ಎಲ್ಲರಿಗೂ ಸಿಎಂ ಆಗಬೇಕೆನ್ನುವ ಆಸೆ ಇರುತ್ತದೆ: ಜೆ.ಸಿ ಮಧುಸ್ವಾಮಿ

ಎಲ್ಲರಿಗೂ ಸಿಎಂ ಆಗೋಕೆ ಆಶೆ ಇರುತ್ತದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಸೆಯಿದೆ ಜನರು ಆಶಿರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ ಎಂದು ಚಿಕ್ಕ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು. 

Written by - Zee Kannada News Desk | Last Updated : Jul 16, 2022, 08:05 PM IST
  • ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ,
  • ಇನ್ನೂಮ್ಮೆ ಸಿಎಂ ಆಗ್ಬೇಕು ಅಂತ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜನರು ತೀರ್ಮಾನ ಮಾಡಬೇಕೆಂದು ಹೇಳಿದರು.
ಎಲ್ಲರಿಗೂ ಸಿಎಂ ಆಗಬೇಕೆನ್ನುವ ಆಸೆ ಇರುತ್ತದೆ: ಜೆ.ಸಿ ಮಧುಸ್ವಾಮಿ title=

ಚಿಕ್ಕೋಡಿ: ಎಲ್ಲರಿಗೂ ಸಿಎಂ ಆಗೋಕೆ ಆಶೆ ಇರುತ್ತದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಸೆಯಿದೆ ಜನರು ಆಶಿರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ ಎಂದು ಚಿಕ್ಕ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು. 

ಇದನ್ನೂ ಓದಿ: Kranti Movie : ಡಿ ಬಾಸ್ 'ಕ್ರಾಂತಿ' ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಚಿತಾ ರಾಮ್!

ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಇನ್ನೂಮ್ಮೆ ಸಿಎಂ ಆಗ್ಬೇಕು ಅಂತ ಆಶೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜನರು ತೀರ್ಮಾನ ಮಾಡಬೇಕೆಂದು ಹೇಳಿದರು. 

ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅನುಪಸ್ಥಿತಿ ಕಾರ್ಯಕ್ರಮ:

ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ವಿಪ್ ಜಾರಿಯಾಗಿದೆ, ಇದರಿಂದಾಗಿ ಅವರು ಬೆಂಗಳೂರಿನಲ್ಲಿ ಇದ್ದಾರೆ. ನಮಗೆ ಏರ್ಪೋರ್ಟ್ ಟಿಕೆಟ್ ಇರುವುದರಿಂದ ನಾವು ಬಂದೆವು, ಈ ಕಾರ್ಯಕ್ರಮದಲ್ಲಿ ಶಾಸಕರು ಗೈರಾಗಿದ್ದಾರೆ ಅಂತ ಸಚಿವರು ಸಮಜಾಯಿಸಿ ನೀಡಿದರು. 

ಇದನ್ನೂ ಓದಿ: ಅಪ್ಪು ಹಾದಿಯಲ್ಲಿ ಹೆಜ್ಜೆ ಹಾಕುತ್ತಿರೋ ʼಯುವʼ: ಮಂತ್ರಾಲಯಕ್ಕೆ ಭೇಟಿ ನೀಡಿದ ದೊಡ್ಮನೆ ಹುಡ್ಗ

ಕೆರೆ ತುಂಬಿಸುವ ಯೋಜನೆ: 113 ಕೋಟಿ ರೂಪಾಯಿ ಕಾಮಗಾರಿ ಮೊದಲೇ ಹಂತವಾಗಿ 43.53 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭವಾಗಿದೆ. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಯಲ್ಲಮ್ಮವಾಡಿ ಕೆರೆ ಹಾಗೂ ಇತರೆ ಎಂಟು ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಉದ್ದೇಶಿಸಲಾಗಿದ್ದು. ಯೋಜನೆಯಡಿ ಒಟ್ಟು 7 ಗ್ರಾಮಗಳ 9 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ.

ಅಥಣಿ ತಾಲೂಕಿನ ಯಲ್ಲಮ್ಮವಾಡಿ, ಬಾಡಗಿ, ಐಗಳಿ, ಕೋಹಳ್ಳಿ, ಅಡಹಳ್ಳಿ, ಆಡಾಳಹಟ್ಟಿ, ಪಡಿತರವಾಡಿ, ತೆಲಸಂಗ, ಹಾಗೂ ಅರಟಾಳ ಗ್ರಾಮಗಳಲ್ಲಿ ಮಳೆ ಅಭಾವದಿಂದ ಅಂತರ್ಜಲ ಮಟ್ಟ ಕುಸಿದು ತೆರೆದ ಬಾವಿ ಹಾಗೂ ಕೊಳವೆಬಾವಿಗಳಿಗೆ ನೀರು ಸಿಗದೆ ಇರುವದರಿಂದ ಜನ ಹಾಗೂ ಜಾನುವಾರಗಳು ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗು ಸಂಕಟ ಪಡುವ ಪರಿಸ್ಥಿತಿ ಉದ್ಭವಿಸುತ್ತದೆ. ಆದಕಾರಣ ಝುಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ (ಹಂತ – 1) ಯಲ್ಲಮ್ಮನಾಡಿ ಗ್ರಾಮದ ಹತ್ತಿರದ `ಕೆರೆಯನ್ನು ತುಂಬಿಸುವುದು ಹಾಗೂ ಬಾಡಗಿ ಗ್ರಾಮದ ರಿ.ಸ.ನಂ 55ರ ಮೊಪಕ ಗೈರಾಣು ಜಾಗೆಯಲ್ಲಿ ಹೊಸ ಕೆರೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಹಾಗೂ ಹಂತ – 2 ರಲ್ಲಿ ಯಲ್ಲಮ್ಮವಾಡಿ ಕೆರೆಯಿಂದ ನೀರನ್ನು ಎತ್ತುವಳಿ ಮಾಡಿ ಏತ ನೀರಾವರಿ ಯೋಜನೆ ಮೂಲಕ, ಬಾಡಗಿ, ಐಗಳಿ, ಕೋಹಳ್ಳಿ, ಅಡಹಳ್ಳಿ, ಅಡಳಹಟ್ಟಿ, ಹಾಗೂ ಅರಟಾಳ ಗ್ರಾಮದ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ.

ಕೃಷ್ಣಾ ನದಿಯಿಂದ ಯೋಜನೆಗೆ ಒಟ್ಟು 173 ಎಂ.ಸಿ.ಎಫ್.ಟಿ. ನೀರನ್ನು ಎತ್ತುವಳಿ ಮಾಡಿ 9 ಕೆರೆಗಳನ್ನು ತುಂಬಿಸಿ ಸುಮಾರು 11 ಗ್ರಾಮಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಬೇಸಿಗೆ ಸಮಯದಲ್ಲಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ತೋಂದರೆಯನ್ನು ನಿವಾರಿಸಲು ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News