ಅನರ್ಹ ಶಾಸಕರೀಗ ಬಿಜೆಪಿ ಮುಂದೆ ಭಿಕ್ಷುಕರಂತಾಗಿದ್ದಾರೆ: ದಿನೇಶ್ ಗುಂಡುರಾವ್

ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.

Last Updated : Sep 18, 2019, 06:26 AM IST
ಅನರ್ಹ ಶಾಸಕರೀಗ ಬಿಜೆಪಿ ಮುಂದೆ ಭಿಕ್ಷುಕರಂತಾಗಿದ್ದಾರೆ: ದಿನೇಶ್ ಗುಂಡುರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಾಜರಂತೆ ಇದ್ದ ಅನರ್ಹ ಶಾಸಕರು ಬಿಜೆಪಿಗೆ ಹೋದ ಬಳಿಕ ಭಿಕ್ಷುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ನಂಬಿ ಮೋಸಹೋಗಬೇಡಿ ಎಂದು ಈ ಹಿಂದೆ ಸಹ ಶಾಸಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಆದರೂ ಪಕ್ಷದ್ರೋಹ ಮಾಡಿ ಬೆಜೆಪಿ ಸೇರಿದರು. ಈಗ ಬಿಜೆಪಿ ಮುಂದೆ ಭಿಕ್ಷುಕರಂತಾಗಿದ್ದಾರೆ ಎಂದು ಟೀಕಿಸಿದರು.

ಅನರ್ಹ ಶಾಸಕರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ರಮೇಶ್ ಕುಮಾರ್ ಸ್ಪೀಕರ್ ಆಗಿದ್ದಾಗ ಕಾನುನಾತ್ಮಕವಾಗಿಯೇ ಕ್ರಮ ಕೈಗೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪಕ್ಷದ್ರೋಹಿಗಳು. ಮತ್ತೆ ಕೆರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

More Stories

Trending News