Namma Metro Service Extension Till 2am on New Year 2023: ಬೆಂಗಳೂರು: ಹೊಸ ವರ್ಷ 2023ನ್ನು ಬರ ಮಾಡಿಕೊಳ್ಳಲು ದೇಶಾದ್ಯಂತ ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಿದ್ಧತೆಗಳು ಮನೆ ಮಾಡಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಇನ್ನು ರಾತ್ರಿ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ಕಳೆದ ದಿನವಷ್ಟೇ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಎಲ್ಲದರ ಮಧ್ಯೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೊ’ ಅವಧಿಯನ್ನು ರಾತ್ರಿ 2 ಗಂಟೆವರೆಗೆ ಬಿಎಂಆರ್‌ಸಿಎಲ್ ವಿಸ್ತರಿಸಲು ನಿರ್ಧರಿಸಿದೆ. ಈ ನಿರ್ಧಾರ ಸಾರ್ವಜನಿಕರಿಗೆ ಸಂತಸವನ್ನು ನೀಡಿದೆ.
ಇದನ್ನೂ ಓದಿ: ಪ್ರಧಾನಿ ತಾಯಿ ಹೀರಾಬೆನ್ ನಿಧನ: ಕಣ್ಣೀರು ತರಿಸುವಂತಿದೆ ‘ಪ್ರಿಯ ಪುತ್ರ’ನ ಭಾವುಕ ನುಡಿ
ಡಿ.31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೊ ಸಂಚಾರ ಇರಲಿದೆ. ಕೊನೆಯ ಮೆಟ್ರೊ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ. ಪ್ರತಿ 15 ನಿಮಿಷಕ್ಕೆ ಒಂದು ರೈಲು ಚಲಿಸಲಿದೆ ಎಂದು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೈಯಪ್ಪನಹಳ್ಳಿಯಿಂದ ಕೊನೆಯ ಮೆಟ್ರೋ ಮುಂಜಾನೆ 1.35ಕ್ಕೆ ಹೊರಡಲಿದೆ. ಕೆಂಗೇರಿಯಿಂದ 1.25ಕ್ಕೆ, ನಾಗಸಂದ್ರದಿಂದ 1.30ಕ್ಕೆ ಹಾಗೂ ರೇಷ್ಮೆ ಸಂಸ್ಥೆಯಿಂದ ಮುಂಜಾನೆ 1.25ಕ್ಕೆ ಮೆಟ್ರೋ ಹೊರಡಲಿವೆ. 11.30 ನಂತರ ಎಂ.ಜಿ ರೋಡ್, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ 50 ರೂ. ಕಾಗದದ ಟಿಕೆಟ್ ವಿತರಿಸಲಾಗುತ್ತದೆ.
ಈ ನಿಲ್ದಾಣಗಳಲ್ಲಿ ವಿಸ್ತರಿತ ಅವಧಿ ಟಿಕೆಟ್ ನೀಡಲಾಗುವುದಿಲ್ಲ. ವಿಸ್ತರಿತ ಅವಧಿಯಲ್ಲಿ ಎಂ.ಜಿ.ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಸಲು ಅನುಕೂಲವಾಗುವಂತೆ ಡಿ.31ರ ರಾತ್ರಿ 8 ಗಂಟೆಗೆ ಎಲ್ಲಾ ನಿಲ್ದಾಣಗಳಲ್ಲಿ ಕಾಗದದ ಟಿಕೆಟ್ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ವಿಸ್ತರಿಸಲಾದ ಅವಧಿಯಲ್ಲೂ ರಿಯಾಯಿತಿ ದರದಲ್ಲಿಯೇ ಪ್ರಯಾಣ ಮಾಡಬಹುದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ವಿಸ್ತರಿಸಿದ ಅವಧಿಯಲ್ಲಿ ಎಂ.ಜಿ. ರೋಡ್, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಹೊರತುಪಡಿಸಿ ಯಾವುದೇ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಟೋಕನ್ ಸ್ಮಾರ್ಟ್, ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಟಿಕೆಟ್ ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು.
ಬೆಂಗಳೂರಿನಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್:
- ಜನರ ಚಲನವಲನಗಳ ಮೇಲೆ ಗಮನ ಹರಿಸಲು 4 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
- ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ಮೇಲೆ ಪೊಲೀಸರಿಂದ ಹೆಚ್ಚು ನಿಗಾ
- ಪಬ್, ಬಾರ್, ರೆಸ್ಟೋರೆಂಟ್‌ಗಳ ಮಾಲೀಕರೊಂದಿಗೆ ಪೊಲೀಸರ ಸಭೆ
- ಡಿ.31ರ ರಾತ್ರಿ 9 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ಏರ್‌ಪೋರ್ಟ್ ಫ್ಲೈಓವರ್ ಹೊರತುಪಡಿಸಿ ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧ
- ಡಿ.31ರ ಸಂಜೆ 4ರಿಂದ ಮಧ್ಯರಾತ್ರಿ 3ರವರೆಗೆ ಎಂಜಿ ರೋಡ್ ಸುತ್ತ ಮುತ್ತ ವಾಹನ ಸಂಚಾರ, ಪಾರ್ಕಿಂಗ್ ನಿರ್ಬಂಧ
- ನೈಸ್ ರೋಡ್ ನಲ್ಲಿ ಡಿ.31ರ ರಾತ್ರಿ 9 ಗಂಟೆಯ ನಂತರ ದ್ವಿಚಕ್ರ ವಾಹನಗಳ ಸಂಚಾರ ನಿಷೇಧ
ಇದನ್ನೂ ಓದಿ: LIC News: ಇನ್ಮುಂದೆ LICಯೊಂದಿಗೆ ವಿಲೀನಗೊಳ್ಳಲಿವೆ ಈ ನಾಲ್ಕು ಸರ್ಕಾರಿ ವಿಮಾ ಕಂಪನಿಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.