Basanagouda Patil Yatnal : ಡಿಕೆಶಿ ಕಚ್ಚಾ ಬಾದಾಮ್ ಗ್ಯಾಂಗ್ ಎಂದು ಶಾಸಕ ಯತ್ನಾಳ್ ಲೇವಡಿ!

ಕಚ್ಚಾ ಬಾದಾಮ್ ಗ್ಯಾಂಗ್ ಯಾರು ಎಂಬ ಪ್ರಶ್ನೆಗೆ ಅದೇ ಮುಖ್ಯಮಂತ್ರಿ ಆಗೋಕೆ ಪಾದಯಾತ್ರೆ ಮಾಡ್ತಿದ್ದೀರಲ್ಲ ಅವ್ರೇ ಎಂದು ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ನೀಡಿದರು.

Written by - Prashobh Devanahalli | Last Updated : Mar 10, 2022, 03:31 PM IST
  • ಸದನದಲ್ಲಿ ಸಿದ್ದರಾಮಯ್ಯ ಗ್ಯಾಂಗ್ ಮಾತ್ರ ಇದೆ
  • ಆದರೆ ಕಚ್ಚಾ ಬಾದಾಮ್ ಗ್ಯಾಂಗ್ ಇರಲಿಲ್ಲ
  • ಉತ್ತರ ಪ್ರದೇಶ ಗೂಂಡಾಗಳ ರಾಜ್ಯಾವಾಗಿತ್ತು
Basanagouda Patil Yatnal : ಡಿಕೆಶಿ ಕಚ್ಚಾ ಬಾದಾಮ್ ಗ್ಯಾಂಗ್ ಎಂದು ಶಾಸಕ ಯತ್ನಾಳ್ ಲೇವಡಿ! title=

ಬೆಂಗಳೂರು : ಸದನದಲ್ಲಿ ಸಿದ್ದರಾಮಯ್ಯ ಗ್ಯಾಂಗ್ ಮಾತ್ರ ಇದೆ‌, ಆದರೆ ಕಚ್ಚಾ ಬಾದಾಮ್ ಗ್ಯಾಂಗ್ ಇರಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ಕಚ್ಚಾ ಬಾದಾಮ್ ಗ್ಯಾಂಗ್ ಯಾರು ಎಂಬ ಪ್ರಶ್ನೆಗೆ ಅದೇ ಮುಖ್ಯಮಂತ್ರಿ ಆಗೋಕೆ ಪಾದಯಾತ್ರೆ ಮಾಡ್ತಿದ್ದೀರಲ್ಲ ಅವ್ರೇ ಎಂದು ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ನೀಡಿದರು.

ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಕಾಂಗ್ರೆಸ್(Congress) ಸೋಲು ಹಿನ್ನೆಲೆ, ವಿಧಾನಸೌಧದಲ್ಲಿ ಮಾತನಾಡಿದ  ಇವರು ಕಾಂಗ್ರೆಸ್ ನವ್ರು ಕೃಷ್ಣೆಯ ಕಡೆ ನಡಿಗೆ ಹೋಗೋದು ಬೇಡ, ಅವ್ರು ಇನ್ನೂ ಇಟಲಿ ಕಡೆ ನಡಿಗೆ ಹೋಗಲಿ ಎಂದರು.

ಇದನ್ನೂ ಓದಿ : Siddaramaiah : 'ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ'

ಸಚಿವ ನಿರಾಣಿ ದೆಹಲಿ ಪ್ರವಾಸ ಹೋಗಿರುವ ವಿಚಾರವಾಗಿ ಮಾತನಾಡಿದ ಶಾಸಕ ಯತ್ನಾಳ್(Basanagouda Patil Yatnal), ಬಿಜೆಪಿ ಮುಖಂಡ ಯತ್ನಾಳ್ ಪ್ರತಿಕ್ರಿಯೆ ನೀಡಿ, ಅವರು ಹೋಗ್ತಾರೆ, ಬರ್ತಾರೆ ಆದ್ರೆ ಹೈ ಕಮಾಂಡ್ ನಾಯಕರಿಗೆ ಮೊದಲೇ ಇವರ ಎಲ್ಲಾ ಜಾತಕಗಳನ್ನು ತರಸಿಕೊಂಡಿರುತ್ತಾರೆ.

ಸುಮ್ನೆ ಹೋಗಬೇಕು ಗಿಪ್ಟ್ ಕೊಟ್ಟಬರಬೇಕು ಅಷ್ಟೇ, ವರಿಷ್ಠರಿಗೆ ಎಲ್ಲಾ ಗೊತ್ತಿರುತ್ತೆ ಗಿಪ್ಟ್(Gift) ಕೊಟ್ಟು ಏನಾದರೂ ಮಾಡಿಸ್ಕೊಳಕ್ಕೆ ನೋಡ್ತಾರೆ ಆದ್ರೆ ಅದು ಆಗಲ್ಲ ಮತ್ತುಇವರ ಗಿಪ್ಟ್ ತೆಗೆದುಕೊಳ್ಳಲು ಅಲ್ಲಿ ಯಾರ ತಯಾರಿಲ್ಲ ಎಂದರು.

ಉತ್ತರ ಪ್ರದೇಶ ಗೂಂಡಾಗಳ ರಾಜ್ಯಾವಾಗಿತ್ತು, ಭ್ರಷ್ಟಾಚಾರ ಹೆಚ್ಚಾಗಿತ್ತು, ವಂಶವಾಹಿ ಅಡಳಿತ ವಾಗಿದೆ. ಈಗ ಎಲ್ಲ ಬದಲಾವಣೆ ಆಗಿದೆ. ಯೋಗಿ(Yogi Adityanath) ಎರಡನೇ ಬಾರಿಗೆ ಗೆಲ್ಲುವು ಸಾಧಿಸಿದ್ದಾರೆ, ಪ್ರಧಾನಿ ಮೋದಿ ನಾಯಕತ್ವವನ್ನು ಯುಪಿ ಜನರು ಒಪ್ಪಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : DV Sadanand gowda : 'ಡಿಕೆಶಿ ಕೂಡಾ ಗೋವಾದಲ್ಲಿ ಗಾಳ ಹಾಕೋಕೆ ಹೋಗಿದ್ದಾರೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News