"ಮಾತೃಪೂರ್ಣ" ಯೋಜನೆಗೆ ಚಾಲನೆ ನೀಡಿದ ಸಿಎಂ

ಗಾಂಧೀಜಿಯವರ ರಾಮರಾಜ್ಯದ ಆಶಯ, ನಮ್ಮ ಸರ್ಕಾರದ ಆಶಯ ಒಂದೇ.

Last Updated : Oct 2, 2017, 03:40 PM IST
"ಮಾತೃಪೂರ್ಣ" ಯೋಜನೆಗೆ ಚಾಲನೆ ನೀಡಿದ ಸಿಎಂ  title=
Pic: Twitter

ಬೆಂಗಳೂರು: ತಾಯಿ ಪೌಷ್ಟಿಕಾಂಶದಿಂದ ಕೂಡಿರಲು ಸರ್ಕಾರವು ಇಂದಿನಿಂದ "ಮಾತೃ ಪೂರ್ಣ" ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಸಿಎಂ ಸಿದ್ದರಾಮಯ್ಯ ಅಂಗನವಾಡಿಗಳ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಗರ್ಭಿಣಿಯರಿಗೆ ಇದೊಂದು ಉಪಯುಕ್ತ ಯೋಜನೆ. ಈ ಯೋಜನೆಯಿಂದ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ದೊರೆಯುತ್ತದೆ ಎಂದು ತಿಳಿಸಿದರು. 

ತಾಯಿ ಪೌಷ್ಟಿಕಾಂಶದಿಂದ ಕೂಡಿರಲು ನಮ್ಮ ಸರ್ಕಾರ "ಮಾತೃಪೂರ್ಣ" ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಅಂಗನವಾಡಿಗಳ ಮೂಲಕ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಗಾಂಧೀಜಿಯವರ ರಾಮರಾಜ್ಯದ ಆಶಯ, ನಮ್ಮ ಸರ್ಕಾರದ ಆಶಯ ಒಂದೇ ಎಂದು ತಿಳಿಸಿದರು.

ಮಾತೃಪೂರ್ಣ ಕಾರ್ಯಕ್ರಮ ಯಶಸ್ವಿಯಾಗಬೇಕು. ಅಂಗನವಾಡಿ ಅಧಿಕಾರಿಗಳು, ಕಾರ್ಯಕರ್ತರು ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಶ್ರಮಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತರಿಗೆ ಸಿಎಂ ಸೂಚಿನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸಿಎಂ ಸ್ವತಃ ತಾವೇ ನಿಂತು ಗರ್ಭಿಣಿಯರಿಗೆ ಊಟ ಬಡಿಸಿದರು. ಅನ್ನ, ಸಾಂಬಾರು, ಮೊಟ್ಟೆ, ಕಡಲೆಕಾಳು ಪಲ್ಯೆ, ಸೊಪ್ಪು ಪಲ್ಯೆ, ಹೆಸರು ಹಾಳು ಹಾಗೂ ದಾಳಿಂಬೆ ಹಣ್ಣುನ ಕೋಸಂಬರಿ ಮತ್ತು ಹಾಲನ್ನು ಸಿದ್ದರಾಮಯ್ಯ ಬಡಿಸಿದರು.

ಸಿದ್ದರಾಮಯ್ಯಗೆ ಸಚಿವರಾದ ಉಮಾಶ್ರೀ, ರೋಷನ್ ಭೇಗ್, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸಾಥ್ ನೀಡಿದರು.

Trending News