ಬೆಂಗಳೂರು: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಮತ್ತದೆ ಚಳಿಗಾಳಿ, ತುಂತುರುಮಳೆ ಆರಂಭವಾಗಿದೆ.
ಮ್ಯಾಂಡೌಸ್ ಅಬ್ಬರದ ಬಳಿಕ ಕೊಂಚ ರಿಲ್ಯಾಕ್ಸ್ ನೀಡಿದ್ದ ವರುಣದೇವ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾನೆ. ರಾಜ್ಯಕ್ಕೆ ಅನೇಕ ಕಡೆ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಬಂಗಾಲಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತ ಹಿನ್ನೆಲೆ ಸದ್ಯ ರಾಜ್ಯದಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: Big Boss Kannada 9 : ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...!
ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಬೆಂಗಳೂರು ನಗರ, ಬೆ. ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಶೀತಗಾಳಿ ಹಾಗೂ ಚಳಿ ಹೆಚ್ಚಾಗುವ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: BBK 9: ಇವರೇ ನೋಡಿ ಬಿಗ್ ಬಾಸ್ ಕನ್ನಡ ಫೈನಲಿಸ್ಟ್
ಬೆಂಗಳೂರಲ್ಲಿ ಮುಂದುವರೆಯಲಿದೆ ಕೂಲ್ ಕೂಲ್ ವೆದರ್;
ಇನ್ನುಳಿದಂತೆ ಬೆಂಗಳೂರಲ್ಲೂ ಬೆಳಗ್ಗೆಯಿಂದಲೇ ಬಹುತೇಕ ಕಡೆ ಜಿಟಿಜಿಡಿ ಮಳೆ ಸುರಿದಿದೆ. ಜೊತೆಗೆ ಇದೇ ವಾತಾವರಣ ಎರಡು ದಿನ ಮುಂದುವರೆಯಲಿದೆ ಎನ್ನಲಾಗಿದೆ. ಜೊತೆಗೆ ಮುಂಜಾನೆ ವೇಳೆ ಹೆಚ್ಚು ಮಂಜು ಕವಿಯುವ ಸಾಧ್ಯತೆ ಇದೆ. ಅಲ್ಲದೆ ಕನಿಷ್ಠ ತಾಪಮಾನ ಕೂಡ ಸಾಮಾನ್ಯಕ್ಕಿಂತ ಇಳಿಕೆ ಕಾಣುವ ಸಾಧ್ಯತೆ ಇದೆಯಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಒಟ್ಟಾರೆ ಇನ್ನೆರೆಡು ದಿನ ಬೆಂಗಳೂರು ಕೂಲ್ ಆಗಿರಲಿದೆ. ಇದರ ಜೊತೆ ಜಡಿಮಳೆ ಸಹ ಕಾಡಲಿದ್ದು ಜನ ಕೊಂಚ ಎಚ್ಚರಿಕೆ ವಹಿಸಿದ್ರೆ ಸೂಕ್ತ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.