ನವದೆಹಲಿ: ಸ್ನೇಹಿತರಿಗೆ ಗುಡ್-ಬೈ ಹೇಳುವುದು ನಿಜಕ್ಕೂ ಕಷ್ಟದ ಸಂಗತಿ, ನಿಮ್ಮ ಆತ್ಮೀಯ ಸ್ನೇಹಿತನೋಬ್ಬನು ಸಾವನ್ನಪ್ಪಿದರೆ, ಆಗ ಅಂತಹ ಸಂಗತಿಯನ್ನು ಅರಗಿಸಿಕೊಳ್ಳುವುದು ನಿಜಕ್ಕೂ ಕಷ್ಟಕರ.
ಇದನ್ನೂ ಓದಿ: ಕರ್ನಾಟಕದ ಬಜೆಟ್ ಇತಿಹಾಸ: ನೀವು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳು
ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಬೀದಿ ನಾಯಿಗಳು ಸಾವನ್ನಪ್ಪಿರುವ ಸಹ ನಾಯಿಯ ಅಂತ್ಯಕ್ರಿಯೆ ಮಾಡುತ್ತಿರುವ ದೃಶ್ಯ ನಿಜಕ್ಕೂ ಒಂದು ಕ್ಷಣ ಎಲ್ಲರಿಗೂ ಹುಬ್ಬೆರಿಸುತ್ತದೆ, ಸಾಮಾನ್ಯವಾಗಿ ನಾವು ಮನುಷ್ಯನಷ್ಟೇ ಬುದ್ದಿವಂತ ಪ್ರಾಣಿ ಎಂದು ಹೇಳುತ್ತೇವೆ. ಆದರೆ ಈಗ ಮೂಕ ಪ್ರಾಣಿಗಳು ಸಹಿತ ಮನುಷ್ಯರ ಹಾಗೆ ವರ್ತಿಸುವುದು ನೋಡಿದರೆ ನಿಜಕ್ಕೂ ಒಂದು ಕ್ಷಣ ಎಲ್ಲರಿಗೂ ಅಚ್ಚರಿಯನ್ನು ಮೂಡಿಸುತ್ತದೆ.
क्या ये ‘जानवर’ हैं ? pic.twitter.com/4VIxUKyNYI
— Awanish Sharan (@AwanishSharan) February 28, 2022
ಇದನ್ನೂ ಓದಿ: Karnataka Budget 2022: ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿಗೆ ಸಿಕ್ಕಿದ್ದೆಷ್ಟು?
ಸಾವನ್ನಪ್ಪಿರುವ ನಾಯಿ ಅಂತ್ಯಕ್ರಿಯೆ ಮಾಡಲು ಸಹ ಬೀದಿ ನಾಯಿಗಳು ಬಾಯಿ ಮತ್ತು ಕಾಲಿನ ಮೂಲಕ ಮಣ್ಣನ್ನು ದೂಡುವ ಮೂಲಕ ಮನುಷ್ಯನ ಹಾಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿರುವ ವೀಡಿಯೋವನ್ನು (Viral Video) ಈಗ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿದ್ದಾರೆ ಮತ್ತು ಇದುವರೆಗೆ 1 ಲಕ್ಷ 70 ಸಾವಿರ ವೀಕ್ಷಣೆಗಳನ್ನು ಕಂಡಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, ಇವು ನಿಜವಾಗಲೂ ಪ್ರಾಣಿಗಳೇ ಎಂದು ಪ್ರಶ್ನಿಸಿದ್ದಾರೆ.ಈ ವೀಡಿಯೊ ನಮ್ಮೆಲ್ಲರನ್ನೂ ಭಾವುಕರನ್ನಾಗಿಸಿದರೆ, ಮಾನವರು ಇನ್ನೂ ಯುದ್ಧವನ್ನು ಆಶ್ರಯಿಸುತ್ತಿರುವ ಜಗತ್ತಿನಲ್ಲಿ ಈ ಪುಟ್ಟ ಜೀವಿಗಳು ಪರಸ್ಪರ ಹೇಗೆ ನಿಸ್ವಾರ್ಥವಾಗಿ ಬದುಕುತ್ತಿವೆ ಎನ್ನುವುದಕ್ಕೆ ಒಂದು ನೀತಿ ಪಾಠವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.