ಕೋಲಾರ: ಬಿಜೆಪಿ ನಾಯಕರು ನನಗೆ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕೋಲಾರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಕೋಲಾರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ ನಾರಾಯಣ್, ಎಸ್. ಆರ್. ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಅವರು ನನಗೆ ಜೆಡಿಎಸ್ ಗೆ ರಾಜಿನಾಮೆ ಕೊಡುವಂತೆ ಒತ್ತಾಯಿಸಿ ಬೆಂಗಳೂರಿನ ನಿವಾಸದಲ್ಲಿ ಬಲವಂತವಾಗಿ 5 ಕೋಟಿ ರೂ. ಮುಂಗಡ ಹಣ ಇತ್ತು ಹೋದರು. ಉಳಿದ 25 ಕೋಟಿ ರೂ. ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಮುಂಗಡವಾಗಿ ನೀಡಿದ್ದ 5 ಕೋಟಿ ರೂ. ಎರಡು ತಿಂಗಳು ಬೆಂಗಳೂರಿನ ನಿವಾಸದಲ್ಲೇ ಇತ್ತು. ಪೊಲೀಸರಿಗೆ ದೂರು ನೀಡುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದೆ, ಬಳಿಕ ಹಣವನ್ನು ಬಿಜೆಪಿಯ ಆರ್. ಅಶೋಕ್ ಅವರ ಕೈಗೆ ವಾಪಸ್ ಕೊಟ್ಟು ಕಳುಹಿಸಿದೆ ಎಂದು ಶ್ರೀನಿವಾಸ ಗೌಡ ವಿವರಿಸಿದ್ದಾರೆ.
K Srinivasa Gowda, JD(S)MLA: BJP's CN Ashwathnarayan, SR Vishwanath&CP Yogeshwara, came to my home, offered Rs 30Cr&gave Rs 5Cr in advance. They wanted me to resign from JD(S). I told them I'm loyal to party&will never do it. I spoke to HD Kumaraswamy&told them to take back money pic.twitter.com/RX5Ri460h9
— ANI (@ANI) February 10, 2019