ಕಾಡಾನೆ ದಂತಕ್ಕೆ ಕತ್ತರಿ: ರೈತರ ಸಮಸ್ಯೆ- ಆನೆ ಸಮಸ್ಯೆ ಪರಿಹರಿಸಿದ ಅರಣ್ಯ ಇಲಾಖೆ

ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತ ಮುತ್ತಲಿನ ರೈತರ (Farmers) ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶ ಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದು ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

Written by - Yashaswini V | Last Updated : May 20, 2024, 11:13 AM IST
  • ಮೊದಲ ಬಾರಿಗೆ ಜೀವಂತ ಆನೆಯ ದಂತ ಕತ್ತರಿಸಿದ್ದ ಅರಣ್ಯ ಇಲಾಖೆ
  • ಕಳೆದ ಮೇ 8 ರಂದು ಗುಂಡ್ಲುಪೇಟೆ ತಾಲೂಕಿನ ಹಿರಿಕೆರೆಯಲ್ಲಿ ಸೆರೆಹಿಡಿದಿದ್ದ ಆನೆಗೆ ಆಪರೇಷನ್
  • ಕೂಡು ದಂತ ಹಿನ್ನೆಲೆ ಕಾಡಲ್ಲಿ ಆಹಾರ ಸೇವಿಸಲಾಗದೇ ಜಮೀನುಗಳಿಗೆ ಲಗ್ಗೆ ಹಾಕುತ್ತಿದ್ದ ಕಾಡಾನೆ
ಕಾಡಾನೆ ದಂತಕ್ಕೆ ಕತ್ತರಿ: ರೈತರ ಸಮಸ್ಯೆ- ಆನೆ ಸಮಸ್ಯೆ ಪರಿಹರಿಸಿದ ಅರಣ್ಯ ಇಲಾಖೆ title=

ಚಾಮರಾಜನಗರ:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆಯು ಕೂಡು ದಂತಕ್ಕೆ ಚಿಕಿತ್ಸೆ ಮಾಡುವ ಮೂಲಕ ಕಾಡಾನೆಗೆ ನೈಸರ್ಗಿಕವಾಗಿ ಆಹಾರ ಸೇವನೆಗೆ ಅನುವು ಮಾಡಿ ಕೊಟ್ಟಿದೆ.

ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತ ಮುತ್ತಲಿನ ರೈತರ (Farmers) ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶ ಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದು ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಬಂಡೀಪುರ ಸಿಎಫ್ಒ ಪ್ರಭಾಕರನ್‌ (Bandipur CFO Prabhakaran) ಅವರು ಸೆರೆ ಹಿಡಿದ ಕಾಡಾನೆ ನಾಡಿಗೇಕೆ ಬಂದು ರೈತರ ಜಮೀನಿನ ಫಸಲು ತಿನ್ನುತ್ತಿತ್ತು ಎಂದು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ ಹಂಗಳ ಸುತ್ತಮುತ್ತ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಕೂಡು ದಂತ (Joint Tusk) ಕಾರಣ ಮೊದಲಿಗೆ ಎಂದು ಖಚಿತ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ- ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ

ಮೇಲಾಧಿಕಾರಿಗಳ ಅನುಮತಿ ಪಡೆದು ಸೆರೆ ಹಿಡಿದ ಕೋಡು ದಂತವನ್ನು ಸ್ವಲ್ಪ ತುಂಡು ಮಾಡಿದ ಬಳಿಕ ಕೂಡು ದಂತ ಕಾಡಾನೆ ನೈಸರ್ಗಿಕಾಗಿ ಆಹಾರ ಸೇವನೆಗೆ ಹಾಗೂ ಕಾಡಿನಿಂದ ನಾಡಿಗೆ ಬಂದು ರೈತರ ಫಸಲು ನಾಶ (Farmers' crops are destroyed) ವಾಗದಂತೆ ಅರಣ್ಯ ಇಲಾಖೆ ಕಾಳಜಿ ವಹಿಸಿ, ಇದೇ ಮೊದಲ ಬಾರಿಗೆ ಈ ರೀತಿ ಪ್ರಯೋಗ ನಡೆಸುವ ಮೂಲಕ ಬಂಡೀಪುರ ಇತಿಹಾಸ ಬರೆದಿದೆ.

ಸೆರೆ ಹಿಡಿದಿದ್ದ ಕಾಡಾನೆಗೆ ಎರಡು ದಂತ ಅಡ್ಡಾದಿಡ್ಡಿಯಾಗಿ ಬೆಳೆದು ಒಂದಕ್ಕೊಂದು ಕೂಡಿಕೊಂಡಿದ್ದ ಕಾರಣ ಸೊಂಡಿಲ ಮೇಲೆತ್ತಲು ಆಗುತ್ತಿರಲಿಲ್ಲ. ಕಾಡಲ್ಲಿ ಮರದ ಸೊಪ್ಪು, ಹಣ್ಣು ತಿನ್ನಲು ಆಗುತ್ತಿರಲಿಲ್ಲ. ದೇಹ ತಂಪು ಮಾಡಿ ಕೊಳ್ಳಲು ಕಾಡಾನೆ ಮಣ್ಣು, ಮರಳು, ನೀರು ತಂಪು ಮಾಡಿ ಕೊಳ್ಳಲು ಆಗುತ್ತಿರಲಿಲ್ಲ.

ಕೂಡು ದಂತಗಳ ಒಳಗಿಂದ ಆನೆ ಸೊಂಡಿಲು ಮೇಲತ್ತಲು ಆಗದೆ, ಕಾಡಿನ ಆಹಾರ ತಿನ್ನಲು ಆಗದ ಕಾರಣ ಕಾಡಾನೆ ಸುಲಭವಾಗಿ ಆಹಾರ ಸೇವನೆಗೆ ಕಾಡಾಂಚಿನ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದ ಫಸಲು ತಿನ್ನಲು ಶುರು ಮಾಡಿದೆ.
 
ಇದನ್ನೂ ಓದಿ- Viral Video: ಮಾವುತನನ್ನು ತುಳಿದು ಸಾಯಿಸಿದ ಆನೆ, ಸಿಸಿಟಿವಿಯಲ್ಲಿ ಸೆರೆಯಾಗಿ ಭಯಾನಕ ದೃಶ್ಯ!

ಜಮೀನುಗಳಿಗೆ ದಾಳಿ ನೆಲ ಮಟ್ಟದಲ್ಲಿ ಬೆಳೆದ ಕಬ್ಬು , ಬಾಳೆ ಗಿಡ, ಟೊಮ್ಯಾಟೊ ಮತ್ತಿತರ ತರಕಾರಿ ಸುಲಭವಾಗಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಕಾಡಾನೆಯು ಇದನ್ನೇ ನಿತ್ಯ ಅಭ್ಯಾಸ ಮಾಡಿಕೊಂಡಿದ್ದು ರೈತರು ಹಾಗು ಅರಣ್ಯ ಇಲಾಖೆಗೆ ತಲೆ ನೋವಾಗಿತ್ತು. ಈಗ ಸದ್ಯ, ಆನೆಗೆ ದಂತ ಕತ್ತರಿಸಿದ ಬಳಿಕ ಕಾಡಲ್ಲಿ ಆರೋಗ್ಯದಿಂದಿದ್ದು ನೈಸರ್ಗಿಕವಾಗಿ ಸಿಗುವ ಆಹಾರ ಸೇವಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News