"ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಬರಿ ಮಾತು ಆಡುತ್ತಾರೆ ಅಷ್ಟೇ"-ವಿನಯ್ ಕುಲಕರ್ಣಿ 

ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ ಆದರೆ ಬರಿ ಮಾತು ಆಡುತ್ತಾರೆ ಅಷ್ಟೇ ಎಂದು ಶಾಸಕ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

Written by - Manjunath N | Last Updated : Jun 4, 2023, 06:34 PM IST
  • ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ. ಮಾತು ಆಡುತ್ತಾರೆ ಅಷ್ಟೇ, ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ
  • ನನ್ನ ಡೈರಿಯಲ್ಲಿ 1600 ಹಸುಗಳು ಇವೆ.ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ
  • ಅರ್ಧ ಹೋರಿಯನ್ನು ನಾವು ಏನ್ ಮಾಡಲು ಸಾಧ್ಯವಿಲ್ಲ.ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ
 "ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಬರಿ ಮಾತು ಆಡುತ್ತಾರೆ ಅಷ್ಟೇ"-ವಿನಯ್ ಕುಲಕರ್ಣಿ  title=

ಬೆಳಗಾವಿ: ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ ಆದರೆ ಬರಿ ಮಾತು ಆಡುತ್ತಾರೆ ಅಷ್ಟೇ ಎಂದು ಶಾಸಕ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಮಾತನಾಡಿದ ಅವರು 'ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ.ಮಾತು ಆಡುತ್ತಾರೆ ಅಷ್ಟೇ.ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ.ನನ್ನ ಡೈರಿಯಲ್ಲಿ 1600 ಹಸುಗಳು ಇವೆ.ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ.ಅರ್ಧ ಹೋರಿಯನ್ನು ನಾವು ಏನ್ ಮಾಡಲು ಸಾಧ್ಯವಿಲ್ಲ.ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ.ಮೇವು, ಕಾರ್ಮಿಕರ ವೆಚ್ಚ ಈಗ ಅಧಿಕವಾಗಿದೆ. ಸಾಮಾನ್ಯವಾಗಿ ಮಾತಾಡಿ ಜನರಿಗೆ ದಾರಿ ತಪ್ಪಿಸುವುದು ಬೇರೆ. ಆದರೆ ವಾಸ್ತವವಾಗಿ ಅನುಭವಿಸುವುದು ಬೇರೆ.ಯಾರ ಬಳಿಯಾದ್ರು ದುಡ್ಡು ತಂದು ಗೋ ಶಾಲೆ ಮಾಡೊದು ಬೇರೆ.ವಾಸ್ತವವಾಗಿ ಡೈರಿ ಫಾರ್ಮ್ ಮಾಡೋ ಬೇರೆ. ಜಾತಿ ಹೆಸರನ್ನು ರಾಜಕೀಯ ಮಾಡೋದು ಬೇರೆ.ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತೇವೆ. ಬೇಕಾದರೆ ದೇಶಿ ತಳಿ ಉಳಿಸಲು ಯೋಜನೆ ಸರ್ಕಾರ ಜಾರಿಗೆಗೊಳಿಸಲಿ.ಎಫ್ ಎಫ್ ತಳಿಯನ್ನು ಇಟ್ಟುಕೊಂಡು ಏನ್ ಮಾಡೋದು ಹೇಳಿ, ಆದ್ದರಿಂದ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿ.ಈ ಹಿನ್ನೆಲೆಯಲ್ಲಿ ಗೋವಿನ ಮೇಲೆ ರಾಜಕೀಯ ಮಾಡೋದು ಸರಿಯಲ್ಲ" ಎಂದು ಹೇಳಿದರು.

ಇದನ್ನೂ ಓದಿ: “ಹಸು ಏಕೆ ಕಡಿಯಬಾರದು..?” ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿಕೆಗೆ ಪ್ರಭು ಚೌಹಾಣ್ ಕೆಂಡಾಮಂಡಲ

ಇದೆ ವೇಳೆ ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು 'ಸಹಜವಾಗಿ ಹೆಚ್ಚಿನ ಶಾಸಕರು ಆಯ್ಕೆ ಆಗಿದ್ದಾರೆ.ಅನೇಕರನ್ನು ಸಮಾಧಾನ ಮಾಡಲು ಹೋಗಿ ಸಚಿವ ಸ್ಥಾನ ಕೈತಪ್ಪಿದೆ.ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.ಈ ಸಲ ನಮ್ಮ ಸಮಾಜದ 37 ಜನ ಶಾಸಕರು ಆಯ್ಕೆಯಾಗಿದ್ದಾರೆ.ನಮ್ಮ ಸಮಾಜದಲ್ಲಿ 13 ಜನ ಶಾಸಕರು ಆಯ್ಕೆಯಾಗಿದ್ದೇವೆ.ಸಮಾಜ ಕಟ್ಟುವ ಕೆಲಸ ಮಾಡಿದ್ವಿ ಅದನ್ನು ಪಕ್ಷ ಗಮನಿಸಬೇಕಿತ್ತು.ಆದರೆ ಪಕ್ಷ ಇದನ್ನು ಗಮನಿಸಿಲ್ಲ.ಸಮಾಜ ಸಹ ಇದನ್ನು ಸೂಕ್ಷ್ಮವಾಗಿ ಗಮನಿಸಿದೆ.ಲೋಕಸಭಾ ಚುನಾವಣೆ ವೇಳೆ ಇದರ ಪರಿಣಾಮ ಬೀರಿಲಿದೆ.ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ.ಖಾತೆ ಹಂಚಿಕೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದು ಎದ್ದು ಕಾಣುತ್ತದೆ.13 ಜನರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ.ಇನ್ನೂ ಇಬ್ಬರು, ಮೂರು ಜನ ಸಚಿವ ಸ್ಥಾನ ಕೇಳಿದ್ವಿ.ಸಮಾಜ ಕಟ್ಟುವ ಕೆಲಸ ಮಾಡಿ ನಮ್ಮ ಸಮಾಜದ ಮತ ಕಾಂಗ್ರೆಸ್ ಹೋಗೊ ನಿಟ್ಟಿನಲ್ಲಿ ಕೆಲಸ ಮಾಡಿದ್ವಿ.135 ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಲಿಂಗಾಯತ ಮತಗಳು ಕಾರಣ" ಎಂದು ಅವರು ಹೇಳಿದರು.

ಇದನ್ನೂ ಓದಿ: ಒಡಿಶಾ ರೈಲು ದುರಂತ : ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕೇಂದ್ರ ಆರೋಗ್ಯ ಸಚಿವ

ಧಾರವಾಡ ಪ್ರವೇಶದ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಧಾರವಾಡ ಪ್ರವೇಶಕ್ಕೆ ಕೋರಿ ಮತ್ತೆ ಅರ್ಜಿ ಸಲ್ಲುಸುತ್ತೇನೆ.ಈಗ ಆದ್ರು ನನಗೆ ಪ್ರವೇಶ ಅನುಮತಿ ಕೊಡ್ತಾರೆ ಅನ್ನೋ ಭರವಸೆ ಇದೆ.ನನ್ನ ಮೇಲೆ ಭರವಸೆ ಇಟ್ಟು ಜನ ಗೆಲ್ಲಿಸಿದ್ದಾರೆ.ಐದು ವರ್ಷ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಅತಿವೃಷ್ಠಿಯಿಂದ ಮನೆ ಬಿದ್ದ ಗಂಭೀರ ಸ್ಥಿತಿ ಕ್ಷೇತ್ರದಲ್ಲಿ ಇದೆ.ರಾಜಕೀಯವಾಗಿ ನಮ್ಮನ್ನು ಬೆಂಬಲಿಸಿದವರಿಗೆ ಅನ್ಯಾಯ ಆಗಿದೆ. ಸರ್ವೆ ಮಾಡಿಸಿ ಪರಿಹಾರ ಕೊಡೊ ಕೆಲಸ ಮಾಡ್ತಿವಿ‌.ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ವಿಚಾರ.ಕೈಯಲ್ಲಿ ಆಗದೇ ಇರೋವರು ಮೈಯಲ್ಲಿ ಪರಚಿಕೊಂಡಂತೆ‌ ಆಗಿದೆ.ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News