ಬೆಂಗಳೂರು: ನಾಗಮಂಗಲದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಲ್. ಆರ್. ಶಿವರಾಮೇಗೌಡರ ಮಗಳ ವಿವಾಹಕ್ಕೆ ನೀಡಿರುವ ವಿಶೇಷ ಆಮಂತ್ರಣ ಪತ್ರದ ವಿಡಿಯೋ ಈಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿ. 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಅವರ ಪುತ್ರಿ ಕಾವ್ಯ ಹಾಗೂ ರಾಜೀವ್ ವಿವಾಹಕ್ಕೆ ವಿಜ್ರಂಭಣೆಯ ಗೀತೆ ಸಂಯೋಜನೆ ಮತ್ತು ವಿಶೇಷ ಡಿಜಿಟಲೈಜ್ಡ್ ಆಹ್ವಾನವನ್ನು ನೀಡಿದ್ದಾರೆ. ಈ ಹಿಂದೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆಯ ಆಮಂತ್ರಣದ ವಿಡಿಯೋ ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ಮಾಜಿ ಶಾಸಕರ ಮಗಳ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.