ಶೆಟ್ಟಿಕೇರಿಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ!

ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದೆ. ಹಚ್ಚ ಹಸಿರಾದ ವಾತಾವರಣ ಇದೆ. ಹಾಗಾಗಿ ನೀರು ನಾಯಿಗಳು ಸುಂದರ ತಾಣ ಹುಡಿಕಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಸ್ಥಳೀಯರು ಮಾತನಾಡುತಿದ್ದಾರೆ. 

Written by - Yashaswini V | Last Updated : Jan 23, 2023, 03:37 PM IST
  • ಅದಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ವಾತಾವರಣ ಇದೆ.
  • ಮೀನು, ಏಡಿ ಪ್ರಮುಖ ಆಹಾರವಾಗಿರುವ ಈ ನೀರು ನಾಯಿಗಳು ಸದ್ಯ ಕೆರೆಯಲ್ಲಿ ತಿರುಗಾಟ ನಡೆಸುತ್ತಿವೆ.
  • ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ಎದುರು ಚಲಿಸುವ ಪ್ರಾಣಿ ಇದಾಗಿದೆ.
ಶೆಟ್ಟಿಕೇರಿಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ!  title=
Water Dog

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಶೆಟ್ಟಿ ಎಂಬ ಕೆರೆಯೊಂದರಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ಗೊತ್ತಾಗಿದ್ದೇ ತಡ ನೀರು ಕೆರೆಯಲ್ಲಿರುವ ನಾಯಿಗಳನ್ನು ನೋಡಲೆಂದು ಸುತ್ತಮುತ್ತಲಿನ ಜನ ಇಲ್ಲಿಗೆ ಆಗಮಿಸತೊಡಗಿದ್ದಾರೆ. ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದೆ. ಹಚ್ಚ ಹಸಿರಾದ ವಾತಾವರಣ ಇದೆ. ಹಾಗಾಗಿ ನೀರು ನಾಯಿಗಳು ಸುಂದರ ತಾಣ ಹುಡಿಕಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಸ್ಥಳೀಯರು ಮಾತನಾಡುತಿದ್ದಾರೆ. 

ಭಾರತದ ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಈ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸದ್ಯ ಕೆರೆಯ ಅಚ್ಚುಕಟ್ಟು ಪ್ರದೇಶ (ಸುಮಾರು 234 ಎಕರೆ) ವಿಶಾಲವಾಗಿದ್ದರಿಂದ ಇಲ್ಲಿಯೇ ಬೀಡು ಬಿಟ್ಟಿವೆ..

ಇದನ್ನೂ ಓದಿ- Mangli: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು..!

ಅದಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ವಾತಾವರಣ ಇದೆ. ಮೀನು, ಏಡಿ ಪ್ರಮುಖ ಆಹಾರವಾಗಿರುವ ಈ ನೀರು ನಾಯಿಗಳು ಸದ್ಯ ಕೆರೆಯಲ್ಲಿ ತಿರುಗಾಟ ನಡೆಸುತ್ತಿವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ಎದುರು ಚಲಿಸುವ ಪ್ರಾಣಿ ಇದಾಗಿದೆ. 

ಇದನ್ನೂ ಓದಿ- ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ ಆರ್.ಅಶೋಕ್

ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಆಗಿರುವುದರಿಂದ ಹಳ್ಳ ಕೊಳ್ಳ ತುಂಬಿ ಹರಿದು ನದಿ ಸೇರುವಾಗ ನದಿಯ ಮೂಲಕ ಬಂದು ಈ ನೀರು ನಾಯಿಗಳು ಹಳ್ಳಕ್ಕೆ ಸೇರಿಕೊಂಡಿವೆ. ಆ ಬಳಿಕ ಅಲ್ಲಿಂದ ಈ ಕೆರೆಗೆ ಬಂದಿವೆ ಎನ್ನಲಾಗುತ್ತಿದೆ. ಇಂತಹ ಅಪರೂಪ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. 

ಈ ಪ್ರಾಣಿಗಳು ನೋಡಲು ಸಿಗುವುದು ಅಪರೂಪ. ಏಕೆಂದರೆ ಈ ನೀರು ನಾಯಿಗಳು ನೀರಿನಲ್ಲಿ ಕೆಲವೊಮ್ಮೆ ತಲೆಯೆತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ನೀರಿನಲ್ಲಿ ಚಲಿಸುತ್ತವೆ. ಆಗಾಗ ಕೆರೆಯ ದಡದಲ್ಲಿ ಕಾಣುತ್ತವೆ. ಈ ಪ್ರಾಣಿ ಶೆಟ್ಟಿಕೆರೆ ಗ್ರಾಮದ ಕೆರೆಗೆ ಹೊಸ ಅತಿಥಿಯಾಗಿದೆ. ಹಾಗಾಗಿ ಅಳಿವಿನಂಚಿನಲ್ಲಿರುವ ನೀರು ನಾಯಿಯ ಚಿತ್ರವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಅಲ್ಲದೇ ಈ ಪ್ರದೇಶ ಹೆಚ್ಚಾಗಿ ಬಯಲು ಸೀಮೆಯಿಂದ ಕೂಡಿದೆ. ಇಂತಹ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಸಿಗುವುದು ತುಂಬಾ ಕಡಿಮೆ. ಹಾಗಾಗಿ ಸದ್ಯ ಶೆಟ್ಟಿ ಕೆರೆ ಚಿಕ್ಕದಾದ ಪ್ರಾಣಿ-ಪಕ್ಷಿಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಸದ್ಯ ಈ ಪ್ರದೇಶದಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡಿರುವದು ಅಚ್ಚರಿ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News