ!!
ಡಿ. ಕೆ.… pic.twitter.com/nrKpQ7EmTG
— BJP Karnataka (@BJP4Karnataka) October 29, 2023
ಇದನ್ನೂ ಓದಿ: ಆದಾಯದ ಮೂಲ ಹೆಚ್ಚಿಸಲು KSRTCಯಿಂದ ಹೊಸ ಹೊಸ ಪ್ಲ್ಯಾನ್!
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಕರುನಾಡಿಗೆ ಕತ್ತಲು ಆವರಿಸಿ ಕೆಡುಗಾಲದ ಗ್ರಹಣ ಹಿಡಿದಿದೆ. ಬಿಟ್ಟಿ ಶೋಕಿಗಳನ್ನು ಮಾಡುತ್ತಾ ಮಜಾ ಉಡಾಯಿಸುತ್ತಿರುವ ಮಜವಾದಿ ಸಿದ್ದರಾಮಯ್ಯ ಸರ್ಕಾರದ 5 ತಿಂಗಳ ಅಡಳಿತದಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
KEAಯಲ್ಲಿ ಅಕ್ರಮದ ಕರ್ಮಕಾಂಡ..!
ರಾಜ್ಯದಲ್ಲಿ @INCKarnataka ಅಧಿಕಾರಕ್ಕೆ ಬಂದಿದ್ದೇ ತಡ ಕರುನಾಡಿಗೆ ಕತ್ತಲು ಆವರಿಸಿ ಕೆಡುಗಾಲದ ಗ್ರಹಣ ಹಿಡಿದಿದೆ.
ಬಿಟ್ಟಿ ಶೋಕಿಗಳನ್ನು ಮಾಡುತ್ತಾ ಮಜಾ ಉಡಾಯಿಸುತ್ತಿರುವ ಮಜವಾದಿ @siddaramaiah ಅವರ ಸರ್ಕಾರದ ಐದು ತಿಂಗಳ ಅಡಳಿತದ ಹಳವಂಡಗಳನ್ನು ನೋಡಿ..!#ChandraGrahana #ATMSarkara pic.twitter.com/bravo9nHFU
— BJP Karnataka (@BJP4Karnataka) October 29, 2023
ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ. ಕಾಂಗ್ರೆಸ್ ಮುಖಂಡ ಆರ್.ಡಿ.ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, ಕಾಂಗ್ರೆಸ್ ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ, ಈ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರೋ ಅಥವಾ ಇವರಿಗೂ ಅಮಾಯಕರು/ಮುಗ್ದರು ಎಂಬ ಪಟ್ಟ ಕಟ್ಟುತ್ತಿರೋ..? ಪ್ರತಿ ಅಭ್ಯರ್ಥಿಗಳಿಂದ ವಸೂಲಿ ಮಾಡಿರುವ ₹5-8 ಲಕ್ಷದಲ್ಲಿ ಹೈಕಮಾಂಡ್ ಪಾಲೆಷ್ಟು ಎಂಬುದನ್ನು ಕಾಂಗ್ರೆಸ್ ಪಕ್ಷವೇ ಹೇಳಬೇಕು!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ.
ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, @INCKarnataka ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ.
ಉನ್ನತ ಶಿಕ್ಷಣ ಸಚಿವ @drmcsudhakar ಅವರೇ, ಈ… pic.twitter.com/NHtxzxKb1R
— BJP Karnataka (@BJP4Karnataka) October 29, 2023
ಮೈಸೂರು– ಬೆಂಗಳೂರು ಬಸ್ ದರ ಏರಿಕೆ!
ಮೈಸೂರು– ಬೆಂಗಳೂರು ಬಸ್ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘“ಜೇಬುಗಳ್ಳರಿದ್ದಾರೆ, ಎಚ್ಚರಿಕೆ” ಎಂದು ಬಸ್ಸುಗಳಲ್ಲಿ ಬರೆದಿರುವುದನ್ನು “ಕಾಂಗ್ರೆಸ್ ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ” ಎಂದು ಬದಲಿಸಬೇಕು’ ಎಂದು ಟೀಕಿಸಿದೆ. ‘ಸಾಮಾನ್ಯ ಬಸ್‌ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ ಶೇ.20ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಹಗಲು ದರೋಡೆ. ಮೊದಲು ₹160ರಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ ₹200ಕ್ಕೆ ‘ಕೈ’ ಸುಟ್ಟುಕೊಳ್ಳಬೇಕು. ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ‘ಶಕ್ತಿ ಯೋಜನೆ’ಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ’ವೆಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಪ್ರತಿಬಾರಿಯಂತೆ ಈ ಬಾರಿಯೂ ‘ಅಪ್ಪು’ಗೆ ಕಡ್ಲೆಪುರಿ ಹಾರ ಅರ್ಪಿಸಿದ ಅಜ್ಜಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.