Guruvara Dina Bhavishya In Kannada: ವೈಶಾಖ ಮಾಸದ ಹುಣ್ಣಿಮೆಯ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನ ಗುರುವಾರವಾದ್ದರಿಂದ ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದಿನ. ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ...
ಮೇಷ ರಾಶಿಯವರ ಭವಿಷ್ಯ (Aries Horoscope):
ಮೇಷ ರಾಶಿಯ ಉದ್ಯೋಗಸ್ಥರಿಗೆ ಇಂದು ಉತ್ತಮ ದಿನ. ಉದ್ಯಮಿಗಳು ವ್ಯವಹಾರದಲ್ಲಿ ಬಂಪರ್ ಲಾಭವನ್ನು ಗಳಿಸಬಹುದು. ಯಾವುದೇ ಸರ್ಕಾರಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದ್ದರೆ ವಿಜಯ ನಿಮ್ಮದಾಗಲಿದೆ. ಸಹೋದರ ಸಹೋದರಿಯರಿಂದ ಸಲಹೆ ಪಡೆದು ಮುಂದುವರೆಯುವುದರಿಂದ ಶುಭ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವೃಷಭ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಇಂದು ಒಳ್ಳೆಯ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ನೀವು ಈಗಾಗಲೇ ಪಡೆದಿರುವ ಸಾಲವನ್ನು ತೀರಿಸಲು ಅನುಕೂಲವಾಗಲಿದೆ. ಆಸ್ತಿ ಸಂಬಂಧಿತ ವಿವಾದಗಳಲ್ಲಿ ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿರಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಮಿಥುನ ರಾಶಿಯ ಜನರು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಮನೆಯಿಂದ ಹೊರಡುವಾಗ ಗಣೇಶನ ಆಶೀರ್ವಾದ ಪಡೆದು ಹೋದರೆ ಜಯ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಯುವಕರು ಭಾವನಾತ್ಮಕವಾಗಿ ಕೆಲಸ ಮಾಡುವುದರ ಬದಲಿಗೆ ಯೋಚಿಸಿ ಕೆಲಸ ಮಾಡುವುದನ್ನು ಪರಿಗಣಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಕರ್ಕಾಟಕ ರಾಶಿಯವರು ಇಂದು ಕಚೇರಿ ಕೆಲಸದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರಸ್ಥರು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಿಂತನಶೀಲರಾಗಿರಿ. ಸಣ್ಣ ಪುಟ್ಟ ವಿಚಾರಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಿ.
ಇದನ್ನೂ ಓದಿ- Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಸಿಂಹ ರಾಶಿಯವರು ಇಂದು ನಿಮ್ಮ ಕಚೇರಿಯಲ್ಲಿ ಗಾಸಿಪ್ ಮಾಡುವವರ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಆರೋಗ್ಯದ ದೃಷ್ಟಿಯಿಂದ ನಿಮ್ಮ ದಿನಚರಿಯಲ್ಲಿ ಕ್ರಮಬದ್ಧತೆಯನ್ನು ತರಲು ಪ್ರಯತ್ನಿಸಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಕನ್ಯಾ ರಾಶಿಯ ವೈದ್ಯಕೀಯ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ ಜನರಿಗೆ ಇಂದು ಗಡಿಬಿಡಿ, ಗದ್ದಲ ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಪಾರದರ್ಶಕವಾಗಿರುವುದನ್ನು ಪರಿಗಣಿಸಿದರೆ ಒಳ್ಳೆಯದು.
ತುಲಾ ರಾಶಿಯವರ ಭವಿಷ್ಯ (Libra Horoscope):
ತುಲಾ ರಾಶಿಯವರು ನಿಮ್ಮ ಕಚೇರಿಯಲ್ಲಿ ಸ್ವಲ್ಪ ಜಾಗರೂಕರಾಗಿರಿ. ಆಫೀಸಿನಲ್ಲಿ ನಡೆಯುತ್ತಿದ್ದ ಮೋಜು ಮಸ್ತಿಗೆ ಕಡಿವಾಣ ಹಾಕಬೇಕಾಗುತ್ತದೆ. ಈ ಸಂಬಂಧ ಬಾಸ್‌ನಿಂದ ಕೆಲವು ಕಟ್ಟುನಿಟ್ಟಿನ ಆದೇಶಗಳನ್ನು ಸ್ವೀಕರಿಸಬಹುದು. ವ್ಯವಹಾರದಲ್ಲಿ ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃಶ್ಚಿಕ ರಾಶಿಯ ಉದ್ಯೋಗಸ್ಥರು ಮುಂಜಾನೆ ಬೇಗ ಕೆಲಸ ಆರಂಭಿಸಿ. ನೀವು ಯಾರಿಗಾದರೂ ಸಾಲ ನೀಡಿದ್ದರೆ ಕಾಲಕಾಲಕ್ಕೆ ನೆನಪಿಸಿದರಷ್ಟೇ ಆ ಹಣ ನಿಮ್ಮ ಕೈ ಸೇರಲಿದೆ. ಮಹಿಳೆಯರ ಭಾವನೆಗಳಿಗೆ ಗೌರವಿಸಿದರೆ ಒಳ್ಳೆಯದು.
ಇದನ್ನೂ ಓದಿ- Astro Tips: ಹೆಣ್ಣು ಮಾಡುವ ಈ ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿ!
ಧನು ರಾಶಿಯವರ ಭವಿಷ್ಯ (Sagittarius Horoscope):
ಧನು ರಾಶಿಯ ಜನರಿಗೆ ಇಂದು ಅಷ್ಟು ಉತ್ತಮ ದಿನವಲ್ಲ. ಉದ್ಯೋಗಸ್ಥರು ನಿಮ್ಮ ಮನಸ್ಥಿತಿಯಿಂದ ತೊಂದರೆಗೊಳಗಾಗಬಹುದು. ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಬಹುದು. ಉದ್ಯಮಿಗಳಿಗೆ ಎದುರಾಳಿಗಳು ತೊಂದರೆ ನೀಡಲು ಯೋಜಿಸಬಹುದು. ಈ ಬಗ್ಗೆ ಹುಷಾರಾಗಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಮಕರ ರಾಶಿಯ ಸ್ವಂತ ವ್ಯವಹಾರ ಮಾಡುವರಿಗೆ ಇಂದು ಲಾಭದಾಯಕ ದಿನ. ವ್ಯಾಪಾರಸ್ಥರು ಸಾರ್ವಜನಿಕ ಸಂಪರ್ಕದಿಂದ ಲಾಭ ಪಡೆಯಬಹುದು. ವೈವಾಹಿಕ ಸಂಬಂಧ ಉತ್ತಮವಾಗಿರುತ್ತದೆ. ನಿದ್ರಾಹೀನತೆಯಿಂದಾಗಿ ನೀವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಕುಂಭ ರಾಶಿಯ ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಪ್ರಗತಿ ಕಾಣಬಹುದು. ವ್ಯಾಪಾರ ವರ್ಗವು ಯಾವುದೇ ಮಹಿಳಾ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ತಪ್ಪಿಸಿ. ಸಪ್ರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಕಷ್ಟಪಟ್ಟು ಓದುವುದನ್ನು ಮರೆಯಬೇಡಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಮೀನ ರಾಶಿಯ ಉದ್ಯೋಗಸ್ಥರು ಇಂದು ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದನ್ನು ಮರೆಯಬೇಡಿ. ಇಲ್ಲದಿದ್ದರೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಬಹುದು. ಮನೆಯಲ್ಲಿ ದುಃಖದ ಪರಿಸ್ಥಿತಿಯಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.