ಮೊದಲು ನೋಡಿದಾಗ ಪ್ರದೀಪ್ ಈಶ್ವರ್‌ನನ್ನು ಹುಚ್ಚ ಅನ್ಕೊಂಡಿದ್ದೆ: ಡಿ.ಕೆ.ಶಿವಕುಮಾರ್

ಎಂ.ಎಸ್.ಕೃಷ್ಣ ಮತ್ತು ಎಸ್.ಬಂಗಾರಪ್ಪನವರ ಸಂಪುಟದಲ್ಲಿ ನಾನು ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಆಗಿರುವ ಸಂತೋಷಕ್ಕಿಂತ ಮೈಸೂರಿನಲ್ಲಿ ಪದವೀಧರ ಸರ್ಟಿಫಿಕೇಟ್ ತೆಗೆದುಕೊಂಡಾಗ ಆಗಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

Written by - Puttaraj K Alur | Last Updated : Jun 22, 2024, 10:19 PM IST
  • ಪ್ರದೀಪ್ ಈಶ್ವರ್‌ನನ್ನು ಮೊದಲು ನೋಡಿದಾಗ ಯಾರೋ ಹುಚ್ಚ ಅನ್ಕೊಂಡಿದ್ದೆ
  • ಪ್ರದೀಪ್ ಈಶ್ವರ್‌ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟ ಕಥೆ ಹೇಳಿದ ಡಿ.ಕೆ.ಶಿವಕುಮಾರ್
  • ಪರಿಶ್ರಮ ನೀಟ್‌ ಅಕಾಡೆಮಿಯ ವಿದ್ಯಾರ್ಥಿಗಳಿಂದ ಪ್ರತಿವರ್ಷ ಉತ್ತಮ ಸಾಧನೆ
ಮೊದಲು ನೋಡಿದಾಗ ಪ್ರದೀಪ್ ಈಶ್ವರ್‌ನನ್ನು ಹುಚ್ಚ ಅನ್ಕೊಂಡಿದ್ದೆ: ಡಿ.ಕೆ.ಶಿವಕುಮಾರ್ title=
ಶಿಕ್ಷಣ ಅತ್ಯಂತ ಶಕ್ತಿಶಾಲಿ ಆಯುಧ

ಬೆಂಗಳೂರು: ಪ್ರದೀಪ್ ಈಶ್ವರ್‌ನನ್ನು ಮೊದಲು ನೋಡಿದಾಗ ಯಾರೋ ಹುಚ್ಚ ಅನ್ಕೊಂಡಿದ್ದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪರಿಶ್ರಮ ನೀಟ್ ಅಕಾಡೆಮಿ-2024ರ ಸನ್ಮಾನ ಸಮಾರಂಭದಲ್ಲಿ 2023-24ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಪ್ರದೀಪ್ ಈಶ್ವರ್‌ನನ್ನು ಮೊದಲ ಬಾರಿಗೆ ನನ್ನ ಬಳಿ ಕರೆದುಕೊಂಡು ಬಂದು ನನಗೆ ಪರಿಚಯಿಸಿದ್ದರು. ಅಂದು ನಾನು ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದಿಯಲ್ಲಯ್ಯ ಅಂತಾ ಹೇಳಿದ್ದೆ. ಆದರೆ ಪ್ರದೀಪ್‌ ಈಶ್ವರ್‌ ಉಪಯೋಗಕ್ಕೆ ಬರುತ್ತಾರೆ. ಒಂದು ಅವಕಾಶ ನೀಡಿ ಅಂತಾ ಎಂ.ಸಿ.ಸುಧಾಕರ್ ನನಗೆ ಹೇಳಿದ್ದರು ಎಂದು ಡಿಕೆಶಿ ಹೇಳಿದ್ದಾರೆ. 

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ : 139 ವಸ್ತುಗಳು ಖಾಕಿ ವಶಕ್ಕೆ

ಪ್ರದೀಪ್ ಈಶ್ವರ್ ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕರಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ. ನಾನು ಸಣ್ಣ ವಯಸ್ಸಿನಲ್ಲಿ ಮಂತ್ರಿ ಆದೆ, ನನಗೆ ಆಗ ಓದಲು ಆಗಲಿಲ್ಲ. ೩ ಜನ ಮಕ್ಕಳ ಆದರೂ ಯಾಕೆ ಪದವೀಧರ ಆಗಿಲ್ಲವೆಂದು ಕೇಳಬಹುದು ಅಂತಾ ಓಪನ್ ಯೂನಿವರ್ಸಿಟಿಯಲ್ಲಿ ಓದಿದೆ. 48ನೇ ವಯಸ್ಸಿನಲ್ಲಿ ಪದವೀಧರನಾದೆ ಎಂದು ಡಿಕೆಶಿ ತಿಳಿಸಿದರು. 

ಎಂ.ಎಸ್.ಕೃಷ್ಣ ಮತ್ತು ಎಸ್.ಬಂಗಾರಪ್ಪನವರ ಸಂಪುಟದಲ್ಲಿ ನಾನು ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಆಗಿರುವ ಸಂತೋಷಕ್ಕಿಂತ ಮೈಸೂರಿನಲ್ಲಿ ಪದವೀಧರ ಸರ್ಟಿಫಿಕೇಟ್ ತೆಗೆದುಕೊಂಡಾಗ ಆಗಿತ್ತು. ಪ್ರದೀಪ್ ಈಶ್ವರ್ ನನ್ನ ಬಳಿ ಬಂದು ʼಪರಿಶ್ರಮʼಕ್ಕೆ ಜಾಗ ಕೇಳಿದ್ದರು. ಆಗ ಪೆನ್ನು-ಪೇಪರ್ ಕೊಟ್ಟೀದ್ದೀರಿ, ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: 11 ದಿನ ಕಸ್ಟಡಿಯಲ್ಲಿದ್ರೂ ದರ್ಶನ್‌ ದೇಹದ ತೂಕದಲ್ಲಿ ವ್ಯತ್ಯಾಸವಿಲ್ಲ

ಶಿಕ್ಷಣ ಅನ್ನುವುದು ಅತ್ಯಂತ ಶಕ್ತಿಶಾಲಿ ಆಯುಧವಾಗಿದೆ. ಪರಿಶ್ರಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಾನು ಸಂಸ್ಥೆಯ ಬೆಳವಣಿಗೆ ಮತ್ತು ಸಾಧನೆಯನ್ನು ಗಮನಿಸುತ್ತಿರುತ್ತೇನೆ. ಪ್ರತಿ ವರ್ಷವೂ ಈ ಸಂಸ್ಥೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದು, ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಡಿಕೆಶಿ ಹೇಳಿದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News