ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯಗಳು ಯಾವ ರೀತಿಯ ವ್ಯವಸ್ಥೆ ಮತ್ತು ತಯಾರಿ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ಲಸಿಕೆ ವಿತರಣೆ ಬಗ್ಗೆ ದೇಶಾದ್ಯಂತ ಸಾಮಾನ್ಯವಾದ ವ್ಯವಸ್ಥೆಯೊಂದನ್ನು ಮಾಡಿಕೊಳ್ಳೋಣ. 

Last Updated : Nov 24, 2020, 03:10 PM IST
  • ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಮಾಡಬಾರದು.
  • ಲಸಿಕೆ ತಯಾರಿಕೆ ಬಗ್ಗೆ ವಿಜ್ಞಾನಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ.
  • ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು- ಪ್ರಧಾನಿ ಮೋದಿ ಸೂಚನೆ
ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ  ಮೋದಿ title=

ನವದೆಹಲಿ: ಕೋವಿಡ್ -19 (COVID-19) ಮಹಾಮಾರಿಗೆ ಯಾವಾಗಬೇಕಾದರೂ ಲಸಿಕೆ ಬರಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ತಿಳಿಸಿದ್ದಾರೆ. 

ಕೋವಿಡ್ -19 (Covid 19) ವೈರಸ್ ಹರಡುತ್ತಿರುವ ಪರಿಸ್ಥಿತಿ ಬಗ್ಗೆ  ಮತ್ತು ಲಸಿಕೆ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಇಂದು ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕೊರೊನಾಗೆ ಯಾವಾಗಬೇಕಾದರೂ ಲಸಿಕೆ ಬರಬಹುದು ಎಂದು ಹೇಳಿದರು.

ಕೇವಲ 5 ನಿಮಿಷ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಲಸಿಕೆ (Covid Vaccine) ಬರುವವರೆಗೂ ನಿರ್ಲಕ್ಷ್ಯ ಮಾಡಬಾರದು. ಲಸಿಕೆ ತಯಾರಿಕೆ ಬಗ್ಗೆ ವಿಜ್ಞಾನಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ದೇಶದೆಲ್ಲೆಡೆ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆ, ಹಲವಡೆ ರಾತ್ರಿ ಕರ್ಪ್ಯೂ ಜಾರಿ

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯಗಳು ಯಾವ ರೀತಿಯ ವ್ಯವಸ್ಥೆ ಮತ್ತು ತಯಾರಿ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ಲಸಿಕೆ ವಿತರಣೆ ಬಗ್ಗೆ ದೇಶಾದ್ಯಂತ ಸಾಮಾನ್ಯವಾದ ವ್ಯವಸ್ಥೆಯೊಂದನ್ನು ಮಾಡಿಕೊಳ್ಳೋಣ. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆ ಕೆಲವು ನಿಯಮ ರೂಪಿಸಿದೆ ಅದರ ಪ್ರಕಾರ ತಯಾರಿಗಳನ್ನು ನಡೆಸಿ ಎಂದು ಹೇಳಿದರು.

ಲಸಿಕೆ ತಯಾರಿಕೆ ಅತಿ ದೊಡ್ಡ ಪ್ರಕ್ರಿಯೆಯಾಗಿರುತ್ತದೆ. ಇದಕ್ಕೆ ಚುನಾವಣೆ ಮಾದರಿಯಲ್ಲಿ ಸಜ್ಜಾಗಬೇಕು ಎಂದು ಹೇಳಿದ ನರೇಂದ್ರ ಮೋದಿ, ಲಸಿಕೆ ಬರುತ್ತದೆ ಎಂಬ ಕಾರಣಕ್ಕೆ ಕೊರೋನಾ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಬಾರದು ಎಂದು ಎಚ್ಚರಿಸಿದರು.

Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ

ಸದ್ಯ ಎಷ್ಟು ಲಸಿಕೆ ಬರುತ್ತದೆ ಎಂದು ಹೇಳದ ಪ್ರಧಾನಿ ಮೋದಿ, ಲಸಿಕೆ ಬಂದ ಮೇಲೆ ಅದರ ಉತ್ಪಾದನೆ ಕ್ರಮೇಣವಾಗಿ ಹೆಚ್ಚಾಗುತ್ತದೆ. ಅಲ್ಲಿಯವರೆಗೂ ಬಹಳ ಜಾಗರೂಕತೆಯಿಂದಲೇ ಕೊರೋನಾವನ್ನು ನಿಯಂತ್ರಿಸಬೇಕಾಗುತ್ತದೆ ಎಂದರು.‌ ಕೊರೊನಾದಿಂದ ಸವಾನ್ನಪ್ಪುವವರ ಪ್ರಮಾಣವನ್ನು ಮತ್ತು ಕೊರೊನಾ ಸೋಂಕು ಹರಡುವ ಪ್ರಮಾಣವನ್ನು ಕಡಿಮೆಗೊಳಿಸಲು ಗಮನ ನೀಡಿ ಎಂದು ಹೇಳಿದರು.

Trending News