ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ: ಕಾಂಗ್ರೆಸ್

ಸಿಎಂ ಬೊಮ್ಮಾಯಿಯವರೇ ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು, ತಾಕತ್ತು ತೋರಬೇಕಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Oct 26, 2022, 07:35 PM IST
  • ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವವಾಗುತ್ತದೆ
  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ
  • ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ, ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ: ಕಾಂಗ್ರೆಸ್ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಹದಗೆಟ್ಟ ರಸ್ತೆ ಗುಂಡಿಗಳ ವಿಚಾರವಾಗಿ #SayCM ಹ್ಯಾಶ್ ಟ್ಯಾಗ್ ಬಳಿಸಿ ಕಾಂಗ್ರೆಸ್ ಟೀಕಿಸಿದೆ.

‘ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ. ವೇದಿಕೆ ಮೇಲೆ ದಮ್ಮು, ತಾಕತ್ತಿನ ಸವಾಲು ಹಾಕುವ ಸಿಎಂ ಬಸವರಾಜ್ ಬೊಮ್ಮಾಯಿಯವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು, ತಾಕತ್ತು ತೋರಬೇಕಲ್ಲವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬಿಜೆಪಿಯ ಎಷ್ಟು ನಾಯಕರು ರಾಮಾಯಣವನ್ನು ಓದಿದ್ದಾರೆ?-ವಿ.ಎಸ್. ಉಗ್ರಪ್ಪ

‘ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿರುವ ಬಿಜೆಪಿ ಸರ್ಕಾರ ಈಗಾಗಲೇ ಹೂಡಿಕೆ ಮಾಡಿದವರ ಕೊಡುತ್ತಿರುವ ಉಡುಗೊರೆಯೇ ರಸ್ತೆ ಗುಂಡಿಗಳು. ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ, ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಸಿಎಂ ಬೊಮ್ಮಾಯಿಯವರೇ, ಇದೇನಾ ತಾವು ಹೂಡಿಕೆದಾರರಿಗೆ ನೀಡುವ ಭರವಸೆ, ಸೌಲಭ್ಯಗಳು?’ ಅಂತಾ ಕಾಂಗ್ರೆಸ್ ಕುಟುಕಿದೆ.

ಕಾನೂನು ಬಿಜೆಪಿಗೇ ಬೇರೆ, ಇತರರಿಗೆ ಬೇರೆ ಇದೆಯೇ?

ಬೆಂಗಳೂರಿನ ಜಯನಗರ ವಿಧಾಸಭಾ ಕ್ಷೇತ್ರದಲ್ಲಿ ವಕೀಲರ ಸಂಘದ ಅಧ್ಯಕ್ಷ, ಬಿಜೆಪಿ ನಾಯಕ ವಿವೇಕ್ ಸುಬ್ಬಾರೆಡ್ಡಿ ದೀಪಾವಳಿ ಹಬ್ಬದ ಫ್ಲೆಕ್ಸ್ ಹಾಕಿರುವ ವಿಚಾರಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ‘BBMP ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ನಿಷೇಧವಿದ್ದರೂ ಬೆಂಗಳೂರಿನಾದ್ಯಂತ 5000ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಅನಧಿಕೃತ ಬ್ಯಾನರ್‌ಗಳನ್ನು ಹಾಕಲಾಗಿದೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬೆಂಗಳೂರು ಸಿಟಿ ಪೊಲೀಸರೇ ಇವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲವೇಕೆ? ಬ್ಯಾನರ್‌ಗಳನ್ನು ತೆರವು ಮಾಡಲಿಲ್ಲ ಏಕೆ? ಕಾನೂನು ಬಿಜೆಪಿಗೇ ಬೇರೆ, ಇತರರಿಗೆ ಬೇರೆ ಇದೆಯೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ನಾಳೆ, ನಾಡಿದ್ದು ಬೆಂಗಳೂರಿನಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಹೆಚ್‌ಡಿಕೆ

‘ಕಾನೂನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಲು ಮಾತ್ರ ಇರುವುದೇ ಬಸವರಾಜ್ ಬೊಮ್ಮಾಯಿ ಅವರೇ? ಕಾಂಗ್ರೆಸ್ ಬ್ಯಾನರ್‌ಗಳಿಗೆ ತಾವು ತೋರುವ ವೀರಾವೇಶ ನಿಮ್ಮ ಪಕ್ಷದವರ ಬ್ಯಾನರ್‌ಗಳಿಗೆ ತೋರುತ್ತಿಲ್ಲವೇಕೆ? ಬೆಂಗಳೂರು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ? ತುಷಾರ್ ಗಿರಿನಾಥ್ ಅವರೇ ಕ್ರಮ ಕೈಗೊಂಡು ತಮ್ಮ ನಿಷ್ಪಕ್ಷಪಾತವನ್ನು ನಿರೂಪಿಸಿ’ ಕಾಂಗ್ರೆಸ್ ಸವಾಲು ಹಾಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News