ಇಂದು ಸಂಜೆ ಖಾಸಗಿ ಆಸ್ಪತ್ರೆಗಳ ಜೊತೆ ಆರೋಗ್ಯ ಇಲಾಖೆ ಮಹತ್ವದ ಸಭೆ

ಒಂದೊಮ್ಮೆ ಭವಿಷ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಮುಖಾಂತರ ‌ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕಾದರೆ ಅಂತಹ ಪರಿಸ್ಥಿತಿಯಲ್ಲಿ ಎಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ (Covid Vaccine) ಶೇಖರಿಸಿಡುವ ಮೂಲ ಸೌಕರ್ಯವಿದೆ? 

Last Updated : Dec 1, 2020, 02:07 PM IST
  • ಕೋವಿಡ್ ಲಸಿಕೆ ಬಂದ ನಂತರ ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ಕೋಲ್ಡ್ ಸ್ಟೋರೇಜ್ ಬಳಸಿಕೊಳ್ಳುವ ಕುರಿತು ಖಾಸಗಿ ಆಸ್ಪತ್ರೆಗಳ ಮುಖಂಡರ ಜೊತೆ ಮಹತ್ವದ ಸಭೆ
  • ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆ ಶೇಖರಣೆ ಮಾಡಲು‌ ಇನ್ನೂ ಅನುಮತಿ ಕೊಟ್ಟಿಲ್ಲ.
  • ಹಾಗೆಯೇ ಖಾಸಗಿ ಮಾರಾಟಕ್ಕೂ ಅವಕಾಶ ಇಲ್ಲ.
ಇಂದು ಸಂಜೆ ಖಾಸಗಿ ಆಸ್ಪತ್ರೆಗಳ ಜೊತೆ ಆರೋಗ್ಯ ಇಲಾಖೆ ಮಹತ್ವದ ಸಭೆ title=
File Image

ಬೆಂಗಳೂರು: ಕೋವಿಡ್ ಲಸಿಕೆ ಬಂದ ನಂತರ ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ಕೋಲ್ಡ್ ಸ್ಟೋರೇಜ್ ಬಳಸಿಕೊಳ್ಳುವ ಕುರಿತು ರಾಜ್ಯ ಆರೋಗ್ಯ ಇಲಾಖೆಯು ಇಂದು ಸಂಜೆ ಖಾಸಗಿ ಆಸ್ಪತ್ರೆಗಳ ಮುಖಂಡರ ಜೊತೆ ಮಹತ್ವದ ಸಭೆ ನಡೆಸಲಿದೆ.

ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆ ಶೇಖರಣೆ ಮಾಡಲು‌ ಇನ್ನೂ ಅನುಮತಿ ಕೊಟ್ಟಿಲ್ಲ. ಹಾಗೆಯೇ ಖಾಸಗಿ ಮಾರಾಟಕ್ಕೂ ಅವಕಾಶ ಇಲ್ಲ. ಒಂದೊಮ್ಮೆ ಭವಿಷ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಮುಖಾಂತರ ‌ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕಾದರೆ ಅಂತಹ ಪರಿಸ್ಥಿತಿಯಲ್ಲಿ ಎಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ (Covid Vaccine) ಶೇಖರಿಸಿಡುವ ಮೂಲ ಸೌಕರ್ಯವಿದೆ? ಎಂಬುದನ್ನು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.

ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಇದಲ್ಲದೆ ಕೋವಿಡ್ 19 (Covid 19) ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲೇ ಇಡಬೇಕಾಗುತ್ತದೆ. ಈ‌ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲು ಖಾಸಗಿ ಆಸ್ಪತ್ರೆಗಳ ಶೀತಾಗಾರಗಳನ್ನು ಬಳಸಿಕೊಳ್ಳಲು ಸಾಧ್ಯವೇ? ಇದಕ್ಕೆ ಯಾವ್ಯಾವ ಆಸ್ಪತ್ರೆಗಳು ಸಿದ್ದ ಇವೆ ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ.

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ: ಸಚಿವ ಡಾ. ಕೆ. ಸುಧಾಕರ್

ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ (Private hospitals) ಎಷ್ಟು ಕೋವಿಡ್ ಲಸಿಕೆ ಶೇಖರಣೆ ಮಾಡುವ ಸೌಕರ್ಯವಿದೆ? ಯಾವ ಯಾವ ಆಸ್ಪತ್ರೆಗಳಲ್ಲಿ ಇವೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಇಂದಿನ ಸಭೆಗೆ ಪ್ರಮುಖ ಆಸ್ಪತ್ರೆಗಳು ಎನ್ನಲಾದ ಅಪೊಲೊ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ.

ಈ ದೇಶಕ್ಕೆ Corona Vaccine ಅಗತ್ಯವೇ ಇಲ್ಲವಂತೆ

ಆರೋಗ್ಯ ಇಲಾಖೆ ಅಧಿಕಾರಿಗಳು, ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ಬಿಬಿಎಂಪಿ ವಿಶೇಷ ಆಯುಕ್ತರು, ವಲಯವಾರು ಆರೋಗ್ಯಾಧಿಕಾರಿಗಳು ಸಭೆಯಲ್ಲಿ  ಉಪಸ್ಥಿತರಿರುತ್ತಾರೆ.

Trending News