ಮಕ್ಕಳಿಂದಲೇ ತಂದೆಯ ಕೊಲೆಗೆ ಸುಪಾರಿ.! ಬಯಲಾಯಿತು ಕೊಲೆಯ ಹಿಂದಿನ ರೋಚಕ ಕತೆ

ಇತ್ತೀಚೆಗೆ ತಂದೆಯೇ ಮಗನನ್ನ ಕೊಲ್ಲಲು ಸುಪಾರಿ ಕೊಟ್ಟಿದ್ದು ಸುದ್ದಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಮಕ್ಕಳೇ ತಂದೆಯ ಕೊಲೆಗೆ ಸುಪಾರಿ ನೀಡಿರುವ ವಿಚಾರ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. 

Written by - Ranjitha R K | Last Updated : Dec 12, 2022, 09:47 AM IST
  • ತಂದೆಯ ಕೊಲೆಗೆ ಮಕ್ಕಳ ಸುಪಾರ
  • ಆಸ್ತಿ ಕೊಡದ ಅಪ್ಪನ ಕೊಲೆಗೆ ಸುಪಾರಿ ಕೊಟ್ಟ ಮಕ್ಕಳು
  • ಕೊಲೆ ಆರೋಪಿಗಳೀಗ ಕಂಬಿ ಹಿಂದೆ
ಮಕ್ಕಳಿಂದಲೇ  ತಂದೆಯ ಕೊಲೆಗೆ ಸುಪಾರಿ.! ಬಯಲಾಯಿತು ಕೊಲೆಯ ಹಿಂದಿನ ರೋಚಕ ಕತೆ  title=
Shivamogga Murder Case

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಕೊಲೆ ಪ್ರಕರಣವೊಂದು ಬಯಲಾಗಿದೆ. ಕಳೆದ ತಿಂಗಳ 29 ನೇ ತಾರೀಖು ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಕೇವಲ ಯುಡಿಆರ್​ ದಾಖಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಶಿರಾಳಕೊಪ್ಪ ಪೊಲೀಸರು ಇದೀಗ ಕೇಸ್​ ಭೇದಿಸಿದ್ದು, ಪುಣೇದಹಳ್ಳಿಯ ಬಳಿಯಲ್ಲಿನ ಚರಂಡಿಯಲ್ಲಿ ಸಿಕ್ಕ ಮೃತದೇಹದ ಹಿಂದಿನ ರಹಸ್ಯ ಹೊರಹಾಕಿದ್ಧಾರೆ. 

ತಂದೆಯ ಕೊಲೆಗೆ ಮಕ್ಕಳ ಸುಪಾರಿ : 
ಇತ್ತೀಚೆಗೆ ತಂದೆಯೇ ಮಗನನ್ನ ಕೊಲ್ಲಲು ಸುಪಾರಿ ಕೊಟ್ಟಿದ್ದು ಸುದ್ದಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಮಕ್ಕಳೇ ತಂದೆಯ ಕೊಲೆಗೆ ಸುಪಾರಿ ನೀಡಿರುವ ವಿಚಾರ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಇಷ್ಟಕ್ಕೂ ಈ ಕೊಲೆ ನಡೆದಿದ್ದು ಆಸ್ತಿಗಾಗಿ, ದುಡ್ಡಿಗಾಗಿ.

ಇದನ್ನೂ ಓದಿ : ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ಸಮ್ಮತಿ

ನಡೆದಿದ್ದು ಏನು ? 
ಶಿರಾಳಕೊಪ್ಪದ ಬೋಗಿ ಗ್ರಾಮದಲ್ಲಿ ಕೆಎಸ್​ಆರ್​ಪಿ ಆರ್​ಎಸ್​ಐ ಆಗಿದ್ದ ನಾಗೇಂದ್ರಪ್ಪರವರು ವಾಸವಿದ್ರು. ಇವರಿಗೆ ಐದೂವರೆ ಎಕೆರೆ ಜಮೀನಿತ್ತು, ಈ ಪೈಕಿ ಐದು ಎಕೆರೆಯಲ್ಲಿ ತೋಟ ಮಾಡಿದ್ದರು. ಅದು ಈಗೀಗ ಫಸಲು ಸಹ ಕೊಡುತ್ತಿತ್ತು. ಈ ಮಧ್ಯೆ ನಾಗೇಂದ್ರಪ್ಪ ಇನ್ನೊಬ್ಬಾಕೆಯನ್ನ ಮದುವೆಯಾಗಿದ್ಧಾರೆ. ಇದು ಬೆಳೆದು ನಿಂತಿದ್ದ ಐವರು ಗಂಡು ಮಕ್ಕಳಿಗೆ ಸಹಿಸಲಾಗಿಲ್ಲ. ಆದರೂ ಅಪ್ಪನ ಮದುವೆಗೆ ಸಾಕ್ಷಿಯಾಗಿದ್ದರು. 

ಈ ಮಧ್ಯೆ ನಾಗೇಂದ್ರಪ್ಪ, ತನ್ನ ಇನ್ನೊಂದು ಮದುವೆಗೆ ಸಾಕ್ಷಿಯಾಗಿ ಮಗುವೊಂದನ್ನ ಪಡೆದಿದ್ದ. ಈ ಮಧ್ಯೆ ಮಕ್ಕಳಿಗೆ ಆಸ್ತಿ ಪಾಲು ಮಾಡು ಕೊಡಬೇಕು ಎಂದು ಮೊದಲ ಹೆಂಡತಿ ಮಕ್ಕಳು ದುಂಬಾಲು ಬಿದ್ದಿದ್ಧಾರೆ. ಆದರೆ ನಾಗೇಂದ್ರಪ್ಪ ಯಾರಿಗೂ ಆಸ್ತಿ ಪಾಲು ಮಾಡಿಕೊಟ್ಟಿರಲಿಲ್ಲ. ಇದೇ ವಿಚಾರಕ್ಕೆ ಊರಲ್ಲಿ ನ್ಯಾಯ ಪಂಚಾಯಿತಿ ಆಗಿದ್ದು, ಐದುವರೆ ಎಕೆರೆ ಜಾಗವನ್ನು ಮೂರು ಪಾಲು ಮಾಡಿ ಮಾತುಕತೆ ಸಂಧಾನಕ್ಕೆ ತಂದಿದ್ದರು. 

ಇದನ್ನೂ ಓದಿ :  ಚಳಿಗಾಲದ ಅಧಿವೇಶದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆ-ಸಿಎಂ ಬೊಮ್ಮಾಯಿ

ಆಸ್ತಿ ಕೊಡದ ಅಪ್ಪನ ಕೊಲೆಗೆ ಸುಪಾರಿ ಕೊಟ್ಟ ಮಕ್ಕಳು :
ಆದರೆ ನಾಗೇಂದ್ರಪ್ಪ ಇದಕ್ಕೆ ಒಪ್ಪದೆ ಮಕ್ಕಳ ಜೊತೆ ಜಗಳ ತೆಗೆದಿದ್ದರಿಂದ, ಮಗ ಉಮೇಶ್ ಎಂಬಾತ ಭದ್ರಾವತಿ ಕೋರ್ಟ್​ನಲ್ಲಿ ಕೇಸ್ ಹಾಕಿದ್ದನಂತೆ. ಇನ್ನೊಂದು ಮದುವೆಯಾಗಿದ್ದ ನಾಗೇಂದ್ರಪ್ಪ, ಇನ್ನೊಂದು ಮಗು ಮಾಡಿಕೊಂಡಿದ್ದರಿಂದ ಮೊದಲ ಹೆಂಡತಿ ಮಕ್ಕಳಾದ  ಮಂಜುನಾಥ್ ಹಾಗೂ ಉಮೇಶ್ ಸಿಟ್ಟಾಗಿದ್ದರು. ಹೀಗೆ ಬಿಟ್ಟರೇ, ಅಪ್ಪ  ಆಸ್ತಿಯಲ್ಲಿ ಪಾಲು ಕೊಡಲಾರ ಎಂದುಕೊಂಡು ಕೊಲೆಯ ತೀರ್ಮಾನಕ್ಕೆ ಬಂದಿದ್ಧಾರೆ. 

ಮನಸ್ಸಲ್ಲಿ ಬಂದ ಆಲೋಚನೆಯನ್ನ ಗಟ್ಟಿಗೊಳಿಸುತ್ತಾ ಮುಂದುವರಿದ ಮಂಜುನಾಥ್, ಗ್ರಾಮದ  ರಿಜ್ವಾನ್​, ಶಿಕಾರಿಪುರ ಪಟ್ಟಣದ ಹಬೀಬುಲ್ಲಾ, ಮತ್ತು ಸುಹೇಲ್​ ಎಂಬವರಿಗೆ ತಂದೆಯ ಕೊಲೆ ಸುಪಾರಿಯನ್ನು ನೀಡಿದ್ದಾರೆ. ಅಪ್ಪನನ್ನ ಕೊಂದರೆ ಐದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ಧಾನೆ. ಇನ್ನೂ ಸುಪಾರಿ ಪಡೆದ ದುಷ್ಕರ್ಮಿಗಳು, 09-11-2022 ರಂದು , ನಾಗೇಂದ್ರಪ್ಪ ಭದ್ರಾವತಿ ಕೋರ್ಟ್‌ ಗೆ ಹೋಗಿ ಬೈಕ್ ನಲ್ಲಿ ಬರುತ್ತಿರುವಾಗ ಕುಸೂರು ಹತ್ತಿರ ಲಗೇಜ್ ಆಟೋದಿಂದ ಡಿಕ್ಕಿ ಹೊಡಿಸಿ ಅಪಘಾತ ನಡೆಸಿದ್ದರು. ಆದರೆ ಆ ಸಮಯದಲ್ಲಿ  ನಾಗೇಂದ್ರಪ್ಪರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿರಲಿಲ್ಲ. ಮೇಲಾಗಿ ಘಟನೆ ಬಗ್ಗೆ ಅವರು ಕಂಪ್ಲೇಂಟ್ ಕೂಡ ಕೊಟ್ಟಿರಲಿಲ್ಲ.

ಇದನ್ನೂ ಓದಿ : ಜನವರಿ 1 ಕ್ಕೆ ಐಐಟಿ ಧಾರವಾಡ ಉದ್ಘಾಟನೆ, ಪ್ರಧಾನಿ ಮೋದಿಗೆ ಆಹ್ವಾನ

ಎರಡು ಸಲ ಕೊಲೆಗೆ ಯತ್ನ : 
ಪುನಃ ದಿನಾಂಕ 29-11-2022 ರಂದು ನಾಗೇಂದ್ರಪ್ಪ ಬೆಳಗ್ಗೆಯೇ ಭದ್ರಾವತಿ ನ್ಯಾಯಾಲಯಕ್ಕೆ ಹೋಗಿ ವಾಪಾಸ್‌ ಶಿಕಾರಿಪುರಕ್ಕೆ ಬಂದಿದ್ಧಾರೆ. ಈ ವೇಳೆ  ರಿಜ್ವಾನ್, ಹಬೀಬುಲಾ ಸುಹೈಲ್ ಲಗೇಜ್ ಆಟೋದಲ್ಲಿ ಶಿಕಾರಿಪುರದಲ್ಲಿ ನಾಗೇಂದ್ರಪ್ಪರನ್ನ ಮಾತನಾಡಿಸಿದ್ದಾರೆ. ಬಳಿಕ ತಮ್ಮ ಆಟೋದಲ್ಲಿಯೇ ನಾಗೇಂದ್ರಪ್ಪರನ್ನು ಹತ್ತಿಸಿಕೊಂಡು ಪುಣೇದಹಳ್ಳಿ, ಗ್ರಾಮದ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಟೋದಲ್ಲಿಯೇ 3 ಜನ ಸೇರಿಕೊಂಡು ನಶೆ ಬರುವ ಚೌಷದಿ ಕುಡಿಸಿ, ಉಸಿರುಗಟ್ಟಿಸಿದ್ದಾರೆ.  ಬಳಿಕ ಅದೇ ಆಟೋದಲ್ಲಿ ಮೃತದೇಹವನ್ನು ತೆಗೆದುಕೊಂಡು ಬಂದು ಪುಣೇದಹಳ್ಳಿ ಮಾರ್ಗವಾಗಿ ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಬಿಸಾಡಿದ್ದಾರೆ. 

ಸದ್ಯ ಈ ಸಂಬಂಧ ಶಿರಾಳಕೊಪ್ಪ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News