ಧಾರವಾಡ: ದೋಷ ಪೂರಿತ ಸೋಲಾರ ಹೀಟರ್‍ಕೊಟ್ಟ ಹುಬ್ಬಳ್ಳಿಯ ಕಂಪನಿಗೆ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ
ಬಸವೇಶ್ವರ ಬಡಾವಣೆಯ ನಿವೃತ್ತ ಸ್ಟೇಟ್ ಬ್ಯಾಂಕ ಆಪ್ ಇಂಡಿಯಾದ ಅಧಿಕಾರಿ ದ್ಯಾಮಪ್ಪ ಸಣ್ಣಕ್ಕಿರವರು ಹೊಸದಾಗಿ ಕಟ್ಟಿಸಿದ ತಮ್ಮ ಮನೆಗೆ ಹುಬ್ಬಳ್ಳಿಯ ಮೃತ್ಯುಂಜಯ ಸೋಲಾರ ಹೀಟ ಪಾಯಿಂಟ್‍ರವರಿಂದ ರೂ.90,000/- ಹಣಕೊಟ್ಟು ಸೋಲಾರ ಸಿಸ್ಟಮ್ ಹಾಕಿಸಿಕೊಂಡಿದ್ದರು.ಕೆಲವೇ ದಿನದಲ್ಲಿ ಆ ಸೋಲಾರ ಸಿಸ್ಟಮ್‍ನಲ್ಲಿ ದೋಷ ಉಂಟಾಗಿ ಅದು ಕೆಲಸ ಮಾಡುತ್ತಿರಲಿಲ್ಲ. ಈ ಬಗ್ಗೆ ಹಲವು ಬಾರಿ ಮೌಖಿಕ ದೂರು ಹಾಗೂ ದೂರವಾಣಿ ಮೂಲಕ ದೂರು ನೀಡಿದರೂ ಎದುರುದಾರ ಮೃತ್ಯುಂಜಯ ಸೋಲಾರ ಪಾಯಿಂಟ ನವರುತಮಗೆ ಸ್ಪಂದಿಸುತ್ತಿಲ್ಲ ಕಾರಣ ಅವರಿಂದ ತನಗೆ ಮೋಸವಾಗಿ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: High Prices Of Flowers: ಯುಗಾದಿ ಪ್ರಯುಕ್ತ ದುಪ್ಪಟ್ಟಾಯಿತು ಹಣ್ಣು, ಹೂ, ತರಕಾರಿಗಳ ಬೆಲೆ!
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಸದಸ್ಯರು, ವಾರಂಟಿ ಅವಧಿಯಲ್ಲಿ ಸೋಲಾರ ಸಿಸ್ಟಮ್ ದೋಷ ಪೂರಿತ ಅಂತಾ ಕಂಡು ಬಂದಿದ್ದರಿಂದ ಮತ್ತು ದೂರು ಕೊಟ್ಟರೂ ಆ ದೋಷವನ್ನು ಸರಿಪಡಿಸದೇ ಅಥವಾ ಸೋಲಾರ ಸಿಸ್ಟಮ್ ಬದಲಾಯಿಸದೇ ಎದುರುದಾರರ ಕಂಪನಿಯವರು ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಇದನ್ನೂ ಓದಿ: ರೈತರಲ್ಲಿ ಹೊನ್ನೇರು ಸಂಭ್ರಮ... ಯುಗಾದಿ ದಿನದಂದು ಕೃಷಿ ಚಟುವಟಿಕೆ ಆರಂಭ
ಅದಕ್ಕಾಗಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಒಳ್ಳೆಯ ಕಂಪನಿಯ ಸೋಲಾರ ಸಿಸ್ಟಮ್ ದೂರುದಾರರ ಮನೆಗೆ ಅಳವಡಿಸಿಕೊಡುವಂತೆ ಆದೇಶದಲ್ಲಿ ತಿಳಿಸಿದೆ. ಒಂದು ತಿಂಗಳೊಳಗಾಗಿ ಹೊಸ ಸಿಸ್ಟಮ್ ಅಳವಡಿಸದಿದ್ದಲ್ಲಿ ಅದರ ಬೆಲೆ ರೂ.90,000/-ಗಳನ್ನು ದಿ:27/01/2021 ರಿಂದ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಮತ್ತು ಅವರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.25,000/- ಪರಿಹಾರ ಮತ್ತು ರೂ.10,000/- ಈ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರ ಮೃತ್ಯುಂಜಯ ಸೋಲಾರ ಹೀಟ್ ಪಾಯಿಂಟಗೆ ಆದೇಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ