ಬೆಂಗಳೂರು: ಸಕಾಲಕ್ಕೆ ನೇರವಾಗಿ ಮಾನವೀಯತೆ ಮೆರೆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದಾಗಿ ಮಾನಸಿಕವಾಗಿ ಅಸ್ವಸ್ಥಳಾಗಿ ಶಿಮ್ಲಾ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪದ್ಮ ಗುರುವಾರ ತವರಿಗೆ ವಾಪಸ್ಸಾಗಿದ್ದಾರೆ.
ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶಿಮ್ಲಾದಿಂದ ತವರಿಗೆ ಮರಳಿದ ಪದ್ಮಾರನ್ನು ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಭೇಟಿಯಾದರು. ಅಷ್ಟೇ ಅಲ್ಲ ಪದ್ಮಾಳ ಮನವಿಗೆ ಸ್ಪಂಧಿಸಿದ ಕುಮಾರಣ್ಣ ಆಕೆಗೆ ಭರವಸೆಯನ್ನೂ ನೀಡಿದ್ದಾರೆ.
ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, ಶಿಮ್ಲಾದಿಂದ ತವರಿಗೆ ಮರಳಿದ ಪದ್ಮ
ಪದ್ಮಾಗೆ ಕುಮಾರಣ್ಣನ ಭರವಸೆ?
ತನಗೆ ವಾಸಿಸಲು ಮನೆ ಕಟ್ಟಿಸಿಕೊಡುವಂತೆ ಹಾಗೂ ತನ್ನ ಪತಿಯನ್ನು ಹುಡುಕಿಕೊಡುವಂತೆ ಪದ್ಮಾ ಮಾಡಿದ ಮನವಿಗೆ ಸ್ಪಂದಿಸಿದ ಕುಮಾರಣ್ಣ, ಆಕೆಯ ಚಿಕಿತ್ಸೆಗೆ ಮತ್ತು ಉತ್ತಮ ರೀತಿಯಲ್ಲಿ ಬದುಕು ನಡೆಸಲು ಅಗತ್ಯ ನೆರವು ನೀಡುವುದಾಗಿಯೂ, ಜೊತೆಗೆ ಆಕೆಯ ಪತಿಯನ್ನು ಹುಡುಕಿಸಿ ಕೊಡುವುದಾಗಿಯೂ ಭರವಸೆ ನೀಡಿದ್ದಾರೆ.
ಪದ್ಮಾಗೆ ಪುನರ್ವಸತಿ ಕಲ್ಪಿಸುವಂತೆ ಹಾಗೂ ಆಕೆಯ ಪತಿಯನ್ನು ಹುಡುಕಿಕೊಡುವಂತೆ ಸಿಎಂ ಕುಮಾರಸ್ವಾಮಿ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
The Mysuru-based woman found at Shimla hospital met the Chief Minister upon her arrival in Bengaluru.
The CM assured all possible help for her treatment&rehab.The CM directed DC Mysuru to take necessary action regarding the woman's request for a house&help in finding her husband. pic.twitter.com/bu3UPRasOe— CM of Karnataka (@CMofKarnataka) August 2, 2018