ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ

ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡುವ ಪ್ಲ್ಯಾನ್‌ ರೂಪಿಸಲಾಗುತ್ತಿದೆ. ಕೇವಲ ಡ್ರೈವರ್‌ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನ ಮಾಡಲಾಗಿದೆ. 

Written by - Zee Kannada News Desk | Edited by - Bhavishya Shetty | Last Updated : Jul 2, 2022, 12:26 PM IST
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಯೋಜನೆ
  • ಕಂಡಕ್ಟರ್‌ಗಳ ಹೊರತಾಗಿ ಡಿಜಿಟಲ್ ಮೂಲಕ ಟಿಕೆಟ್‌ ಕಲೆಕ್ಷನ್‌
  • ಬಿಎಂಟಿಸಿ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ
ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ title=
BMTC

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೀಗ ಹೊಸ ಯೋಜನೆಯೊಂದನ್ನು ಜಾರಿಗೆ ತರುವ ಚಿಂತನೆಯಲ್ಲಿದೆ. ಇನ್ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳ ಹೊರತಾಗಿ ಡಿಜಿಟಲ್ ಮೂಲಕವೇ ಎಲ್ಲಾ ಟಿಕೆಟ್ ಕಲೆಕ್ಷನ್ ಮಾಡುವ ವ್ಯವಸ್ಥೆ ತರುವ ಯೋಜನೆ ರೂಪಿಸಲಾಗುತ್ತಿದೆ. 

ಇದನ್ನೂ ಓದಿ: Service Charge: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ..!

ನಷ್ಟದ ಸುಳಿಯಲ್ಲಿ ಸಿಲುಕಿ ಪರದಾಟ ನಡೆಸುತ್ತಿರುವ ಬಿಎಂಟಿಸಿ, ಈ ಸಮಸ್ಯೆಯಿಂದ ಹೊರಬರಲು ಮೆಗಾ ಪ್ಲ್ಯಾನ್‌ ರೂಪಿಸಿದೆ. ಸದ್ಯ ಬಸ್ ರಸ್ತೆಗಿಳಿಸೋದೇ ಕಷ್ಟ ಅನ್ನೋ ಪರಿಸ್ಥಿತಿಗೆ ತಲುಪಿರುವ ನಿಗಮ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. 

ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡುವ ಪ್ಲ್ಯಾನ್‌ ರೂಪಿಸಲಾಗುತ್ತಿದೆ. ಕೇವಲ ಡ್ರೈವರ್‌ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನ ಮಾಡಲಾಗಿದೆ. 

ಇನ್ನು ಕಂಡೆಕ್ಟರ್ ಕೆಲಸ ಮಾಡುತ್ತಿರುವವರನ್ನು ಡ್ರೈವರ್ ಕಂ ಕಂಡಕ್ಟರ್ಸ್‌ಗಳಾಗಿ ನೇಮಿಸಲು ಯೋಜನೆ ಮಾಡಲಾಗುತ್ತಿದೆ. ಈಗಾಗಲೇ ನಗರದ ಹಲವೆಡೆ ಚಾಲಕರ ಕೊರತೆಯಿಂದ ಹಲವು ಬಸ್ ಲೈನ್ ರದ್ದು ಮಾಡಲಾಗಿದೆ. 

ಇದನ್ನೂ ಓದಿ: ಕನ್ಹಯ್ಯ ಲಾಲ್‌ ಹತ್ಯೆಗೆ ಪಾಕ್‌ನಿಂದ ಬಂದಿತ್ತು ಸಂದೇಶ!

ಇದರ ಜೊತೆಗೆ ಸಿಬ್ಬಂದಿ ಸಂಬಳದ ಹೊರೆಯನ್ನ ಅರ್ಧಕ್ಕೆ ಇಳಿಸುವ ಸಾಧ್ಯತೆ ಇದೆ.  ಇನ್ನು ಈ ನಿರ್ಧಾರಕ್ಕೆ ಬಿಎಂಟಿಸಿ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಯೋಜನೆ ಜಾರಿಗೆ ತಂದರೆ ಬಿಎಂಟಿಸಿಯನ್ನೇ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ಬೀದಿಗೆ ಬರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News