Farmers: ರೈತರಿಗೊಂದು ಗುಡ್ ನ್ಯೂಸ್: ಹನಿ ನೀರಾವರಿಗೆ 90% ಸಹಾಯಧನ!

ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೇಂದ್ರದ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ

Last Updated : Feb 6, 2021, 04:49 PM IST
  • ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ರೈತರಿಗೆ ಮೊದಲ 2 ಹೆಕ್ಟೇರ್‌ಗೆ ಶೇ.90ರಷ್ಟು ಸಬ್ಸಿಡಿ ಭಾಗ್ಯ ನೀಡಲಾಗಿದೆ.
  • ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೇಂದ್ರದ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ
  • ಹನಿ ನೀರಾವರಿ ಸಬ್ಸಿಡಿ ಪಡೆದುಕೊಳ್ಳಲು ಮಾರ್ಚ್ ಅಂತ್ಯದವರೆಗೆ ಗಡುವು ನೀಡಲಾಗಿದೆ.
Farmers: ರೈತರಿಗೊಂದು ಗುಡ್ ನ್ಯೂಸ್: ಹನಿ ನೀರಾವರಿಗೆ 90% ಸಹಾಯಧನ! title=

ಬೆಂಗಳೂರು: ಬರದ ಜಿಲ್ಲೆಗೆ 2020-21ನೇ ಸಾಲಿನಲ್ಲಿ ತೋಟಗಾರಿಕಾ ಕಾರ್ಯಕ್ರಮದಡಿ ಹನಿ ನೀರಾವರಿ ಯೋಜನೆಯನ್ನು ಸಮಗ್ರ ವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲೆಯ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ರೈತರಿಗೆ ಮೊದಲ 2 ಹೆಕ್ಟೇರ್‌ಗೆ ಶೇ.90ರಷ್ಟು ಸಬ್ಸಿಡಿ ಭಾಗ್ಯ ನೀಡಲಾಗಿದೆ.

ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ರೈತ(Farmers) ಸಂಪರ್ಕ ಕೇಂದ್ರ ಅಥವಾ ತಾಲೂಕು ಕೇಂದ್ರದ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ. ಹನಿ ನೀರಾವರಿ ಸಬ್ಸಿಡಿ ಪಡೆದುಕೊಳ್ಳಲು ಮಾರ್ಚ್ ಅಂತ್ಯದವರೆಗೆ ಗಡುವು ನೀಡಲಾಗಿದೆ.

ಬಿಜೆಪಿಯಿಂದ SC, ST, ಹಿಂದುಳಿದ ಜಾತಿಗಳಿಗೆ ಮೋಸ: ಸಿದ್ದರಾಮಯ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1288.10 ಹೆಕ್ಟೇರ್‌ (3220 ಎಕರೆ) ಗುರಿ ಹೊಂದಲಾಗಿದ್ದು, ದೇವನಹಳ್ಳಿ ತಾಲೂಕಿಗೆ 346.70 ಹೆ., ದೊಡ್ಡಬಳ್ಳಾಪುರ ತಾಲೂಕಿಗೆ 406.40 ಹೆ., ಹೊಸಕೋಟೆ ತಾಲೂಕಿಗೆ 297 ಹೆ., ನೆಲಮಂಗಲ ತಾಲೂಕಿಗೆ 238 ಹೆಕ್ಟೇರ್‌ ಗುರಿ ಇದ್ದು, ಇದುವರೆಗೆ ಜಿಲ್ಲೆಯಲ್ಲಿ 30,000 ಹೆಕ್ಟೇರ್‌ ಪೈಕಿ 10,600 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಇಡಲಾಗಿದೆ.

B.S.Yediyurappa: 'ಮೋದಿ-ಶಾ ಬೆಂಬಲ ಇರೋವರೆಗೆ ನಾನೇ ಕರ್ನಾಟಕದ ಸಿಎಂ'

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ(Drip Irrigation) ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕೆ ಅನುಗುಣವಾಗಿ ಮಾರ್ಗಸೂಚಿಯಂತೆ, ಶೇ.90 ಸಹಾಯಧನ ಹಾಗೂ ನಂತರದ 3 ಹೆಕ್ಟೇರ್‌ಗೆ ಶೇ.45 ಸಹಾಯಧನವನ್ನು ಇಲಾಖೆ ನೀಡುತ್ತಿದೆ.

MTB Nagaraj: ಸದನದಲ್ಲಿ ತಪ್ಪು ಉತ್ತರ ನೀಡಿ ಮುಜುಗರಕ್ಕೀಡಾದ ಸಚಿವ MTB ನಾಗರಾಜ್!

ಹನಿ ನೀರಾವರಿ ಯೋಜನೆಗೆ 980 ಲಕ್ಷ ರೂ. ಅನುದಾನವಿದ್ದು, 388.48 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಅಯವ್ಯಯ ಸೇರಿ ಇದುವರೆಗೂ 345.14 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ. ಪ್ರತಿ ಕುಟುಂಬದ ಫಲಾನುಭವಿಗೆ 5 ಹೆಕ್ಟೇರ್‌ ಭೂಮಿ ಮಿತಿಗೊಳಿಸಲಾಗಿದೆ.

ರಾಜ್ಯದಲ್ಲಿ ಶೀಘ್ರವೇ 1 -8 ನೇ ತರಗತಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಾವಿ, ಕೊಳವೆಬಾವಿ, ಕುಂಟೆ, ಕೃಷಿ ಹೊಂಡ ಸೇರಿದಂತೆ ನೀರಿನ ಮೂಲ ಹೊಂದಿರುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು. ಯಾವ ಬೆಳೆಗೆ ಎಷ್ಟು ಸಬ್ಸಿಡಿ? ಹಣ್ಣಿನ ಬೆಳೆಗಳಿಗೆ 3 ಹೆಕ್ಟೇರ್‌ನಲ್ಲಿ 7.5 ಎಕರೆಯಷ್ಟು ಹಣ್ಣಿನ ಬೆಳೆಗಳನ್ನು ಇಟ್ಟರೆ, ಅಂತಹ ರೈತರಿಗೆ ಶೇ.45 ಸಬ್ಸಿಡಿ ನೀಡಲಾಗುತ್ತಿದ್ದು, ತರಕಾರಿ ಮತ್ತು ವಾಣಿಜ್ಯ ಬೆಳೆಗಳಿಗೆ ಎಲ್ಲಾ ವರ್ಗದ ರೈತರಿಗೆ 2 ಹೆಕ್ಟೇರ್‌ಗೆ ಶೇ.90 ಸಹಾಯ ಧನ ನೀಡಲಾಗುತ್ತಿದೆ. 

ಇಂದು ಮಡಿಕೇರಿಗೆ ರಾಷ್ಟ್ರಪತಿ Ramnath Kovind, ತಲಕಾವೇರಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News