ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಎಷ್ಟು ಬಾರಿ ಸ್ಪರ್ಧೆಸಿದ್ದೇನೆಂದು ಕುಮಾರಸ್ವಾಮಿಗೆ ಗೊತ್ತಿದೆಯೇ? ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯಲ್ಲಿ ನನ್ನ ವಿರುದ್ಧ ನಿಂತರು. ಆದರೆ ಗೆದ್ದವರು ಯಾರು?

Last Updated : Mar 29, 2018, 03:27 PM IST
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಎಷ್ಟು ಬಾರಿ ಸ್ಪರ್ಧೆಸಿದ್ದೇನೆಂದು ಕುಮಾರಸ್ವಾಮಿಗೆ ಗೊತ್ತಿದೆಯೇ? ಸಿದ್ದರಾಮಯ್ಯ title=

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೋಲು ಖಚಿತ ಎಂಬ ಕುಮಾರಸ್ವಾಮಿ ಟೀಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿಯಿಂದ ನಾನು ಪಾಠ ಕಲಿಯಬೇಕೇ? ಎಂದು ಗುಡುಗಿದರು.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪ್ರವಾಸದಲ್ಲಿರುವ ಸಿದ್ಧರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಎಷ್ಟು ಬಾರಿ ಸ್ಪರ್ಧೆ ಮಾಡಿದ್ದೇನೆ ಎಂಬುದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ? ನಾನು ಏಳು ಬಾರಿ ಸ್ಪರ್ಧೆ ಮಾಡಿ ಐದು ಬಾರಿ ಗೆದ್ದಿದ್ದೇನೆ. ಇದೆಲ್ಲವೂ ಅವರಿಗೆ ಗೊತ್ತಿದೆಯೇ? ಎಂದು ಕೆಂಡಾಮಂಡಲರಾದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯಲ್ಲಿ ನನ್ನ ವಿರುದ್ಧ ನಿಂತರು. ಆದರೆ ಗೆದ್ದವರು ಯಾರು ? ಕಡಿಮೆ ಮತಗಳ ಅಂತರದಲ್ಲಿ ನಾನು ಆಗ ಗೆದ್ದಿರಬಹುದು. ಆದರೆ ಗೆಲುವು ಗೆಲುವೇ ಅಲ್ಲವೇ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ಪಡೆಯಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲ ಮತದಾರರು ನನಗೆ ಗೊತ್ತಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ. ಅವರು ಆಶೀರ್ವಾದ ಮಾಡುವರೆಂಬ ವಿಶ್ವಾಸ ಇದೆ ಎಂದು ತಿಳಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮತದಾರರು ಅವರ ಮಾತು ಕೇಳಲಿಲ್ಲ. ಈಗ ಕೇಳುವರೇ ಎಂದರು.

ಯಡಿಯೂರಪ್ಪರ ದಿಕ್ಸೂಚಿ
ನಂಜನಗೂಡು, ಗುಂಡ್ಲುಪೇಟೆ ಮರು ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮರು ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದರು. ಹಾಗಾದರೆ ಆ ಚುನಾವಣೆ ಫಲಿತಾಂಶ ಈಗ ದಿಕ್ಸೂಚಿ ಆಗುವುದಿಲ್ಲವೇ ಎಂದು ಕೇಳುವ ಮೂಲಕ ಯದಿಯೂಪ್ಪಗೆ ಟಾಂಗ್ ನೀಡಿದರು.

ಅಮಿತ್ ಶಾ ಗೆ ತಿರುಗುಬಾಣವಾದ 'ಅಹಿಂದೂ' ಹೇಳಿಕೆ
ಸಿದ್ದರಾಮಯ್ಯ ಅಹಿಂದ ಅಲ್ಲ, ಅಹಿಂದೂ ಎಂದು ಅಮಿತ್ ಶಾ ಟೀಕಿಸಿದ್ದಾರೆ.‌ ಶಾ ಅವರು ಜೈನರು. ತಾವು ಅಹಿಂದನಾ, ಅಹಿಂದೂನ ಎಂಬುದನ್ನು ಅವರೇ ಹೇಳಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯ, ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

Trending News