ಈ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವಿನ ಹಣ್ಣನ್ನು 60 ಅಂತಾರಾಷ್ಟ್ರೀಯ ಸ್ಥಳಗಳಿಗೆ ರವಾನಿಸುವ ಮೂಲಕ ದಾಖಲೆ ನಿರ್ಮಿಸಿದ BLR ವಿಮಾನ ನಿಲ್ದಾಣ

BLR ವಿಮಾನ ನಿಲ್ದಾಣವು ಭಾರತೀಯರ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಮರ್ಥವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.  

Written by - Ranjitha R K | Last Updated : Aug 1, 2024, 05:32 PM IST
  • ಕಳೆದ ವರ್ಷದಲ್ಲಿ 685 ಎಟ್ರಿಕ್‌ ಟನ್‌ ಮಾವಿನಹಣ್ಣನ್ನು ರಫ್ತು ಮಾಡಲಾಗಿತ್ತು.
  • ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡಿದೆ.
  • ಹಿಂದಿನ ಋತುವಿಗೆ ಹೋಲಿಸಿದರೆ ಇದರಲ್ಲಿ ಶೇ.59ರಷ್ಟು ಹೆಚ್ಚಳ ಕಂಡಿದೆ.
ಈ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವಿನ ಹಣ್ಣನ್ನು 60 ಅಂತಾರಾಷ್ಟ್ರೀಯ ಸ್ಥಳಗಳಿಗೆ ರವಾನಿಸುವ ಮೂಲಕ ದಾಖಲೆ ನಿರ್ಮಿಸಿದ BLR ವಿಮಾನ ನಿಲ್ದಾಣ title=

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) ಮಾವು ರಫ್ತಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. 2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್‌ (MT) ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಈ ಬಾರಿ ಶೇ. 20 ರಷ್ಟು ಬೆಳವಣಿಗೆ ಕಂಡಿದೆ.   

ಕಳೆದ ವರ್ಷದಲ್ಲಿ 685 ಎಟ್ರಿಕ್‌ ಟನ್‌ ಮಾವಿನಹಣ್ಣನ್ನು ರಫ್ತು ಮಾಡಲಾಗಿತ್ತು.ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡಿದೆ. ಹಿಂದಿನ ಋತುವಿಗೆ ಹೋಲಿಸಿದರೆ ಇದರಲ್ಲಿ ಶೇ.59ರಷ್ಟು ಹೆಚ್ಚಳ ಕಂಡಿದೆ. ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪೆರಿಷಬಲ್‌ ಸರಕುಗಳನ್ನು ರಫ್ತು ಮಾಡುವಲ್ಲಿ BLR ವಿಮಾನ ನಿಲ್ದಾಣದ ಕಾರ್ಯಾಚರಣೆಯ ಬದ್ಧತೆಯಿಂದ ರಫ್ತು ಪ್ರಮಾಣದಲ್ಲೂ ಏರಿಕೆ ಕಾಣುತ್ತಿದೆ.

ಇದನ್ನೂಓದಿ : ಆಗಸ್ಟ್ 01 ರಿಂದ ಆಗಸ್ಟ್ 09 ರವರೆಗೆ ಎಲ್ಲೆಲ್ಲಿ ಭಾರಿ ಮಳೆಯಾಗಲಿದೆ ಗೊತ್ತೇ?

ಈ ಋತುವಿನಲ್ಲಿ, ಯುಎಸ್‌ ಗೆ ಹೆಚ್ಚು ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದೆ.ಪ್ರಮುಖವಾಗಿ,ವಾಷಿಂಗ್ಟನ್ ಡಲ್ಲೆಸ್ (ಐಎಡಿ), ಡಲ್ಲಾಸ್-ಫೋರ್ಟ್ ವರ್ತ್ (ಡಿಎಫ್‌ಡಬ್ಲ್ಯೂ), ಮತ್ತು ಸ್ಯಾನ್ ಫ್ರಾನ್ಸಿಸ್ಕೊ (ಎಸ್‌ಎಫ್‌ಒ) ನಂತಹ ವಿಮಾನ ನಿಲ್ದಾಣಗಳು ಭಾರತೀಯ ಮಾವು ಸಾಗಣೆಗೆ ಪ್ರಮುಖ ತಾಣವಾಗಿ ಹೊರಹೊಮ್ಮಿವೆ.ಇದರ ಜೊತೆಗೆ, ಚಿಕಾಗೋ (ಒಆರ್‌ಡಿ), ಸಿಯಾಟಲ್ (ಸಿಇಎ), ದುಬೈ (ಡಿಎಕ್ಸ್‌ಬಿ), ಲಂಡನ್ (ಎಲ್‌ಎಚ್‌ಆರ್‌), ಮತ್ತು ಹೂಸ್ಟನ್ (ಐಎಎಚ್‌) ನಂತಹ ಪ್ರಮುಖ ವಿಮಾನ ನಿಲ್ದಾಣಗಳು ಸೇರಿದಂತೆ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ರಫ್ತು ಮಾಡಲಾಗಿದೆ.ಈ ಮೂಲಕ BLR ವಿಮಾನ ನಿಲ್ದಾಣವು ಭಾರತೀಯರ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಮರ್ಥವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, "ಬಿಎಲ್‌ಆರ್ ಏರ್‌ಪೋರ್ಟ್‌, ತಾಂತ್ರಿ ವಾಗಿ ಸುಧಾರಿತ ಕೋಲ್ಡ್ ಸ್ಟೋರೇಜ್ ಸೌಲಭ್ಯವಾದ ಡಬ್ಲ್ಯುಎಫ್‌ಎಸ್  ಬಿಎಲ್‌ಆರ್ ಕೂಲ್‌ಪೋರ್ಟ್ ಪೂರೈಕೆಯು ಪೆರಿಷೆಬಲ್‌ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಮಾವಿನ ರಫ್ತುಗಳನ್ನು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಿಸುವ ಈ ಸಾಧನೆಯು ಭಾರತೀಯ ಮಾವಿನಹಣ್ಣಿಗೆ, ವಿಶೇಷವಾಗಿ ಎರಡು ಪ್ರಮುಖ ಅಂತಾರಾಷ್ಟ್ರೀಯ ತಾಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಪ್ರಧಾನ ಗೇಟ್‌ವೇ ಆಗಿ ನಮ್ಮ ಸ್ಥಾನವನ್ನು ಬಲಪಡಿಸಿಕೊಂಡಿದ್ದೇವೆ ಎಂದರು.
ವ್ಯವಸ್ಥಾಪನಾ ಸಾಮರ್ಥ್ಯ, ಕಾರ್ಯತಂತ್ರದ ಪಾಲುದಾರಿಕೆ ಮತ್ತು ಕೃಷಿ ಕ್ಷೇತ್ರದ ಬೆಂಬಲದಿಂದ  BLR ವಿಮಾನ ನಿಲ್ದಾಣವು ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳ ರಫ್ತಿನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆರ್ಥಿಕ ಬೆಳವಣಿಗೆಯಲ್ಲೂ ತನ್ನ ಪಾತ್ರವನ್ನು ಮುಂದುವರೆಸಿಕೊಂಡು ಸಾಗಿದೆ.

ಇದನ್ನೂಓದಿ : ಅಪಾಯದ ಮಟ್ಟ ಮೀರಿ ಹರಿದ ಕಾವೇರಿ ನದಿ: ಬೆಳೆ, ಜಮೀನು ಜಲಾವೃತ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

 

Trending News