ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಸಿಟ್ಟಾದ ಮಾಜಿ ಸಚಿವ ಎಂಟಿಬಿ ನಾಗರಾಜ್; ಸುಧಾಕರ್ ವಿರುದ್ಧ ಕಿಡಿ

ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರ ಹಾಗೂ ಸೋತ ಅಭ್ಯರ್ಥಿಗಳ ಸಭೆ ನಡೆದಿದ್ದು, ಸೋತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಮಾಜಿ ಸಚಿವ ಸುಧಾಕರ್ ಹಾಗೂ ಪಕ್ಷದ ವಿರುದ್ಧ ಕೆಂಡ ಕಾರಿದ್ದಾರೆ.

Written by - Prashobh Devanahalli | Edited by - Manjunath N | Last Updated : Jun 8, 2023, 06:52 PM IST
  • ಕಾಂಗ್ರೆಸ್ ನ ಗ್ಯಾರಂಟಿಗಳಿಂದಲೂ ಸೋಲಿನ ಬಗ್ಗೆ ಅಭಿಪ್ರಾಯ
  • ನಮ್ಮ ಪ್ರಣಾಳಿಕೆ ಕಾಂಗ್ರೆಸ್ ನವರಂತೆ ಇರಲಿಲ್ಲ
  • ನಮ್ಮ ಪ್ರಣಾಳಿಕೆ ಬಿಡುಗಡೆ ಕೂಡ ತಡವಾಯಿತು
ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಸಿಟ್ಟಾದ ಮಾಜಿ ಸಚಿವ ಎಂಟಿಬಿ ನಾಗರಾಜ್; ಸುಧಾಕರ್ ವಿರುದ್ಧ ಕಿಡಿ title=
file photo

ಬೆಂಗಳೂರು : ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರ ಹಾಗೂ ಸೋತ ಅಭ್ಯರ್ಥಿಗಳ ಸಭೆ ನಡೆದಿದ್ದು, ಸೋತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಮಾಜಿ ಸಚಿವ ಸುಧಾಕರ್ ಹಾಗೂ ಪಕ್ಷದ ವಿರುದ್ಧ ಕೆಂಡ ಕಾರಿದ್ದಾರೆ.

ಇದನ್ನೂ ಓದಿ: Loksabha Election 2024: ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದರೆ "ಕೈ" ಗಾಳ

ಸೋತ ಅಭ್ಯರ್ಥಿಗಳ ಸಭೆಯಲ್ಲಿ ಬಹಿರಂಗವಾಗಿ ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಕಾಂಗ್ರೆಸ್ ನಲ್ಲಿದ್ದಾಗ ಮೂರು ಬಾರಿ ಗೆದ್ದೆ.ಬಿಜೆಪಿಯಲ್ಲಿ ಬಂದು ಎರಡು ಬಾರಿ ನಿಂತಾಗ, ಎರಡೂ ಬಾರಿಯೂ ಸೋತೆ.ಯಡಿಯೂರಪ್ಪ ಮಾತಿಗೆ ಬಿಜೆಪಿ ಸೇರಿದೆ,ಬಿಜೆಪಿಯಲ್ಲಿ ಸ್ಪರ್ಧೆ ಮಾಡಿ ಎರಡೂ ಚುನಾವಣೆ ಸೋತೆ, ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್‌ ಫೈನಲ್ ಪಂದ್ಯ

ಮಾಜಿ ಸಚಿವ ಸುಧಾಕರ್‌ ಮೇಲೂ ಸಿಟ್ಟಾದ ಎಂಟಿಬಿ:

ಡಾ.ಸುಧಾಕರ್‌ ಗೆ ಉಸ್ತುವಾರಿ ನೀಡಿದ್ರು,ಆತನೂ ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್‌ ನಿಭಾಯಿಸಲಿಲ್ಲ.ತನ್ನ ಸೋಲಿಗೆ ಪಕ್ಷದ ಜೊತೆಗೆ ಕೆಲವು ಪ್ರಮುಖ ನಾಯಕರನ್ನು ದೂರಿದ ಎಂಟಿಬಿ ನಾಗರಾಜ್, ರಾಜ್ಯ ನಾಯಕರ ಮುಂದೆ ಕೆಂಡಾಮಂಡಲವಾದರು. ಮಾಜಿ ಸಚಿವ ಎಂಟಿಬಿ ಹಾಗೂ ಇನ್ನುಳಿದ ಸೋತ ಅಭ್ಯರ್ಥಿಗಳು ಪಕ್ಷದ ಸೋಲಿನ ಕಾರಣಗಳನ್ನ ವಿವರಿಸಿದರು. ಈ ಪೈಕಿ ಪ್ರಮುಖ ಕಾರಣಗಳು ಏನಂದರೆ...

40% ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಿಲ್ಲ,ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದ್ವಿ..

ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ

ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕೊಡುವುದನ್ನು ಕಡಿಮೆ ಮಾಡುವುದು ಪ್ರಮುಖ ಕಾರಣವೋ ಒಂದು

ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ

ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ, ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು

ಕಾಂಗ್ರೆಸ್ ನ ಗ್ಯಾರಂಟಿಗಳಿಂದಲೂ ಸೋಲಿನ ಬಗ್ಗೆ ಅಭಿಪ್ರಾಯ

ನಮ್ಮ ಪ್ರಣಾಳಿಕೆ ಕಾಂಗ್ರೆಸ್ ನವರಂತೆ ಇರಲಿಲ್ಲ

ನಮ್ಮ ಪ್ರಣಾಳಿಕೆ ಬಿಡುಗಡೆ ಕೂಡ ತಡವಾಯಿತು

ನಮ್ಮ ಪ್ರಣಾಳಿಕೆಯಲ್ಲಿ ಜನ ಮುಟ್ಟುವಂತ ಯಾವುದೇ ಸ್ಕೀಮ್ ಗಳು ಇರಲಿಲ್ಲ

ಅದನ್ನು ಜನರಿಗೆ ತಿಳಿಸಲು ಅಗತ್ಯ ಕ್ರಮ ವಹಿಸಬೇಕಿತ್ತು

ಆದರೆ ಕಾಂಗ್ರೆಸ್ ನವ್ರು ಅವರ ಗ್ಯಾರಂಟಿ ಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದ್ರು

ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಗ್ಯಾರಂಟಿ ಬಗ್ಗೆ ಜನರು ಕೇಳ್ತಿದ್ರು

ಅವ್ರು 2000 ರೂಪಾಯಿ ಕೊಡ್ತಾರೆ, ನೀವು ಕೊಡ್ತೀರಾ ಎಂದು ಪ್ರಶ್ನೆ ಮಾಡಿದ್ರು

ಕಾಂಗ್ರೆಸ್ ನ ಗ್ಯಾರಂಟಿ ಗಳನ್ನು ನಾವು ಸಮರ್ಥವಾಗಿ ಎದುರಿಸಿಲ್ಲ

ಅದಕ್ಕಾಗಿ ನಮಗೂ ಸೋಲು ಆಯ್ತು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿಗಳು ಬೇಸರ ಜೊತೆಗೆ ಕಾರಣಗಳನ್ನ ವಿವರಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News