"ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ" : ಡಾಲಿ ಸೈಲೆಂಟ್‌ ಆಗಿ ವಾರ್ನ್‌ ಕೊಟ್ಟಿದ್ಯಾರಿಗೆ?

Daali Dhananjay : ಚಂದನವನದಲ್ಲಿ ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಛಾಪು ಮೂಡಿಸಿದವರು ಡಾಲಿ ಧನಂಜಯ್. ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಆಕ್ಟರ್ ಡಾಲಿ, ಯಾವುದೇ ಪಾತ್ರ ಸಿಕ್ಕಿದ್ರೂ ಅದನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ.

Written by - Chetana Devarmani | Last Updated : Jan 6, 2023, 04:58 PM IST
  • "ಹಸಿದಂತ ಮಂದಿಗೆ ಇಲ್ಲಿ, ಗೆಲ್ಲೋದೊಂದೇ ಗುಂಗು"
  • "ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ"
  • ಡಾಲಿ ಸೈಲೆಂಟ್‌ ಆಗಿ ವಾರ್ನ್‌ ಕೊಟ್ಟಿದ್ಯಾರಿಗೆ?
"ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ" : ಡಾಲಿ ಸೈಲೆಂಟ್‌ ಆಗಿ ವಾರ್ನ್‌ ಕೊಟ್ಟಿದ್ಯಾರಿಗೆ? title=
ಧನಂಜಯ್

Daali Dhananjay : ಚಂದನವನದಲ್ಲಿ ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಛಾಪು ಮೂಡಿಸಿದವರು ಡಾಲಿ ಧನಂಜಯ್. ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಆಕ್ಟರ್ ಡಾಲಿ, ಯಾವುದೇ ಪಾತ್ರ ಸಿಕ್ಕಿದ್ರೂ ಅದನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ. ಆ ಪಾತ್ರಕ್ಕೆ ಜೀವ ತುಂಬಿ ಜನರ ಹೃದಯ ಗೆಲ್ಲುತ್ತಾರೆ. ಮಾಸ್‌ಗೂ ಕ್ಲಾಸ್‌ಗೂ ರೆಡಿ ಎಂಬಂತೆ ಡಾಲಿ ಅಭಿನಯಿಸುತ್ತಾರೆ. 

ಇದನ್ನೂ ಓದಿ : Tamannaah : ಏರ್ಪೋರ್ಟ್‌ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ! ಲವ್‌ಬರ್ಡ್ಸ್ ಹೋಗಿದ್ದೆಲ್ಲಿ?

ಡಾಲಿಯ ಟ್ಯಾಲೆಂಟ್‌ ಕೇವಲ ಅಭಿನಯಕ್ಕೆ ಸೀಮಿತವಲ್ಲ. ಒಂದೊಮ್ಮೆ ಪೆನ್ನು ಹಿಡಿದು ಕುಳಿತರೆ ಅವರ ಬರೆಯುವ ಒಂದೊಂದು ಸಾಲುಗಳು ವರ್ಣಿಸಲಸಾಧ್ಯ. ಇದೀಗ ಡಾಲಿ ಧನಂಜಯ್ 10 ಸಾಲಿನ ಕವಿತೆಯೊಂದನ್ನು ಬರೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕವಿತೆ ಓದೋಕೆ ಸಖತ್‌ ಮಾಸ್‌ ಆಗಿದ್ದು, ಯಾರಿಗೋ ಸೈಲೆಂಟ್‌ ಆಗಿ ವಾರ್ನ್‌ ಕೊಡುತ್ತಿರುವಂತಿದೆ. ಅಕ್ಷರಗಳ ಮೂಲಕವೇ ತೊಡೆ ತಟ್ಟಿ ಸಮರ ಸಾರಲು ಸಜ್ಜಾದಂತಿದೆ. 

 

 

ಧನಂಜಯ್ ಬರೆದ ಈ 10 ಸಾಲುಗಳ ಈ ಕವಿತೆ ಸದ್ಯ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಡಾಲಿ ಪ್ರತಿಭೆಯನ್ನು ಹಾಡಿ ಹೊಗಳುತ್ತಿದ್ದರೆ, ಮತ್ತೆ ಕೆಲವರು ಈ ಲೈನ್‌ಗಳ ಒಳ ಅರ್ಥವೇನು ಎಂಬ ಹುಡುಕಾಟದಲ್ಲಿ ನಿರತರಾಗಿದ್ದಾರೆ. "ಸುಟ್ಟು ಸುಟ್ಟು ಸುಟ್ಟಾರು ನನ್ನ, ಸುಟ್ಟು ಬೆಳಕಾಗಿ ಉರಿವೆ.. ಮುಚ್ಚಾರು ಮಣ್ಣಲ್ಲೇ ನನ್ನ, ಮರವಾಗಿ ಬೆಳೆವೆ.. ಹಾರಾಡೋ ಹಕ್ಕಿಗೆ ಇಲ್ಲಿ, ಯಾವುದೇ ಗಡಿಯ ಹಂಗು.. ಹಸಿದಂತ ಮಂದಿಗೆ ಇಲ್ಲಿ, ಗೆಲ್ಲೋದೊಂದೇ ಗುಂಗು.. ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನಿನ್ನ" ಎಂದು ಡಾಲಿ ಬರೆದಿದ್ದಾರೆ. 

 

 

ಇದನ್ನೂ ಓದಿ : Samantha : ಮೊದಲ ಬಾರಿಗೆ ಮನೆಯಿಂದ ಹೊರಬಂದ ಸಮಂತಾ... ಹೇಗಿದೆ ಆರೋಗ್ಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News