ಬೆಂಗಳೂರು :- ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಕೋವಿಡ್-19ಗೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಕಚೇರಿಯಲ್ಲಿ ಜುಲೈ 14ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೇರ ಸಂದರ್ಶನ ಕರೆಯಲಾಗಿದ್ದು ( ವಾಕ್ ಇನ್ ಇಂಟರ್‍ವ್ಯೂವ್) ಅರ್ಹ ಆಸಕ್ತರು ಹಾಜರಾಗಬಹುದು.
ಮೈಕ್ರೋಬಯೋಜಿಸ್ಟ್ ಒಂದು ಹುದ್ದೆಗೆ ಮೆಡಿಕಲ್ ಗ್ರ್ಯಾಜುಯೇಟ್ ಜೊತೆ ಪೋಸ್ಟ್ ಗ್ರ್ಯಾಜುಯೇಟ್ ಡಿಗ್ರಿ ಅಥವಾ ಡಿಪ್ಲೋಮ (ಮೈಕ್ರೋಬಯೋಲಾಜಿ, ವೈರಾಲಾಜಿ, ಪೆಥಾಲಾಜಿ ಮತ್ತು ಇತರೆ ಲ್ಯಾಬ್ ಸೈನ್ಸ್) ಅಥವಾ ಮೆಡಿಕಲ್ ಗ್ರ್ಯಾಜುಯೇಟ್ ಜೊತೆ ಲ್ಯಾಬರೇಟರಿ ಸೈನ್ಸ್‍ನೊಂದಿಗೆ 2 ವರ್ಷಗಳ ಅನುಭವ ಹೊಂದಿರುವ ಅಥವಾ ಮೆಡಿಕಲ್ ಮೈಕ್ರೋಬಯೋಲಾಜಿ ವಿಷಯದಲ್ಲಿ ಎಂ.ಎಸ್ಸಿ ಜೊತೆ ಮೆಡಿಕಲ್ ಮೈಕ್ರೋಬಯೋಲಾಜಿಯಲ್ಲಿ 2 ವರ್ಷ ಅನುಭವಹೊಂದಿರಬೇಕು. ಅಭ್ಯರ್ಥಿಯ ಗರಿಷ್ಟ ವಯೋಮಿತಿ 60 ವರ್ಷಗಳು. ತಿಂಗಳಿಗೆ 40ಸಾವಿರ ವೇತನವನ್ನು ನೀಡಲಾಗುತ್ತದೆ.
ಲ್ಯಾಬ್ ಟೆಕ್ನಿಷಿಯನ್ ಒಂದು ಹುದ್ದೆಗೆ ಎಸ್.ಎಸ್.ಎಲ್.ಸಿ. ಜೊತೆ 3ವರ್ಷಗಳ ಡಿ.ಎಂ.ಎಲ್.ಟಿ ಅಥವಾ ದ್ವಿತೀಯ ಪಿ.ಯು.ಸಿ ಜೊತೆ 2ವರ್ಷಗಳ ಪ್ಯಾರ ಮೆಡಿಕಲ್ ಬೋರ್ಡ್ ಲ್ಯಾಬ್ ಟೆಕ್ನಿಷಿಯನ್ ಅಥವಾ ಎಸ್.ಎಸ್.ಎಲ್.ಸಿ. ಜೊತೆ ಕರ್ನಾಟಕ ವೊಕೇಷನಲ್ ಬೋರ್ಡ್‍ನಿಂದ 2ವರ್ಷಗಳ ಲ್ಯಾಬ್ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು. ಅಭ್ಯರ್ಥಿಯ ಗರಿಷ್ಟ ವಯೋಮಿತಿ 40 ವರ್ಷಗಳು. ತಿಂಗಳಿಗೆ 14ಸಾವಿರ ವೇತನವನ್ನು ನೀಡಲಾಗುತ್ತದೆ.
ನೇಮಕಾತಿವು ತಾತ್ಕಾಲಿಕವಾಗಿದ್ದು 3 ತಿಂಗಳ ಅವಧಿಯವರೆಗೆ ಅಥವಾ ಮುಂದಿನ ಆದೇಶದ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ನೇಮಕಾತಿಯನ್ನು ಮೆರಿಟ್ ಹಾಗೂ ಅನುಭವವ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಚಿತ ವೇತನವನ್ನು ಹೊರತುಪಡಿಸಿ ಇತರೆ ಭತ್ಯಗಳಿಗೆ ಅರ್ಹರಾಗಿರುವುದಿಲ್ಲ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು ಮತ್ತು ಅವುಗಳ ದೃಢಿಕೃತ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಸದಸ್ಯ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.