ಯಡಿಯೂರಪ್ಪ ವಿರುದ್ಧ ಸ್ಪರ್ಧೆ ಎಂಬುದು ಸುಳ್ಳು ವದಂತಿ - ಎಂ.ಬಿ.ಪಾಟೀಲ್

ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಸ್ಪರ್ಧೆ ಬಿಜೆಪಿಯ ಆಂತರಿಕ ವಿಚಾರ.

Last Updated : Sep 18, 2017, 03:11 PM IST
ಯಡಿಯೂರಪ್ಪ ವಿರುದ್ಧ ಸ್ಪರ್ಧೆ ಎಂಬುದು ಸುಳ್ಳು ವದಂತಿ - ಎಂ.ಬಿ.ಪಾಟೀಲ್  title=
Pic: DNA

ಬೆಂಗಳೂರು: ಯಡಿಯೂರಪ್ಪ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರದ ನಂತರ, ಸಚಿವ ಎಂ.ಬಿ.ಪಾಟೀಲ್ ಯಡಿಯೂರಪ್ಪರ ವಿರುದ್ಧ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ತಮ್ಮ ಆಪ್ತರ ಬಳಿ ಹೇಳಿರುವುದಾಗಿ ಹಬ್ಬಿರುವ ವದಂತಿ ಸುಳ್ಳು ಎಂದು ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ್  ಸ್ಪಷ್ಟಪಡಿಸಿದ್ದಾರೆ.

ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ್ ಯಡಿಯೂರಪ್ಪ ಉತ್ತರ ಕರ್ನಾಟಕ ಜಿಲ್ಲೆಯಿಂದ ಸ್ಪರ್ಧಿಸುವುದು ಬಿಜೆಪಿಯ ಆಂತರಿಕ ವಿಚಾರ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ತಾವು ಯಡಿಯೂರಪ್ಪ ವಿರುದ್ದ ಸ್ಪರ್ಧಿಸುವುದಾಗಿ ಆಪ್ತರ ಬಳಿ ಹೇಳಿದ್ದೇನೆ ಎಂಬುದು ಸುಳ್ಳು ಸುದ್ದಿ. ಅಂತಹ ಚಿಲ್ಲರೆ ಹೇಳಿಕೆ ನೀಡಿಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Trending News