ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ನುಗ್ಗಿದ ಚಿರತೆ: ಆತಂಕದಲ್ಲಿ ಮೃಗಾಲಯದ ಸಿಬ್ಬಂದಿ & ಸಾರ್ವಜನಿಕರು

ಹೊರಗಿನಿಂದ ಬಂದು ಮೃಗಾಲಯಕ್ಕೆ ನುಗ್ಗಿದ ಚಿರತೆ, ಮೃಗಾಲಯದ ಮಧ್ಯಭಾಗದಲ್ಲಿ ಮರವೇರಿ ಕುಳಿತಿದೆ.

Last Updated : Oct 26, 2017, 11:24 AM IST
ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ನುಗ್ಗಿದ ಚಿರತೆ: ಆತಂಕದಲ್ಲಿ ಮೃಗಾಲಯದ ಸಿಬ್ಬಂದಿ &   ಸಾರ್ವಜನಿಕರು title=

ಮೈಸೂರು: ಹೊರಗಿನಿಂದ ಬಂದ ಚಿರತೆಯೊಂದು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ನುಗ್ಗಿದ್ದು ಎಲ್ಲರಲ್ಲೂ ಆತಂಕ ಸೃಷ್ಠಿ ಮಾಡಿದೆ.

ಹೊರಗಿನಿಂದ ಬಂದು ಮೃಗಾಲಯಕ್ಕೆ ನುಗ್ಗಿದ ಚಿರತೆ, ಮೃಗಾಲಯದ ಮಧ್ಯಭಾಗದಲ್ಲಿ ಮರವೇರಿ ಕುಳಿತಿದ್ದು ಎಲ್ಲರಲ್ಲೂ ಆತಂಕ ಮನೆಮಾಡಿದೆ. ಮರವೇರಿ ಕುರಿತಿರುವ ಚಿರತೆ ಚಾಮುಂಡಿ ಬೆಟ್ಟದ ತಪ್ಪಲಿನಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. 

ಸಾರ್ವಜನಿಕ ಹಿತದೃಷ್ಟಿಯಿಂದ ಮೃಗಾಲಯಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ನೀಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮೃಗಾಲಯ ಪ್ರವೇಶಿಸಿದ್ದ ಕೆಲವು ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಸಿ. ರವಿಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಮೃಗಾಲಯದ ಆವರಣದಲ್ಲಿ ಮರವೇರಿ ಕುರಿತಿರುವ ಚಿರತೆಯನ್ನು ಬಂದಿಸಲು ಮೃಗಾಲಯದ ಸಿಬ್ಬಂಧಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

Trending News