Basavaraj Bommai: ಡಿಸೆಂಬರ್ 31ರಂದು ‘ಕರ್ನಾಟಕ ಬಂದ್’ ಕೈಬಿಡಲು ಸಿಎಂ ಬೊಮ್ಮಾಯಿ ಮನವಿ

ಕಾನೂನಾತ್ಮಕವಾಗಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ವಿಚಾರವಾಗಿ ನಾವು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Written by - Zee Kannada News Desk | Last Updated : Dec 29, 2021, 06:44 PM IST
  • MES ಪುಂಡಾಟಿಕೆ ಪ್ರಕರಣ ಸಂಬಂಧ ಕನ್ನಡ ವಿರೋಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ
  • ಎಂಇಎಸ್ ಸಂಘಟನೆ ನಿಷೇಧಿಸುವ ಬಗ್ಗೆ ಕಾನೂನು ಪರಿಶೀಲನೆ ಮಾಡಲಾಗುವುದು
  • ಕನ್ನಡಪರ ಸಂಘಟನೆಗಳು ಡಿ.31ರ ‘ಕರ್ನಾಟಕ ಬಂದ್’ ಅನ್ನು ಕೈಬಿಡಬೇಕೆಂದು ಸಿಎಂ ಬೊಮ್ಮಾಯಿ ಮನವಿ
Basavaraj Bommai: ಡಿಸೆಂಬರ್ 31ರಂದು ‘ಕರ್ನಾಟಕ ಬಂದ್’ ಕೈಬಿಡಲು ಸಿಎಂ ಬೊಮ್ಮಾಯಿ ಮನವಿ  title=
‘ಕರ್ನಾಟಕ ಬಂದ್’ ಕೈಬಿಡುವಂತೆ ಸಿಎಂ ಮನವಿ

ಹುಬ್ಬಳ್ಳಿ: ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರೆದಿರುವ ‘ಕರ್ನಾಟಕ ಬಂದ್‍’ ಅನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಮನವಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲ ಆಯೋಜಿಸಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.  

ನಾನು ಕನ್ನಡಪರ ಸಂಘಟನೆಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅವರ ಇಚ್ಛೆಯಂತೆ ಕೆಲವು ನಿರ್ಣಯಗಳನ್ನು ನಾವು ಈಗಾಗಲೇ ಮಾಡಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ವಿರೋಧಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎಂಇಎಸ್(MES) ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಕಾನೂನು ಪರಿಶೀಲನೆ ಮಾಡಲಾಗುವುದು ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ

‘ಕರ್ನಾಟಕ ಬಂದ್‍’ಗೆ(Karnataka Bandh) ಕರೆ ಕೊಡುವುದು ಸೂಕ್ತವಲ್ಲ. ಬಂದ್ ಮಾಡುವುದು ಸಮಸ್ಯೆಗಳಿಗೆ ಉತ್ತರವಲ್ಲ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಬಂದ್ ಆಚರಣೆಯನ್ನು ಕೈಬಿಡಬೇಕು. ಬಂದ್ ಬಿಟ್ಟು ಕನ್ನಡಪರ ಸಂಘಟನೆ(Pro-Kannada Organisations)ಗಳು ಬೇರೆಯ ರೂಪದಲ್ಲಿ ಒತ್ತಡ ಹಾಕುವುದಕ್ಕೆ ನಮ್ಮ ಸ್ವಾಗತವಿದೆ. ಯಾವುದೇ ಕಾರಣಕ್ಕೂ ‘ಕರ್ನಾಟಕ ಬಂದ್’ ಮಾಡುವುದು ಬೇಡವೆಂದು ಇದೇ ವೇಳೆ ಸಿಎಂ ಮನವಿ ಮಾಡಿದರು.

ಕಾನೂನಾತ್ಮಕವಾಗಿ ಎಂಇಎಸ್ ಸಂಘಟನೆ(MES Maharashtra)ಯನ್ನು ನಿಷೇಧಿಸುವ ವಿಚಾರವಾಗಿ ನಾವು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕನ್ನಡ ವಿರೋಧಿಗಳಿಗೆ ತಕ್ಕಶಿಕ್ಷೆ ಆಗಲಿದೆ. ಹೀಗಾಗಿ ಕನ್ನಡಪರ ಸಂಘಟನೆಗಳಲ್ಲಿ ನಾನು ಕಳಕಳಿಯ ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ಡಿಸೆಂಬರ್ 31ರಂದು ಕರೆ ನೀಡಿರುವ ‘ಕರ್ನಾಟಕ ಬಂದ್’ಅನ್ನು ಕೈಬಿಡಬೇಕು’ ಅಂತಾ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Fire in car: ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ನ್ಯಾನೋ ಕಾರು      

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News