close

News WrapGet Handpicked Stories from our editors directly to your mailbox

ಬಿಎಸ್​ವೈ ಸಚಿವ ಸಂಪುಟ ಕಸರತ್ತು; ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ!

ಕೋಲಾರದ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ.

Yashaswini V Yashaswini V | Updated: Aug 19, 2019 , 10:58 AM IST
ಬಿಎಸ್​ವೈ ಸಚಿವ ಸಂಪುಟ ಕಸರತ್ತು; ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ!
File Image

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ತಿಂಗಳಾಗುತ್ತಿದೆ. ಬಿಎಸ್​ವೈ ಸಚಿವ ಸಂಪುಟ ಕಸರತ್ತು ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಮಂಗಳವಾರ 16-18 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಹತ್ವದ ಸಭೆ ನಡೆಸಲಿದ್ದು, ಸಂಜೆ ಹೊತ್ತಿಗೆ ಸಚಿವರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ. 

ಕೋಲಾರದ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾವಾರು, ಜಾತಿವಾರು, ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರು ಹೀಗೆ ಹಲವು ಆಯಾಮಗಳಲ್ಲಿ ಲೆಕ್ಕಾಚಾರ ಹಾಗಿ ಯಡಿಯೂರಪ್ಪ ಅವರು ಸಚಿವರ ಪಟ್ಟಿ ಮಾಡಿಕೊಂಡಿದ್ದಾರೆ. 

ಬಿಎಸ್​ವೈ ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ: 
1. ಬಸವರಾಜ್ ಬೊಮ್ಮಾಯಿ
2. ಈಶ್ವರಪ್ಪ 
3. ಆರ್​.ಅಶೋಕ್ 
4. ಗೋವಿಂದ ಕಾರಜೋಳ
5. ಬಿ. ಶ್ರೀರಾಮುಲು
6. ಜೆ.ಸಿ. ಮಾಧುಸ್ವಾಮಿ 
7. ವಿ. ಸೋಮಣ್ಣ
8. ಬಾಲಚಂದ್ರ ಜಾರಕಿಹೊಳಿ
9. ರೇಣುಕಾಚಾರ್ಯ
10. ಶಶಿಕಲಾ ಜೊಲ್ಲೆ 
11. ಡಾ.ಅಶ್ವತ್ಥ್ ನಾರಾಯಣ
12. ಉಮೇಶ್ ಕತ್ತಿ 
13. ಶಿವನಗೌಡ ನಾಯಕ್ 
14. ಕೋಟಾ ಶ್ರೀನಿವಾಸ ಪೂಜಾರಿ
15. ಎಸ್. ಅಂಗಾರ
16. ಎಸ್. ರಾಮದಾಸ್
17. ಬಸನಗೌಡ ಪಾಟೀಲ್ ಯತ್ನಾಳ್
18. ನಾಗೇಶ್