ಮಂಗಳೂರು : ಮಂಗಳೂರು ಆಟೋ ಬ್ಲಾಸ್ಟ್ ಆರೋಪಿ ಶಾರೀಕ್ ಬಗ್ಗೆ ಇನ್ನು ಹೆಚ್ಚು ಮಾಹಿತಿಗಳು ಲಭ್ಯವಾಗುತ್ತಿವೆ. ಸ್ಪೋಟ ನಡೆಸಲು ಶಾರಿಕ್ ಟಾರ್ಗೆಟ್ ಮಾಡಿದ್ದು, ಪಂಪ್ ವೆಲ್. ಪಂಪ್ ವೆಲ್ ನಲ್ಲಿ ಬ್ಲಾಸ್ಟ್ ಮಾಡಬೇಕು ಎನ್ನುವ ಯೋಜನೆಯನ್ನು ಆರೋಪಿ ಶಾರಿಕ್ ಹೊಂದಿದ್ದ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.
ಮಂಗಳೂರು ಆಟೋ ಬ್ಲಾಸ್ಟ್ ಆರೋಪಿಯ ನಿಜವಾದ ಟಾರ್ಗೆಟ್ ನಗರದ ಪಂಪ್ ವೆಲ್ ಆಗಿತ್ತಂತೆ. ಪಂಪ್ ವೆಲ್ ನಲ್ಲಿ ಕುಕ್ಕರ್ ಇಟ್ಟು ಸ್ಪೋಟ ನಡೆಸಬೇಕು ಎನ್ನುವುದು ಆರೋಪಿಯ ಯೋಜನೆಯಾಗಿತ್ತು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಚುನಾವಣಾ ಹೊಸ್ತಿಲಿನಲ್ಲಿ ಸಿದ್ದರಾಮಯ್ಯ & ಡಿಕೆಶಿ ನಡುವೆ ಕದನ: ಬಿಜೆಪಿ ವ್ಯಂಗ್ಯ
ಸಂಜೆಯ ವೇಳೆ ಪಂಪ್‌ವೆಲ್ ಫ್ಲೈ ಓವರ್ ಕೆಳಗೆ ಅತೀ ಹೆಚ್ಚಿನ ಜನಸಂದಣಿ ಹೊಂದಿರುವ ಜಾಗ. ಹೀಗಾಗಿ, ಇಲ್ಲಿ ಕುಕ್ಕರ್ ಇಟ್ಟು ಬ್ಲಾಸ್ಟ್ ಮಾಡಬೇಕೆಂದು ಶಾರಿಕ್ ಸಂಚು ರೂಪಿಸಿದ್ದ. ಕೊಣಾಜೆ-ತೊಕ್ಕೊಟ್ಟು-ಉಳ್ಳಾಲ ಭಾಗಕ್ಕೆ ತೆರಳುವ ಜನ ಅತೀ ಹೆಚ್ಚಾಗಿ ಬಂದು ನಿಲ್ಲುವುದು ಇದೇ ಪ್ರದೇಶದಲ್ಲಿ. ಈ ಪ್ರದೇಶದಲ್ಲಿ ಬಸ್ ನಿಲ್ದಾಣ ಇಲ್ಲದಿರುವ ಕಾರಣ, ರಸ್ತೆ ಬಳಿಯೇ ಜನ ಅತಿ ಹೆಚ್ಚು ಬಂದು ನಿಲ್ಲುತ್ತಾರೆ. ಹೀಗಾಗಿ ಇಲ್ಲಿ ಸ್ಪೋಟ ನಡೆಸಿದರೆ ಭಯಾನಕ ಪರಿಣಾಮವಾಗುತ್ತದೆ ಎನ್ನುವುದು ಆರೋಪಿಯ ಪ್ಲಾನ್ ಆಗಿತ್ತು.
ಈ ನಡುವೆ, ಈ ಜಾಗದಲ್ಲಿ ಕುಕ್ಕರ್ ಬಾಂಬ್ ಇಡಲು ಪ್ಲಾನ್ ಮಾಡುತ್ತಿದ್ದ ಶಾರೀಕ್ ನ ಮತ್ತೊಂದು ಸಿಸಿ ಟಿವಿ ಕ್ಯಾಮೆರಾ ದೃಶ್ಯ ಲಭ್ಯವಾಗಿದೆ. ಪಡೀಲ್ ಬಸ್ ನಿಲ್ದಾಣದಲ್ಲಿ ಇಳಿದು ನಾಗುರಿ ಕಡೆಗೆ ಶಾರೀಕ್ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈನ್ ಶಾಪ್ ನ ಸಿಸಿ ಕ್ಯಾಮೆರಾದಲ್ಲಿ ಶಾರಿಕ್ ನಡೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ಆ ದಿನ ಶಾರಿಕ್ ಕೆಂಪು ಬಣ್ಣದ ಶರ್ಟ್ ಹಾಕಿದ್ದ. ಈ ದೃಶ್ಯದ ಆಧಾರದ ಮೇಲೆ ಮೊಹಮ್ಮದ್ ಶಾರೀಕ್ ಜೊತೆ ಮತ್ತೊಬ್ಬ ಮಂಗಳೂರಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ : KSRTC ಸಿಬ್ಬಂದಿಗಳಿಗೆ ನೂತನ ಬೊಲೆರೋ ವಾಹನ: ಅಪಘಾತ ಸಂದರ್ಭಗಳಲ್ಲಿ ಬಳಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.