ವಿಜಯಪುರ: ಮಕ್ಕಳಿಗೆ ತಿದ್ದಿ-ಬುದ್ಧಿ ಹೇಳಬೇಕಾದ ಶಿಕ್ಷಕರೊಬ್ಬರು ಶಾಲೆಗೆ ಕುಡಿದು ಟೈಟ್ ಆಗಿ ಬಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಕನ್ನೂರಿನ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಶಾಲೆಯ ಹೆಡ್ ಮಾಸ್ಟರ್ ಬಿ.ಎಸ್.ರಾಠೋಡ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಶಾಲೆ ಬಂದವರು. ಮದ್ಯಸೇವಿಸಿ ಟೈಟ್ ಆದ ಶಿಕ್ಷಕನಿಗೆ ಎಸ್‍ಡಿಎಂಸಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಬಿ ಟೀಂ: ಬಹಿರಂಗ ಚರ್ಚೆಗೆ ನಾನು ಸಿದ್ಧ ಸಮಯ, ದಿನಾಂಕ ನಾನು ನಿಗದಿ ಮಾಡಲಾ? – ಎಚ್‍ಡಿಕೆ
ಶಾಲೆಗೆ ಅನಧಿಕೃತವಾಗಿ ಗೈರಾಗುವುದು, ಒಂದು ವೇಳೆ ಶಾಲೆಗೆ ಬಂದರೆ ಕಂಠಪೂರ್ತಿ ಕುಡಿದು ಬರುವುದನ್ನೇ ದೈಹಿಕ ಶಿಕ್ಷಕರೂ ಆಗಿರುವ ರಾಠೋಡ ಹವ್ಯಾಸ ಮಾಡಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಸಾರಿ ಅವರಿಗೆ ಬುದ್ಧಿ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಪದೇ ಪದೇ ಹೇಳಿದರೂ ಕೇಳದ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಶಿಕ್ಷಕನ ಕುಡಿತದ ಚಟದ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರು ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೂ ಸಹ ಶಿಕ್ಷಕ ರಾಠೋಡ ಸರಿಯಾಗಿರಲಿಲ್ಲ. ಸೋಮವಾರ(ಜ.23) ಎಂದಿನಂತೆ ಕಂಠಪೂರ್ತಿ ಕುಡಿದು ಶಾಲೆಗೆ ತೂರಾಡಿಕೊಂಡು ಬಂದಿದ್ದರು. ಮದ್ಯ ಸೇವಿಸಿ ಬರುವ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲಲ್ಲ: ಹೊಸ ಬಾಂಬ್ ಸಿಡಿಸಿದ ಯಡಿಯೂರಪ್ಪ
ಕಳೆದ 1 ವರ್ಷದಿಂದ ಕುಡಿದು ಬರುತ್ತಿರುವ ಶಿಕ್ಷಕ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ದೈಹಿಕ ಶಿಕ್ಷಕನಾಗಿದ್ದರೂ ಒಂದು ದಿನವೂ ಮಕ್ಕಳಿಗೆ ಚಟುವಟಿಕೆಗಳನ್ನು ಮಾಡಿಸಿಲ್ಲ. ಶಾಲೆಗೆ ಬಂದರೂ ಸಹ ಒಂದು ಗಂಟೆಯಷ್ಟೇ ಇದ್ದು ವಾಪಸ್ ತೆರಳುತ್ತಾರೆ. ಹೀಗಾಗಿ ಶೀಘ್ರವೇ ಕುಡುಕ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.