ಬಳ್ಳಾರಿ: ಜನಪರ, ರೈತಪರ ಕಾನೂನುಗಳನ್ನು ಜನವಿರೋಧಿಯಾಗಿ ಮಾರ್ಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದಾಗಿ ಹೇಳಿದ್ದ ಮೋದಿ ಅಧೋಗತಿಗೆ ಕೊಂಡೊಯ್ದಿದ್ದಾರೆ. ಉದ್ಯೋಗ(Job) ಸೃಷ್ಟಿಯೂ ಆಗಿಲ್ಲ. ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ) ಕುಸಿದಿದೆ ಎಂದು ದೂರಿದ್ದಾರೆ.
ರಾಜ್ಯ 'ತೊಗರಿ ಬೆಳೆಗಾರ'ರಿಗೊಂದು ಗುಡ್ ನ್ಯೂಸ್..!
ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಲಿಲ್ಲ. ಇರುವ ಉದ್ಯೋಗಗಳೂ ಹೋಗುತ್ತಿವೆ. ನೋಟು ರದ್ದತಿಯಿಂದ ಕಪ್ಪು ಹಣದ ಪತ್ತೆಯೂ ಆಗಲಿಲ್ಲ. ಬಡವರ ಖಾತೆಗೆ ಹಣವೂ ಬರಲಿಲ್ಲ' ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.