Chitradurga Lok Sabha Constituency : ಚಿತ್ರದುರ್ಗ ಸಂಸತ್ ಕ್ಷೇತ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಏನೇನು..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶ ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ...
ಕೋಟೆಯ ನಾಡು ಅಂತಲೇ ಫೇಮಸ್ ಆಗಿರೋ ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 1952 ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನ ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ.. ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಬೇಸಿಗೆಯ ಬಿಸಿಯು ಮತ್ತಷ್ಟು ಏರಿಸಿದೆ. ಮತ್ತೊಮ್ಮೆ ಮೋದಿ ಎಂದು ಕೇಸರಿ ಸೇನೆ ಘರ್ಜನೆ ಮಾಡ್ತಾಯಿದ್ರೆ ಬಿಜೆಪಿಯನ್ನ ಸೋಲಿಸಿ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಪಡೆ ಕೂಡ ಭಾರೀ ತಯಾರಿ ನಡೆಸುತ್ತಿದೆ. ಈ ಕುರಿತು ನಮ್ಮ ಚಿತ್ರದುರ್ಗ ಜಿಲ್ಲೆಯ ಹಿರಿಯ ವರದಿಗಾರರಾದ ಮಾಲತೇಶ್ ಅರಸ್ ಕ್ಷೇತ್ರದ ಬಗ್ಗೆ ನೀಡಿರುವ ಸಮಗ್ರ ವರದಿ ಇಲ್ಲಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ ಲೋಕ ಸಮರ..! 10 ಬಾರಿ ಕಾಂಗ್ರೆಸ್ ಗೆದ್ದರೆ, 1 ಬಾರಿ ಕಮಲಕ್ಕೆ ಜಯ.. ಹೇಗಿದೆ ಸಧ್ಯದ ಬಲಾಬಲ
ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳು ಅಲ್ಲದೆ, ಪಕ್ಕದ ತುಮಕೂರು ಜಿಲ್ಲೆಯ ಸಿರಾ ಹಾಗೂ ಪಾವಗಡ ಸೇರಿದಂತೆ ಒಟ್ಟು 08 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ 919064 ಪುರುಷರು, 922769 ಮಹಿಳೆಯರು ಸೇರಿ ಒಟ್ಟು 18,41,937 ಮತದಾರರು ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ. 2019ರಲ್ಲಿ ಜರುಗಿದ ಚುನಾವಣೆ ಸಂದರ್ಭದಲ್ಲಿ ಪುರುಷರು- 889236, ಮಹಿಳೆರು 870772 ಇತರೆ-103 ಸೇರಿದಂತೆ ಒಟ್ಟು 17,60,111 ಮತದಾರರಿದ್ದರು. ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಅಂದಾಜು 82 ಸಾವಿರ ಹೆಚ್ಚು ಮತದಾರರು add up ಆಗಿದ್ದಾರೆ.
ಚಿತ್ರದುರ್ಗ ಕ್ಷೇತ್ರ ಪರಿಚಯ
ಮೊಳಕಾಲ್ಮೂರು : NY ಗೋಪಾಲಕೃಷ್ಣ, ಕಾಂಗ್ರೆಸ್-ಬಿಜೆಪಿ ವಿರುದ್ಧ 14 ಸಾವಿರ ಮತ ಜಯ
ಚಳ್ಳಕೆರೆ : T ರಘುಮೂರ್ತಿ, ಕಾಂಗ್ರೆಸ್-JDS ವಿರುದ್ಧ 16 ಸಾವಿರ ಮತಗಳ ಗೆಲುವು
ಚಿತ್ರದುರ್ಗ : ವೀರೇಂದ್ರ ಪಪ್ಪಿ, ಕಾಂಗ್ರೆಸ್ -ಬಿಜೆಪಿ ವಿರುದ್ಧ 54 ಸಾವಿರ ಮತಗಳ ಜಯ
ಹಿರಿಯೂರು : ಡಿ.ಸುಧಾಕರ್ ಜಿಲ್ಲಾ ಸಚಿವ, ಕಾಂಗ್ರೆಸ್-ಬಿಜೆಪಿ ವಿರುದ್ಧ 31 ಸಾವಿರ ಮತಗಳ ಜಯ
ಹೊಸದುರ್ಗ : BG ಗೋವಿಂದಪ್ಪ, ಕಾಂಗ್ರೆಸ್- ಬಿಜೆಪಿ ವಿರುದ್ಧ 33 ಸಾವಿರ ಮತಗಳ ಜಯ
ಹೊಳಲ್ಕೆರೆ : M ಚಂದ್ರಪ್ಪ, ಬಿಜೆಪಿ - ಕಾಂಗ್ರೆಸ್ ವಿರುದ್ಧ 5500 ಮತಗಳ ಗೆಲುವು
ಶಿರಾ : TB ಜಯಚಂದ್ರ, ಕಾಂಗ್ರೆಸ್ - JDS ವಿರುದ್ಧ 30 ಸಾವಿರ ಮತಗಳ ಗೆಲುವು
ಪಾವಗಡ :HV ವೆಂಕಟೇಶ್,ಕಾಂಗ್ರೆಸ್ - JDS ವಿರುದ್ಧ 11 ಸಾವಿರ ಮತಗಳ ಗೆಲುವು
ಚಿತ್ರದುರ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದಾರ ಚೆನ್ನಯ್ಯ ಶ್ರೀಗಳಿಗಾಗಿಯೇ ಟಿಕೆಟ್ ಘೋಷಣೆ ವಿಳಂಬ ಆಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ, ಅವರು ರಾಜಕೀಯ ಪ್ರವೇಶಕ್ಕೆ ಆಸಕ್ತಿ ತೋರಿಸದ ಹಿನ್ನೆಲೆ ಅವರನ್ನು ಮನವೊಲಿಸುವ ಕಾರ್ಯ ಬಿಜೆಪಿ ಹೈಕಮಾಂಡ್‌ನಿಂದ ನಡೆಸುತ್ತಿವೆ ಎಂದು ಸುದ್ದಿ ಹಬ್ಬಿತ್ತು. ಮಾದಾರ ಚೆನ್ನಯ್ಯ ಶ್ರೀಗಳನ್ನು ಕರ್ನಾಟಕದ ಯೋಗಿಯಾಗಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಈಗ ಎಲ್ಲದಕ್ಕೂ ತೆರೆ ಎಳೆದಿರುವ ಬಿಜೆಪಿ ಹೈಕಮಾಂಡ್, ಅಭ್ಯರ್ಥಿಯಾಗಿ ವಿಜಯಪುರ ಮೂಲದ ಪರಿಶಿಷ್ಟ ಜಾತಿಯ ಎಡಗೈಗೆ ಸಮುದಾಯಕ್ಕೆ ವರ್ಚಸ್ಸಿ ನಾಯಕ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಿದೆ. ದುರಂತ ಅಂದ್ರೆ ಕಳೆದ ನಾಲ್ಕು ಬಾರಿಯಿಂದ ಚಿತ್ರದುರ್ಗ ಸಂಸತ್ ಕ್ಷೇತ್ರಕ್ಕೆ ಹೊರಗಿನವರೇ ಹೆಚ್ಚು ಅಭ್ಯರ್ಥಿಗಳಾಗುತ್ತಿದ್ದಾರೆ. ಹೀಗಾಗಿ ಈ ಸಲ ಸ್ಥಳೀಯರಿಗೆ ಟಿಕೆಟ್ ಅನ್ನೋ ಕೂಗು ಜೋರಾಗಿ ಎದ್ದಿತ್ತು. ಈ ಮಧ್ಯೆ ಕ್ಷೇತ್ರದ ಜ್ವಲಂತ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ನಿರ್ಣಾಯಕ ಸಾಮಾಜಿಕ ಅಂಶಗಳು ಏನಪ್ಪ ಅಂದ್ರೆ..
ಕ್ಷೇತ್ರವಾರು ಮತದಾರರ ಅಂಕಿ ಅಂಶ
ಕ್ಷೇತ್ರ ಪುರುಷರು ಮಹಿಳೆಯರು ಒಟ್ಟು
ಮೊಳಕಾಲ್ಮೂರು 125058 124181 230560
ಚಳ್ಳಕೆರೆ 110448 112106 222560
ಚಿತ್ರದುರ್ಗ 129809 34398 251312
ಹಿರಿಯೂರು 121502 124210 233775
ಹೊಸದುರ್ಗ 99860 99596 199457
ಹೊಳಲ್ಕೆರೆ 118219 118737 236966
ಸಿರಾ 113788 112898 226694
ಪಾವಗಡ 100380 96643 197032
ಭಾರತ ದೇಶದ ಸ್ವಾತಂತ್ರ್ಯಾ ನಂತರ 1952ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಟೈಮಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ನಿಜಲಿಂಗಪ್ಪ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಅಭ್ಯರ್ಥಿ ಜಿ.ಮರುಳಪ್ಪ ಅವರನ್ನು 79152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಹೆಚ್.ಎಸ್.ವೆಂಕಟಾಚಲಯ್ಯ ಅವರು 44211 ಮತಗಳನ್ನು ಗಳಿಸಿದ್ದರು. 1957 ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಷಿಯಲಿಸ್ಟ್ ಪಕ್ಷ (ಪಿಎಸ್‍ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ.ಮಹ್ಮದ್ ಇಮಾಮ್ ಅವರು ಕಾಂಗ್ರೆಸ್ ಪಕ್ಷದ ಎಸ್.ರಂಗರಾವ್ ಅವರಿಗಿಂತ 11,159 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು. ಆದರೆ 1962ರಲ್ಲಿ ನಡೆದ ಚುನಾವಣೆಯಲ್ಲಿ ಎಸ್. ವೀರಬಸಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾದ ಜಿ.ಬಸಪ್ಪ ಅವರನ್ನು 44849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಆನಂತರ ಹಲವು ಚುನಾವಣೆಗಳು ನಡೆದು 1977ರ ಲೋಕಸಭಾ ಚುನಾವಣೆಯಲ್ಲಿ ಕೆ.ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು. ನಂತ್ರ 1980ರಲ್ಲೂ ಗೆದ್ದು ಬೀಗಿದ್ರು. 1984ರಲ್ಲಿ ಕೆ.ಹೆಚ್. ರಂಗನಾಥ್ 1989, 1991 ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಮೂಡಲಗಿರಿಯಪ್ಪ ಗೆಲುವು ಕಂಡರು. 1996 ಅಂದ್ರೆ ರಾಜ್ಯದಲ್ಲಿ ಜನತಾದಳ ಸರ್ಕಾರ ಅಧಿಕಾರ ದೇವೇಗೌಡರು ಸಿಎಂ ಆಗಿದ್ದಾಗ ನಡೆದ ಚುನಾವಣೆಯಲ್ಲಿ ನಿವೃತ್ತ IPS ಅಧಿಕಾರಿ ಪಿ.ಕೋದಂಡರಾಮಯ್ಯ ಅವರು ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಮೂಡಲಗಿರಿಯಪ್ಪ ಅವರನ್ನು 19382 ಮತಗಳ ಅಂತರದಿಂದ ಸೋಲಿಸಿದರು. 1999ರಲ್ಲಿ ಚಿತ್ರನಟ ಶಶಿಕುಮಾರ್ JDU ಚಿಹ್ನೆಯಿಂದ ಸ್ಪರ್ಧಿಸಿ ಗೆದ್ರು. 2004 ಎನ್.ವೈ. ಹನುಮಂತಪ್ಪ 2009ರಲ್ಲಿ ಬಿಜೆಪಿಯ ಜನಾರ್ಧನಸ್ವಾಮಿ ಗೆದ್ದು ಬೀಗಿದ್ರು. 2019ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.
ಜಾತಿವಾರು ಲೆಕ್ಕಾಚಾರ
* ಪರಿಶಿಷ್ಟ ಜಾತಿ : 4 ಲಕ್ಷ
* ಪರಿಶಿಷ್ಟ ಪಂಗಡ : 3.80 ಲಕ್ಷ
* ಲಿಂಗಾಯತ : 2.50 ಲಕ್ಷ
* ಕುಂಚಿಟಿಗ ಒಕ್ಕಲಿಗ : 2.50 ಲಕ್ಷ
* ಕುರುಬರು : 2ಲಕ್ಷ
* ಗೊಲ್ಲರು: 2ಲಕ್ಷ
* ಇತರರು : 3.08 ಲಕ್ಷ
ಅಂದ್ ಹಾಗೆ ಚಿತ್ರದುರ್ಗ ಸಂಸತ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ತಡವಾಗಿತ್ತು. ಬಹು ಪ್ರಯಾಸಪಟ್ಟು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರನ್ನ ಹೈಕಮಾಂಡ್ ಘೋಷಿಸಿದೆ. ಕ್ಷೇತ್ರಕ್ಕೆ ಹೊರಗಿನವರಾದ ಕಾರಜೋಳ ಮೊದಲಿಗೆ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋ ಯತ್ನ ಮಾಡಿದ್ದಾರೆ. ಕಾಂಗ್ರೆಸ್ ಕಲಿ BN ಚಂದ್ರಪ್ಪ ಸ್ಥಳೀಯರು ಮತ್ತು ಎರಡು ಬಾರಿ ಗೆಲುವು ಕಂಡಿರೋ ಕಾರಣಕ್ಕೆ ಜನಬೆಂಬಲ ಕೂಡ ಈ ಕ್ಷಣಕ್ಕೆ ಉತ್ತಮವಾಗಿದೆ.
ಕಾರಜೋಳರಿಗೆ ಆತಂಕ?
* ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಶಾಸಕ ಇರುವುದು
* ಬಿಜೆಪಿ ಶಾಸಕ ಚಂದ್ರಪ್ಪರಿಂದ ವಿರೋಧ ವ್ಯಕ್ತ
* ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು
* ಸ್ಥಳೀಯರಿಗೆ ಆದ್ಯತೆಯಿಲ್ಲ ಎಂದು ನಾಯಕರ ಸಿಟ್ಟು
ಕಾಂಗ್ರೆಸ್‌ಗೆ ಪ್ಲಸ್
* ರಾಜ್ಯದಲ್ಲಿ ಸರ್ಕಾರವಿರುವ ಕಾರಣ ಕಾರ್ಯಕರ್ತರ ಬೆಂಬಲ
* ಮಾಜಿ ಸಂಸದರಾಗಿರುವುದರಿಂದ ಜನರಿಗೆ ಹೆಚ್ಚು ಚಿರಪರಿಚಿತ ಮುಖ
* ಬಿಜೆಪಿಯ ಅಭ್ಯರ್ಥಿ ಬೇರೆ ಕ್ಷೇತ್ರದವರಾಗಿರುವುದು ಚಂದ್ರಪ್ಪರಿಗೆ ಪ್ಲಸ್
* ಈಗಲೇ ಕ್ಷೇತ್ರಗಳ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡಿರುವುದು
* ಮಾಜಿ-ಹಾಲಿ ಶಾಸಕರು, ಮಾಜಿ ಮಂತ್ರಿಗಳಿಂದ ಬೆಂಬಲ ವ್ಯಕ್ತ
ಇತಿಹಾಸ ಕಳೆದ ಶತಮಾನದ ಬಹುಪಾಲು ಬರ ಎದುರಿಸಿದ್ದ ಚಿತ್ರದುರ್ಗ ಇದೀಗ ಮತ್ತೊಂದು ಲೋಕಸಭೆ ಚುನಾವಣೆಗೆ ಸಜ್ಜಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೋರಾಟ ನಡೆಯುತ್ತಿದೆ. ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಅವರನ್ನು ಕ್ಷೇತ್ರದ ಮತದಾರರು ಮತ್ತೆ ‘ಕೈ’ ಹಿಡಿಯುತ್ತಾರೋ? ಅಥವಾ ‘ಕಮಲ’ ಕಲಿ ಗೋವಿಂದ ಕಾರಜೋಳ ಅವರಿಗೆ ಆಶೀರ್ವದ ಮಾಡ್ತಾರೋ ಅನ್ನೋದು ಕುತೂಹಲ. ಹಾಗ್ ನೋಡಿದ್ರೆ.. ಲೋಕ ಸಮರದಲ್ಲಿ ‘ಕೈ’ ಮೇಲುಗೈ ಸಾಧಿಸಿದೆ.. ಚುನಾವಣೆಯ ಹಿನ್ನೋಟ ನೋಡೋದಾದ್ರೆ..
2009ರ ಚುನಾವಣೆ
ಜನಾರ್ದನಸ್ವಾಮಿ, ಬಿಜೆಪಿ - ಗೆಲುವು
1,35,656 ಮತಗಳ ಅಂತರಲ್ಲಿ ಜಯಭೇರಿ
ಬಿ.ತಿಪ್ಪೇಸ್ವಾಮಿ, ಕಾಂಗ್ರೆಸ್ - ಸೋಲು
2014ರ ಚುನಾವಣೆ
BN ಚಂದ್ರಪ್ಪ, ಕಾಂಗ್ರೆಸ್ - ಗೆಲುವು
ಪಡೆದ ಮತ 4,67,372 (ಶೇ.42.64)
ಜನಾರ್ದನಸ್ವಾಮಿ, ಬಿಜೆಪಿ ಸೋಲು
ಪಡೆದ ಮತ 3,66,220 (ಶೇ.33.40)
2019ರ ಚುನಾವಣೆ
ಎ.ನಾರಾಯಣಸ್ವಾಮಿ, ಬಿಜೆಪಿ - ಗೆಲುವು
ಪಡೆದ ಮತ 626,195 (ಶೇ.50.26)
BN ಚಂದ್ರಪ್ಪ, ಕಾಂಗ್ರೆಸ್- ಸೋಲು
ಪಡೆದ ಮತ 5,46,017 (ಶೇ.43.82)
2024ರ ಚುನಾವಣೆ
BN ಚಂದ್ರಪ್ಪ - ಕಾಂಗ್ರೆಸ್ ಅಭ್ಯರ್ಥಿ
ಗೋವಿಂದ ಕಾರಜೋಳ - ಬಿಜೆಪಿ ಅಭ್ಯರ್ಥಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.